Advertisement

Kalaburgi: ಕೂಲಿ ಕಾರ್ಮಿಕ ಮಹಿಳೆಯರಿಬ್ಬರ ಬರ್ಬರ ಹತ್ಯೆ

04:10 PM Apr 07, 2024 | Team Udayavani |

ಕಲಬುರಗಿ: ನಗರದ ಹೊರವಲಯದ ತಾವರಗೇರಾ ಕ್ರಾಸ್ ಬಳಿಯಲ್ಲಿ ರವಿವಾರ ಬೆಳಗ್ಗೆ ಇಬ್ಬರು ಕೂಲಿಕಾರ್ಮಿಕ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

Advertisement

ಹತ್ಯೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಹತ್ಯೆಯಾದವರನ್ನು ಚಂದಮ್ಮ(45) ಹಾಗೂ ಶರಣಮ್ಮ (49) ಎಂದು ಗುರುತಿಸಲಾಗಿದೆ. ಇವರು ಸಮೀಪದ ತಾಸುಲ್ತಾನ್ಪುರ್ ಪ್ರದೇಶ ವ್ಯಾಪ್ತಿಯಲ್ಲಿ ನೆಲೆಸಿದ್ದರೆಂದು ಪ್ರಾರ್ಥಮಿಕ ತನಿಖೆ ಯಿಂದ ಗೊತ್ತಾಗಿದೆ.

ಇಬ್ಬರು ರವಿವಾರ ಬೆಳಗ್ಗೆ ಗಂಜ್ ಸಿಟಿ ಬಸ್ ನಿಲ್ದಾಣದಿಂದ ಬಸ್ ಹತ್ತಿದರೆಂದು ಮಾಹಿತಿ ಇಲ್ಲವಾಗಿದೆ. ಆದರೆ ಯಾವ ಕಾರಣಕ್ಕಾಗಿ ಹತ್ಯೆಯಾಗಿದೆ? ಯಾರು ಹತ್ಯೆ ಮಾಡಿದ್ದಾರೆ ಎನ್ನುವ ಕುರಿತು ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next