ಕಲಬುರಗಿ: ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಿಂದ ಸಾಲೆ ಬೀರನಹಳ್ಳಿ ಕಡೆಗೆ ಹೋಗುವ ಸೇತುವೆಯ ಹತ್ತಿರದಲ್ಲಿ ಮಂಗಳವಾರ ಸಂಜೆ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಮರಪಳ್ಳಿ ಗ್ರಾಮದ ನಿವಾಸಿ ರವಿ ನಾಟೀಕಾರ (28) ಎಂದು ಗುರುತಿಸಲಾಗಿದೆ. ಬೀದರ್ ರೈಲ್ವೆ ನಿಲ್ದಾಣದಲ್ಲಿ ವ್ಯಾಗನ್ನಲ್ಲಿ ಸಾಮಗ್ರಿ ಇಳಿಸುವ ಕೂಲಿ ಕೆಲಸ ಮಾಡಿಕೊಂಡಿದ್ದ. ಅದೇ ಗ್ರಾಮದ ಸುಜಾತಾ ಎಂಬುವರೊಂದಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ.
ಸೇತುವೆಯ ಹತ್ತಿರದಲ್ಲಿ ದುಷ್ಕರ್ಮಿಗಳು ಕೊಡಲಿ ಇನ್ನಿತರ ಮಾರಕಾಸ್ತ್ರಗಳಿಂದ ಮುಖ ಇನ್ನಿತರ ಕಡೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಚಿಂಚೋಳಿ ಠಾಣೆಗೆ ತಂದೆ ಸುಬ್ಬಣ್ಣ ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿದೆ.