Advertisement

ಶರಣಬಸವೇಶ್ವರ ಯಾತ್ರೋತ್ಸವ 12ರಿಂದ

03:57 PM Mar 08, 2020 | Naveen |

ಕಲಬುರಗಿ: ದಾಸೋಹ ಭಂಡಾರಿ ಶರಣಬಸವೇಶ್ವರರ 198ನೇ ಯಾತ್ರಾ ಮಹೋತ್ಸವ ನಿಮಿತ್ತ ಮಾ. 12ರಂದು ಸಂಜೆ 6ಕ್ಕೆ ಉಚ್ಚಾಯಿ ಮತ್ತು ಮಾ. 13ರಂದು ಸಂಜೆ 6ಕ್ಕೆ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

Advertisement

ಯಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಸಾಂಸ್ಕೃತಿಕ, ಶಿವಾನುಭವ ಉಪನ್ಯಾಸ ಮಾಲಿಕೆ, ವಿಶೇಷ ಸಂಗೀತ ಕಾರ್ಯಕ್ರಮಗಳು ದಾಸೋಹ ಭಂಡಾರಿ ಶರಣಬಸವರ ಮಹಾದಾಸೋಹ ಜೀವನ ಕುರಿತು ಡಾ| ಎಚ್‌. ತಿಪ್ಪೇರುದ್ರಸ್ವಾಮಿ ರಚಿಸಿರುವ “ಚಿತ್ತಲೋಕದ ಚಿದೆºಳಗು’ ಕಾದಂಬರಿ ಆಧರಿಸಿ ವಿಶೇಷ ಉಪನ್ಯಾಸ ಮಾಲಿಕೆ ಮಾ. 9ರಿಂದ ಮಾ. 14ರ ವರೆಗೆ ಪ್ರತಿನಿತ್ಯ ಸಂಜೆ 5ಗಂಟೆಯಿಂದ 8 ಗಂಟೆ ವರೆಗೆ ನಡೆಯಲಿವೆ.

ಶರಣಬಸವೇಶ್ವರ ಸಂಸ್ಥಾನ, ಮಹಾ ದಾಸೋಹದ ಪೀಠಾಧಿ ಪತಿ, ಶರಣ ಬಸವ ವಿಶ್ವವಿದ್ಯಾಲಯ ಕುಲಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಅಖೀಲ ಭಾರತ ಶಿವಾನುಭವ ಮಂಟಪದ ಅಧ್ಯಕ್ಷ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಮಾ. 9ರಂದು “ಆವಿರ್ಭಾವ’ ವಿಷಯ ಕುರಿತು ಶರಣಬಸವ ವಿವಿ ಕನ್ನಡ ಉಪನ್ಯಾಸಕಿ ಡಾ| ಸಾರಿಕಾದೇವಿ ಕಾಳಗಿ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಡಿ.ಟಿ. ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ. 10ರಂದು “ಆವಿಷ್ಕಾರ’ ಕುರಿತು ಶರಣಬಸವ ವಿವಿ ಕನ್ನಡ ಉಪನ್ಯಾಸಕ ಡಾ| ನಾನಾಸಾಹೇಬ ಹಚ್ಚಡದ ಉಪನ್ಯಾಸ ನೀಡಲಿದ್ದಾರೆ.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ
ಪದವಿ ಮಹಾ ವಿದ್ಯಾಲಯ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ. 11ರಂದು “ಅನುಸಂಧಾನ’ ಕುರಿತು ಬಸವಕಲ್ಯಾಣದ ಬಸವೇಶ್ವರ ಪದವಿ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಪ್ರೊ| ಕ್ಷೇಮಲಿಂಗ ಬಿರಾದಾರ ಉಪನ್ಯಾಸ ನೀಡಲಿದ್ದಾರೆ. ಗೋದುತಾಯಿ ಬಿ.ಎಡ್‌ ಮಹಾ ವಿದ್ಯಾಲಯದ ಪ್ರಾಚಾರ್ಯೆ ಡಾ| ಬಸವರಾಜೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ಮಾ. 12ರಂದು “ಅನುಭೂತಿ’ ಕುರಿತು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾ ವಿದ್ಯಾಲಯ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ಬಿ.ಎಡ್‌ ಮಹಾ ವಿದ್ಯಾಲಯ ಪ್ರಾಚಾರ್ಯೆ ಡಾ| ಗೀತಾ ಹರವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ. 13ರಂದು “ಕಲ್ಯಾಣಮಾರ್ಗ’ ಕುರಿತು ಎಂ.ಎಸ್‌.ಐ ಪದವಿ ಪೂರ್ವ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ| ಸೋಮಶಂಕ್ರಯ್ಯ ವಿಶ್ವನಾಥಮಠ ಉಪನ್ಯಾಸ ನೀಡಲಿದ್ದಾರೆ.

ಶರಣಬಸವೇಶ್ವರ ವಾಣಿಜ್ಯ ಪದವಿ ವಿದ್ಯಾಲಯ ಪ್ರಾಚಾರ್ಯ ಡಾ| ಎನ್‌.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ. 14ರಂದು “ದಿವ್ಯ ದಾಸೋಹ ದೀಪ್ತಿ’ ಕುರಿತು ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ| ಶಿವರಾಜ ಶಾಸ್ತ್ರೀ ಹೇರೂರ ಉಪನ್ಯಾಸ ನೀಡಲಿದ್ದಾರೆ. ಶರಣಬಸವೇಶ್ವರ ವಿಜ್ಞಾನ ಪದವಿ ಮಹಾ ವಿದ್ಯಾಲಯ ಪ್ರಾಚಾರ್ಯ ಡಾ| ಎಸ್‌.ಜಿ. ಡೊಳ್ಳೇಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಗೀತ ಅಕಾಡೆಮಿ ಉಪನ್ಯಾಸಕರಾದ ಪ್ರೊ| ರೇವಯ್ಯ ವಸ್ತ್ರದಮಠ, ಡಾ| ಎಂ.ಎಸ್‌. ಪಾಟೀಲ, ಡಾ| ಸೀಮಾ ಪಾಟೀಲ, ಡಾ| ಛಾಯಾ ಭರತನೂರ, ಡಾ| ಕಲಾವತಿ ದೊರೆ, ಪ್ರೊ| ಷಣ್ಮುಖ ಪಾಟೀಲ, ಪ್ರೊ| ಚನ್ನಬಸವ ಹಾಗೂ ವಿದ್ಯಾರ್ಥಿನಿ ಕು.ಚನ್ನಮ್ಮ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next