ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಭಾರಿ ಮಳೆಯ ಮಧ್ಯೆ ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿ ಆರು ಜನರಿಗೆ ಗಾಯಗಳಾದ ಘಟನೆ ಸಂಭವಿಸಿದೆ.
ದಿಗ್ಗಾಂವ್ ಗ್ರಾಮದ ಭೀಮು ಪೂಜಾರಿ (18) ಸಿಡಿಲಿಗೆ ಬಲಿಯಾದ ಯುವಕ ಎಂದು ಗುರುತಿಸಲಾಗಿದೆ.ಇದೇ ವೇಳೆಯಲ್ಲಿ ಕೋಡ್ಲಾ ಮತ್ತು ದಿಗ್ಗಾಂವ್ ಗ್ರಾಮದ ಮಧ್ಯೆ ಸಿಡಿಲು ಬಡಿದು ಆರು ಜನ ಗಂಭೀರ ಗಾಯಗೊಂಡಿರುವ ಘಟನೆಯೂ ನಡೆದಿದೆ.ಗಾಯಗಳನ್ನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ
ರಾಜ್ಯದ ಕಲಬುಗಿಯೂ ಸೇರಿದಂತೆ ಹಲವುಜಿಲ್ಲೆಯಲ್ಲಿ ಸಂಜೆ ಆಥವಾ ತಡ ರಾತ್ರಿ ಭಾರಿ ಮಳೆ, ಬಿರುಗಾಳಿ ಮತ್ತು ಸಿಡಿಲು ಬೀಳುವ ಸಾಧ್ಯತೆ ಇದ್ದು, ಜನರು ಜಾನುವಾರು ಹಾಗೂ ತಮ್ಮ ಜೀವಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದರು. ಜಿಲ್ಲಾಡಳಿತ ಬುಧವಾರ ಸಂಜೆ ಈ ಮಾಹಿತಿ ಮಾಧ್ಯಮಗಳಿಗೆ ಹಂಚಿತ್ತು. ಆದರೆ ಈ ಕುರಿತು ಪ್ರಚಾರ ಸಾಧ್ಯವಾಗುವ ಸಮಯ ಅದಾಗಿರಲಿಲ್ಲ.