Advertisement

ಭೂಕಂಪ ಭಯ ಬೇಡ-ಮುನ್ನೆಚ್ಚರಿಕೆ ಇರಲಿ

02:21 PM Oct 17, 2021 | Team Udayavani |

ಕಲಬುರಗಿ/ಕಾಳಗಿ: ಭೂಕಂಪ ನಿಸರ್ಗದಲ್ಲಾಗುವಬದಲಾವಣೆ. ಪ್ರಕೃತಿ ವಿಕೋಪ. ಪ್ರಕೃತಿ ತಡೆಯುವಶಕ್ತಿ ಯಾವ ವಿಜ್ಞಾನಿಗಳಿಂದಲೂ ಆಗುವುದಿಲ್ಲ.ಆದ್ದರಿಂದ ಭೂಕಂಪದ ಬಗ್ಗೆ ಭಯ ಬೇಡ,ಮುನ್ನಚ್ಚರಿಕೆ ಇರಲಿ. ಜಿಲ್ಲಾಡಳಿತ ನಿಮ್ಮೊಂದಿಗಿದೆಎಂದು ಜಿಲ್ಲಾ ಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ನಾÕ ಗ್ರಾಮಸ್ಥರಿಗೆ ಅಭಯ ನೀಡಿದರು.

Advertisement

ತಾಲೂಕಿನ ಹೊಸ್ಸಳ್ಳಿ(ಎಚ್‌) ಗ್ರಾಮದ ನಂದಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ”ಜಿಲ್ಲಾ ಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಿಕ್ಟರ್‌ ಮಾಪನದಲ್ಲಿ ಭೂಕಂಪನದ ತೀವ್ರತೆ4.3ರ ವರೆಗೆ ಆಗಿರುವುದರಿಂದ ಭಯಪಡುವಅಗತ್ಯವಿಲ್ಲ.

ತೀವ್ರತೆ ಪ್ರಮಾಣ 5ಕ್ಕಿಂತ ಹೆಚ್ಚಾದರೆಮನೆ, ಕಟ್ಟಡ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗುವಸಾಧ್ಯತೆಗಳು ಹೆಚ್ಚು. ರವಿವಾರ ಎನ್‌ಜಿಆರ್‌ವಿವಿಜ್ಞಾನಿಗಳ ತಂಡ ಜಿಲ್ಲೆಗೆ ಬರಲಿದ್ದು, ಯಾವಕಾರಣದಿಂದ ಈ ಪ್ರದೇಶದಲ್ಲಿ ಭೂಕಂಪಸಂಭವಿಸುತ್ತಿದೆ ಎನ್ನುವ ಕುರಿತು ಪತ್ತೆ ಹಚ್ಚಲಿದ್ದಾರೆಎಂದು ತಿಳಿಸಿದರು.ಸಾರ್ವಜನಿಕರೊಂದಿಗೆ ಬೆರೆತ ಜಿಲ್ಲಾಧಿ ಕಾರಿಗಳುಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ನಂತರ ಜನತೆಯ ಸಹಕಾರ ಇದ್ದರೇ ಎಂತಹ ದೊಡ್ಡಸಮಸ್ಯೆ ಎದುರಾದರೂ ಪರಿಹರಿಸಲು ಸಾಧ್ಯ.ಅಲ್ಲದೇ ಗ್ರಾಮ ವಾಸ್ತವ್ಯದ ಮೂಲ ಉದ್ಧೇಶಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗಬೇಕುಎನ್ನುವುದು. ಈ ನಿಟ್ಟಿನಲ್ಲಿ “ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಕಡೆ’ ವಿನೂತನ ಕಾರ್ಯಕ್ರಮ ವಾಗಿದೆ. ಸಮಸ್ಯೆಗಳ ಬಗ್ಗೆಅರ್ಜಿ ಸಲ್ಲಿಸಿದವರಿಗೆ ಖಂಡಿತ ವಾಗಿಯೂ ಪರಿಹಾರದೊರಕುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next