Advertisement

ಸಿದ್ದು, ಡಿಕೆಶಿ ಪ್ರಯಾಣಿಸುತ್ತಿದ್ದ ವಿಮಾನ ತಡವಾಗಿ ಲ್ಯಾಂಡ್‌

04:04 PM Nov 22, 2021 | Team Udayavani |

ಕಲಬುರಗಿ: ಹವಾಮಾನ ವೈಪರೀತ್ಯಹಿನ್ನೆಲೆಯಲ್ಲಿ ಕಲಬುರಗಿ ವಿಮಾನನಿಲ್ದಾಣದಲ್ಲಿ ರವಿವಾರ ಎರಡುವಿಮಾನಗಳ ಲ್ಯಾಂಡಿಂಗ್‌ ಸಾಧ್ಯವಾಗದೇಮಾರ್ಗ ಬದಲಾವಣೆ ಮಾಡಿಹೈದ್ರಾಬಾದ್‌ ವಿಮಾನ ನಿಲ್ದಾಣದಲ್ಲಿಇಳಿದಿವೆ. ಅಲ್ಲದೇ, ವಿಪಕ್ಷ ನಾಯಕಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ ಅವರಿದ್ದ ಮತ್ತೂಂದುವಿಶೇಷ ವಿಮಾನ ಕೂಡ ತಡವಾಗಿಲ್ಯಾಂಡ್‌ ಆಗಿದೆ.

Advertisement

ನಗರದಲ್ಲಿ ರವಿವಾರ ಬೆಳಗಿನ ಜಾವಮಳೆ ಸುರಿದಿತ್ತು. ನಂತರ ದಿನವಿಡೀಮೋಡ ಕವಿದ ವಾತಾವರಣ ಇತ್ತು.ಪರಿಣಾಮ ಬೆಳಗ್ಗೆ ಬೆಂಗಳೂರಿನಿಂದಬಂದ ವಿಮಾನ ಮತ್ತು ಮಧ್ಯಾಹ್ನತಿರುಪತಿಯಿಂದ ಬರಬೇಕಿದ್ದ ಮತ್ತೂಂದುವಿಮಾನ ಇಲ್ಲಿನ ವಿಮಾನ ನಿಲ್ದಾಣದಲ್ಲಿಇಳಿಯಲು ಸಾಧ್ಯವಾಗಲಿಲ್ಲ.ಬೆಂಗಳೂರಿನಿಂದ ಬೆಳಗ್ಗೆ 8:40ಕ್ಕೆಹೊರಟ್ಟಿದ್ದ ಸ್ಟಾರ್‌ ಏರ್‌ ವಿಮಾನ ಇಲ್ಲಿ9:45ಕ್ಕೆ ಬಂದಿಳಿಯಬೇಕಿತ್ತು. ಆದರೆ,ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿವಿಮಾನ ಇಳಿಯಲು ಸಾಧ್ಯವಾಗದೇಹೈದ್ರಾಬಾದ್‌ ವಿಮಾನ ನಿಲ್ದಾಣದತ್ತಮಾರ್ಗ ಬದಲಾವಣೆ ಮಾಡಿತು.

ಈ ವಿಮಾನದಲ್ಲಿ ಶಾಸಕರಾದ ಡಾ|ಅಜಯಸಿಂಗ್‌, ಪ್ರಿಯಾಂಕ್‌ ಖರ್ಗೆ,ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣಕೂಡ ಇದ್ದರು. ಹೈದ್ರಾಬಾದ್‌ನಲ್ಲಿಲ್ಯಾಂಡ್‌ ಆದ ಕಾರಣದ ಅಲ್ಲಿಂದ ರಸ್ತೆಮೂಲಕ ಕಲಬುರಗಿಗೆ ಬಂದರು.ಮಧ್ಯಾಹ್ನ ಕೂಡ ಸುಮಾರು ಹೊತ್ತುತುಂತುರು ಮಳೆ ಸುರಿಯಿತು. ಆದ್ದರಿಂದತಿರುಪತಿಯಿಂದ ಮಧ್ಯಾಹ್ನ 2:55ಕ್ಕೆಕಲಬುರಗಿಗೆ ಹೊರಟಿದ್ದ ಮತ್ತೂಂದುಸ್ಟಾರ್‌ ಏರ್‌ ವಿಮಾನ ಕೂಡ ಇಲ್ಲಿನವಿಮಾನ ನಿಲ್ದಾಣದಲ್ಲಿ ಇಳಿಯಲುಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದಲ್ಲಿಪ್ರತಿಕೂಲ ವಾತಾವರಣ ನಿರ್ಮಾಣದಮಾಹಿತಿ ಅರಿತು ಮಾರ್ಗ ಮಧ್ಯದಲ್ಲೇಹೈದ್ರಾಬಾದ್‌ನತ್ತ ತೆರಳಿತು. ಈ ವಿಮಾನಕಲಬುರಗಿಯಲ್ಲಿ ಮಧ್ಯಾಹ್ನ 3:55ಕ್ಕೆಲ್ಯಾಂಡ್‌ ಆಗಬೇಕಿತ್ತು.

ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ ವಿಶೇಷ ವಿಮಾನದಮೂಲಕ ಕಲಬುರಗಿಗೆ ಬಂದರು.ಆದರೆ, ಹವಾಮಾನ ವೈಪರೀತ್ಯಕಾರಣ ನಿಗದಿತ ಸಮಯಕ್ಕಿಂತಅರ್ಧ ಗಂಟೆ ತಡವಾಗಿ ವಿಮಾನಕ್ಕೆಬಂದಿಳಿಯಿತು. ಬೆಂಗಳೂರಿನಿಂದ ಸಂಜೆ4 ಗಂಟೆ ಸುಮಾರಿಗೆ ಈ ವಿಶೇಷ ವಿಮಾನಹೊರಟಿತ್ತು.

ಪ್ರತಿಕೂಲ ವಾತಾವರಣಹಿನ್ನೆಯಲ್ಲಿ ಸಿಗ್ನಲ್‌ ಸಮಸ್ಯೆ ಕಾರಣಕಲಬುರಗಿ ಬದಲಾಗಿ ಹೈದ್ರಾಬಾದ್‌ನಲ್ಲಿಲ್ಯಾಂಡ್‌ ಮಾಡಲು ನಿರ್ಧರಿಸಲಾಗಿತ್ತುಎಂಬ ಮಾಹಿತಿ ಲಭ್ಯವಾಗಿದೆ.ಇನ್ನು, ವಿಮಾನ ನಿಲ್ದಾಣದಿಂದ ನಿತ್ಯವೂಬೆಂಗಳೂರು, ತಿರುಪತಿ ಮತ್ತು ದೆಹಲಿಗೆವಿಮಾನಗಳ ಹಾರಾಟ ನಡೆಸುತ್ತಿದ್ದು,ಅಂದಾಜು 300 ಪ್ರಯಾಣಿಕರುಸಂಚರಿಸುತ್ತಾರೆ. ಆದರೆ, ರವಿವಾರಬೆಂಗಳೂರು-ಕಲಬುರಗಿ ನಡುವಿನ 72ಸೀಟು ಸಾಮರ್ಥಯದ ಒಂದೇ ವಿಮಾನಹಾರಾಟ ನಡೆಸಿದೆ. ಬೆಂಗಳೂರಿಂದ 63ಜನ ಬಂದಿಳಿದ್ದು, ಇಲ್ಲಿಂದ 67 ಮಂದಿಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಬೆಳೆಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next