ಕಲಬುರಗಿ: ರಾಜ್ಯಕ್ಕೆ ಬರಬೇಕಿದ್ದ ಕೇಂದ್ರಸರ್ಕಾರದ ಜಿಎಸ್‌ಟಿ ಪಾಲು ಮತ್ತುಅನುದಾನ ಬಿಡುಗಡೆಯಲ್ಲಿ ಪ್ರಧಾನಿನರೇಂದ್ರ ಮೋದಿಯಿಂದ ಅನ್ಯಾಯವಾಗಿದೆ.
ಕರ್ನಾಟಕದಿಂದ 25 ಸಂಸದರನ್ನು ಆಯ್ಕೆಮಾಡಿ ಕಳುಹಿಸಿದರೂ ಇದರ ಬಗ್ಗೆ ಅವರು ಧ್ವನಿ ಎತ್ತುತ್ತಿಲ್ಲ. ರಾಜ್ಯ ಬಿಜೆಪಿಯವರು ಗುಲಾಮಗಿರಿಗೆಒಳಗಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿಜಾರಿ ವೇಳೆ ಮಾಡಿಕೊಂಡ ಒಪ್ಪಂದದಂತೆಕೇಂದ್ರ ಸರ್ಕಾರ ರಾಜ್ಯಕ್ಕೆ ಆಗುವ ನಷ್ಟವನ್ನು 2022ರವರೆಗೂ ಭರ್ತಿ ಮಾಡಿಕೊಡಬೇಕು.ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ಪಾಲಿನಹಣ ಕೊಡುವ ಆಸಕ್ತಿಯೇ ಇಲ್ಲ. 15ನೇಹಣಕಾಸು ಆಯೋಗದ ಅನುದಾನದಲ್ಲಿಗಣನೀಯವಾಗಿ ಕಡಿಮೆ ಮಾಡಿದ್ದಾರೆ ಎಂದರು.
14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆಶೇ.4.71ರಷ್ಟು ಪರಿಹಾರ ಕೊಡಬೇಕಿತ್ತು. ಆದರೆ, 15ನೇಹಣಕಾಸು ಆಯೋಗದಲ್ಲಿ ಶೇ.1.67ರಷ್ಟು ಕಡಿತ ಮಾಡಿಶೇ.3.64ರಷ್ಟು ಮಾತ್ರ ನಷ್ಟ ಪರಿಹಾರ ಅನುದಾನ ಕೊಡಲು ಮುಂದಾಗಿದೆ.
ಇದರಿಂದ ರಾಜ್ಯಕ್ಕೆ 78 ಸಾವಿರಕೋಟಿ ರೂ. ಬದಲು 40 ಸಾವಿರ ಕೋಟಿ ರೂ. ಮಾತ್ರಬರಲಿದೆ. ಅಲ್ಲದೇ, ರಾಜ್ಯಕ್ಕೆ ಬರಬೇಕಿದ್ದ 5,495 ಕೋಟಿರೂ. ವಿಶೇಷ ಪರಿಹಾರ ಕೊಡಲು ನಿರಾಕರಿಸಿದ್ದಾರೆ.
ಇದರಿಂದ ಸುಮಾರು 40 ಸಾವಿರ ಕೋಟಿ ರೂ.ಅನುದಾನ ಖೋತಾ ಆಗಲಿದೆ. ಈ ಅನ್ಯಾಯಕ್ಕೆ ಪ್ರಧಾನಿಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಅವರೇ ಕಾರಣ ಎಂದರು.