Advertisement

ಕಲಬುರಗಿ ಮ್ಯಾನ್ ಹೋಲ್ ದುರಂತಕ್ಕೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಕಾರಣ: ಎಂ. ಶಿವಣ್ಣ

02:19 PM Jan 30, 2021 | Team Udayavani |

ಕಲಬುರಗಿ: ನಗರದಲ್ಲಿ ಗುರುವಾರ ಮ್ಯಾನ್ ಹೋಲ್ ನಲ್ಲಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದುರಂತಕ್ಕೆ ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆಯ ಆಯುಕ್ತರು ಕಾರಣೀಕರ್ತರಾಗುತ್ತಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ (ಕೋಟೆ) ಹೇಳಿದರು.

Advertisement

ಇಲ್ಲಿನ ಕೈಲಾಶ್ ನಗರ ಪ್ರದೇಶದ ಘಟನಾ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾನ್ ಹೋಲ್ ನಲ್ಲಿ ಮನುಷ್ಯರನ್ನು ಇಳಿಸುವುದು ಅಪರಾಧ. ಇದು ಗೊತ್ತಿದ್ದೂ 20 ಅಡಿ ಆಳದ ಮ್ಯಾನ್ ಹೋಲ್ ಕಾರ್ಮಿಕರನ್ನು ಸ್ವಚ್ಛತೆಗೆಂದು ಇಳಿಸಿರುವುದು ಅಮಾನವೀಯ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಚ್ಚರಿಸಿದರು.

ಇಬ್ಬರು ಕಾರ್ಮಿಕರ ಸಾವು ನಿಜಕ್ಕೂ ಘೋರ ದುರಂತ. ಇದರಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವಿದೆ.‌ ದುರ್ಘಟನೆ ಬಗ್ಗೆ ಸಂಪೂರ್ಣವಾದ ಮಹಿತಿ ಪಡೆದು, ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಯಮ ಪ್ರಕಾರ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಒದಗಿಸಲಾಗುವುದು.‌ ಸದ್ಯ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.‌ ಇನ್ನೂ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.

ಇದನ್ನೂ ಓದಿ:ಕನ್ನಡಿಗರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ: ಡಾ. ಮನು ಬಳಿಗಾರ್ ಕಿಡಿ

Advertisement

ಈ ಸಂದರ್ಭದಲ್ಲಿ ರಾಷ್ಟ್ರಿಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹೀರಾಮನಿ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ರಮಾ, ಸದಸ್ಯರಾದ ಗೀತಾ ವಾಡೇಕರ್, ನಾಗರಾಜ ಎಸ್. ಎಂ.ವಿ.ವೆಂಕಟೇಶ, ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಸದಸ್ಯರಾದ ನ್ಯಾಯವಾದಿ ಹೆಚ್.ವೆಂಕಟೇಶ ದೊಡ್ಡೇರಿ, ಮಹಾನಗರ ಪಾಲಿಕೆಯ ಅಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಲಯದ ಮುಖ್ಯ ಅಭಿಯಂತ ದಿನೇಶ ಎಸ್.ಎನ್., ಅಧೀಕ್ಷಕ ಅಭಿಯಂತ ಬಸವರಾಜ ಅಲೇಗಾಂವ, ಕಾರ್ಯನಿರ್ವಾಹಕ ಅಭಿಯಂತ ನರಸಿಂಹರೆಡ್ಡಿ , ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next