Advertisement

ರೈಲ್ವೇ ನಿಲ್ದಾಣ ಸೌಂದರ್ಯೀಕರಣಕ್ಕೆ

11:56 AM Jan 29, 2020 | Naveen |

ಕಲಬುರಗಿ: ನಗರದ ರೈಲ್ವೆ ನಿಲ್ದಾಣದ ಸೌಂದರ್ಯೀಕರಣ ಹಾಗೂ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ 100 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭ, ವರ್ಟಿಕಲ್‌ ಗಾರ್ಡನ್‌ (ಲಂಬ ಉದ್ಯಾನ್‌) ಮತ್ತು ಹವಾನಿಯಂತ್ರಿತ ಕೋಣೆಗೆ ಸಂಸದ ಡಾ| ಉಮೇಶ ಜಾಧವ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಕಲಬುರಗಿ ರೈಲ್ವೆ ನಿಲ್ದಾಣ ಮುಂದುಗಡೆ 100 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭ, ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಕೊಠಡಿ ಉದ್ಘಾಟನೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಕಲಬುರಗಿ ಮಾತ್ರವಲ್ಲದೆ ಲಾತೂರ್‌, ಅಹಮದಾಬಾದ್‌ ನಗರಗಳ ರೈಲ್ವೆ ನಿಲ್ದಾಣಗಳಲ್ಲಿಯೂ ಈಗಾಗಲೇ 100 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭ ಉದ್ಘಾಟನೆಯಾಗಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲ ರೈಲು ನಿಲ್ದಾಣಗಳ ಎದುರು 100 ಅಡಿ ಉದ್ದದ ಧ್ವಜಸ್ತಂಭ ಉದ್ಘಾಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು.

ಇದೇ ವೇಳೆ ವಿಮಾನ ನಿಲ್ದಾಣ ಜಾಗದಲ್ಲಿದ್ದ ಸಂತ ಸೇವಾಲಾಲ ಮಂದಿರ ಧ್ವಂಸದ ಕುರಿತು
ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕೆಂದು ಒತ್ತಾಯಿಸಿದರು.ಸಂತ ಸೇವಾಲಾಲ ಮಂದಿರ ಧ್ವಂಸದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಈ ವಿಷಯದಲ್ಲಿ ರಾಜಕೀಯ ಮಾಡದೇ ತನಿಖೆ ನಡೆಸಬೇಕು. ಸಮಾಜ ಬಾಂಧವರನ್ನು ಸಮಾಧಾನಗೊಳಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದೇನೆ ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಐಜಿಪಿ ಮನೀಷ ಖರ್ಬೇಕರ್‌, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶೈಲೇಶ ಗುಪ್ತಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next