Advertisement
ಚಂಪಾ ಕ್ರೀಡಾಂಗಣದ ಟೆನಿಸ್ ಕೋರ್ಟ್ ಒಂದರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬಲೂನ್ ಗಳನ್ನು ಹಾರಿಬಿಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಶಂಕರ, ಕೆ.ಎಸ್.ಎಲ್.ಟಿ.ಎ ಟೂರ್ನಾಮೆಂಟ್ ಪೀಟರ್ ವಿಜಯಕುಮಾರ, ಐ.ಟಿ.ಎಫ್ ಸೂಪರವೈಸರ್ ಪಂದ್ಯಾವಳಿಯ ಮೇಲ್ವಿಚಾರಕ ಶ್ರೀಲಂಕಾದ ಧಾರಕ ಎಲ್ಲವಾಲಾ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
Related Articles
Advertisement
ಕೆ.ಪಿ.ಟಿ.ಸಿ.ಎಲ್ ಎಂ.ಡಿ. ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಮಾತನಾಡಿ, ಈ ಹಿಂದೆ ತಾವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2002, 2007ರಲ್ಲಿ ಐ.ಟಿ.ಎಫ್. ಟೂರ್ನಿ ಆಯೋಜಿಸಲಾಗಿತ್ತು. ಕೋರ್ಟ್ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಇದೀಗ ಮತ್ತಷ್ಟು ಉತ್ತಮಗೊಂಡಿದೆ. ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಪ್ರಾಯೋಜಕತ್ವದ ಅವಶ್ಯವಿರುವ ಕಾರಣ ಸ್ಥಳೀಯ ಸಿಮೆಂಟ್ ಕಂಪನಿಗಳು ಮುಂದೆ ಬರಬೇಕು ಎಂದರು.
ಡಿಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಅಂತಾರಾಷ್ಟ್ರೀಯ ಟೂರ್ನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯದ ಮಕ್ಕಳಿಗೆ 3 ದಿನ ವಿಶೇಷ ತರಬೇತಿ ನೀಡಿ ಬಾಲ್ ಬಾಯ್ಸ್ ಆಗಿ ನಿಯೋಜಿಸಿದೆ. ಪಂದ್ಯ ವೀಕ್ಷಣೆ ಉಚಿತವಾಗಿ ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಬಂದು ಕ್ರೀಡಾಪಟುಗಳನ್ನು ಹುರಿದುಂಬಿಸಬೇಕು ಎಂದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನಕುಮಾರ್ ಆರ್. ಮಾತನಾಡಿ ಬೆಂಗಳೂರು ಹೊರತುಪಡಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಟೆನಿಸ್ ಕ್ರೀಡಾಪಟುಗಳು ಇದ್ದಾರೆ ಎಂದರು.
32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕೆ ತೀವ್ರ ಜಿದ್ದಾಜಿದ್ದಿನ ಆಟ ಇಂದಿನಿಂದ ಆರಂಭವಾಗಿದ್ದು, 8 ಜನ ಕ್ವಾಲಿಪೈ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐಟಿಎಫ್ ರ್ಯಾಂಕಿಂಗ್ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರ ಪ್ರವೇಶ ಪಡೆದಿದ್ದಾರೆ.
ಐಟಿಎಫ್ ಪಂದ್ಯಾವಳಿ ಡಿ.3 ರವರೆಗೆ ನಡೆಯಲಿದೆ.