Advertisement

ಮನ ಪರಿವರ್ತನೆಗೆ ಮೌನ ಕ್ರಾಂತಿ

11:39 AM Dec 11, 2019 | Naveen |

ಕಲಬುರಗಿ: ತಾಂಡಾಗಳಲ್ಲಿ ಕಳ್ಳ ಭಟ್ಟಿ ಸಾರಾಯಿ, ಸಾರಾಯಿ-ಮಧ್ಯ ಕುಡಿತದ ಹಾವಳಿ ಹೆಚ್ಚು. ಹೀಗಾಗಿ ಅನಗತ್ಯವಾಗಿ ಜಗಳ ನಡೆದು ಅಶಾಂತಿಗೆ ಕಾರಣ ಆಗುತ್ತಿದೆ. ಇವೆಲ್ಲವುಗಳಿಗೆ ಕಡಿವಾಣ ಹಾಕಲು ಕರ್ನಾಟಕ -ಮಹಾರಾಷ್ಟ್ರ ಗಡಿಯ ಐದು ತಾಂಡಾಗಳಲ್ಲಿ ಮೌನ ಕ್ರಾಂತಿಯೇ ನಡೆದಿದೆ.

Advertisement

ಕರ್ನಾಟಕ-ಮಹಾರಾಷ್ಟ್ರ ಗಡಿಯ ಅರ್ಜುಣಗಿ ತಾಂಡಾ, ದುಧನಿಯ ಗಾಂಧಿ ನಗರ  ತಾಂಡಾ, ಮೇತ್ರೆ ತಾಂಡಾ 1-ಮೇತ್ರೆ ತಾಂಡಾ-2, ಶಿವಾಜಿ ನಗರ ಎನ್ನುವ ತಾಂಡಾಗಳೇ ಮಧ್ಯ ಮುಕ್ತವಾಗಿ, ಅಭಿವೃದ್ಧಿಯತ್ತ ಮುಖ ಮಾಡುತ್ತಿವೆ. ಇದೆಲ್ಲ ಸಾಧ್ಯವಾಗಿರುವುದು ಮೌನ ಯೋಗಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಸಂಕಲ್ಪದಿಂದ.

ಜಿಲ್ಲೆಯ ಗಡಿಗ್ರಾಮ ನಿಂಬಾಳ ಶಾಂತಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಜಡೆಯ ಶಾಂತಲಿಂಗೇಶ್ವರ ಮಹಾ ಸ್ವಾಮೀಜಿ ಈಗಾಗಲೇ ನಿಂಬಾಳ ಗ್ರಾಮವನ್ನು ಮದ್ಯ ಮುಕ್ತವನ್ನಾಗಿಸಿ ಆರು ವರ್ಷಗಳೇ ಕಳೆದಿವೆ. ಇದರ ಜತೆಯಲ್ಲಿ ಮತ್ತೈದು ತಾಂಡಾಗಳು ಮದ್ಯಮುಕ್ತವಾಗಿ ವರ್ಷ ಕಳೆದಿರುವ ಪ್ರಯುಕ್ತ ಮಂಗಳವಾರ ಮಹಾರಾಷ್ಟ್ರದ ದುಧನಿಯ ಗಾಂಧಿ  ನಗರ ತಾಂಡಾದಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಮಧ್ಯಮುಕ್ತ ಐದು ತಾಂಡಾಗಳಲ್ಲದೇ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕು, ಕರ್ನಾಟಕದ ಆಳಂದ, ಅಫ‌ಜಲಪುರ ತಾಲೂಕಿನ ಹಲವಾರು ತಾಂಡಾಗಳ ಸಾವಿರಾರು ಜನರು ಪಾಲ್ಗೊಂಡಿದ್ದರು. ನಾವು ಜೀವನುದ್ದಕ್ಕೂ ಮದ್ಯ ಮುಟ್ಟುವುದಿಲ್ಲ ಎನ್ನುವ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.

ಮಹಾರಾಷ್ಟ್ರ ಅಹ್ಮದ ನಗರ ಜಿಲ್ಲೆಯ ಹಿವರೇ ಬಜಾರ್‌ನ ಸರಪಂಚ, ಆದರ್ಶ ಗ್ರಾಮದ ರೂವಾರಿ ಪೋಪಟರಾವ್‌ ಪವಾರ, ಕಲಬುರಗಿ ಪಾಲಿಕೆ ಆಯುಕ್ತರಲ್ಲದೇ ನಾಡಿನ ಅನೇಕ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು.

Advertisement

ಮಾದರಿ ಕಾರ್ಯ: ಕಲಬುರಗಿ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಮಾತನಾಡಿ, ಮೌನಯೋಗಿಗಳು ತಾಂಡಾಗಳನ್ನು ವ್ಯಸನಮುಕ್ತರನ್ನಾಗಿ ಮಾಡಿರುವುದು ಮಾದರಿ ಹಾಗೂ ಸಮಾಜಮುಖೀ ಕಾರ್ಯವಾಗಿದೆ ಎಂದರು. ನಂತರ ನೀರಿನ ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು.

ಸರಪಂಚ ಪೋಪಟ್‌ರಾವ್‌ ಪವಾರ ಮಾತನಾಡಿ, ತಮ್ಮ ಹಿವರೇ ಬಜಾರ್‌ನ್ನು ರಾಷ್ಟ್ರದಲ್ಲೇ ಆದರ್ಶ ಗ್ರಾಮವನ್ನಾಗಿಸಿದ ಹಾಗೂ ದುಶ್ಚಟಗಳ ನಿವಾರಣೆ ಜತೆಗೆ ಯಶಸ್ವಿ ಕೃಷಿ ಕಾಯಕ ಕೈಗೊಳ್ಳುವ ಕುರಿತು ವಿವರಣೆ ನೀಡಿದರು. ಡಾ| ಶಿವರತ್ನ ಶೆಠೆ ಉಪನ್ಯಾಸ ನೀಡಿದರು.

ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೊಬ್ಬುರ ಬಿ. ವಾಡಿಯ ಬಳಿರಾಮ ಮಹಾರಾಜ್‌, ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ, ಮಸೂತಿಯ ಭುಕುಮಾರ ಸ್ವಾಮೀಜಿ, ಯಲಬುರ್ಗಾ ಬಸವಲಿಂಗ ಸ್ವಾಮೀಜಿ, ಮೂಡಿಯ ಸದಾಶಿವ ಸ್ವಾಮೀಜಿ, ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಳೇದ ಗುಡ್ಡ ಕಾಶೀನಾಥ ಸ್ವಾಮೀಜಿ, ಬಳೂರ್ಗಿಯ ಶಂಭುಲಿಂಗ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಸಿನ್ನೂರ ಸ್ವಾಮೀಜಿ ಪಾಲ್ಗೊಂಡಿದ್ದರು.

ಅಕ್ಕಲಕೋಟ ಸಿಪಿಐ ವಿಜಯ ಜಾಧವ, ಸಾಧಿಕ ವಳಸಂಗಕರ, ಹರಿಶ್ಚಂದ್ರ ರಾಠೊಡ, ಲಾಲು ಪವಾರ, ಧನಸಿಂಗ್‌ ಚವ್ಹಾಣ, ಗೋಪಿ ರಾಠೊಡ, ಸುರೇಶ ರಾಠೊಡ, ಲಕ್ಷ್ಮಣ ರಾಠೊಡ, ಧನಸಿಂಗ್‌ ಜಾಧವ್‌, ಧೇನು ರಾಠೊಡ, ಸರಪಂಚ ಮಲ್ಲಮ ಹೌದೆ, ಅಶೋಕ ರಾಠೊಡ, ರಾಜಶೇಖರ ಸೋಳಸೆ, ಶಿವಾನಂದ ಬಿರಾಜದಾರ, ಸಿದ್ದಣ್ಣ ಗುಳಗೊಂಡ, ಸಾತಲಿಂಗ ತುಪ್ಪದ, ರಾಜಶೇಖರ ಕೌಂಚಿ ಮುಂತಾದವರಿದ್ದರು.

ಫೋಮು ರಾಠೊಡ ಪ್ರಾಸ್ತಾವಿಕವಾಗಿಮಾತನಾಡಿದರು. ಶಂಕರ ರಾಠೊಡ, ಮಲ್ಲಿನಾಥ ಎಂಟಮನಿ ನಿರೂಪಿಸಿದರು, ಗಣೇಶ ಪವಾರ ವಂದಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಮೌನಯೋಗಿಗಳ ನೇತೃತ್ವದಲ್ಲಿ ತಾಂಡಾಗಳಲ್ಲಿ ಪ್ರಭಾತಪೇರಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next