ಚಿತ್ತಾಪುರ: ಕಲಬುರಗಿ ನಗರದಲ್ಲಿ ಫೆ. 5ರಿಂದ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮ್ಮೇಳನದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸುವ ಮೂಲಕ ದಿನನಿತ್ಯ ವಿವಿಧ ಹಂತದ ಸಭೆಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಸಮ್ಮೇಳನ ರಾಜ್ಯಕ್ಕೆ ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯ ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಪೂಜಾರಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ಸಮ್ಮೇಳನ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಮುಖ್ಯವಾಗಿದೆ. ಹೀಗಾಗಿ ಡಿಸಿ, ಜಿ.ಪಂ ಸಿಇಒ ಸೂಚನೆ ಮತ್ತು ಆದೇಶದಂತೆ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ ಮಾತನಾಡಿ, 85ನೇ ಅಖೀಲ ಭಾರತ ಸಮ್ಮೇಳನಕ್ಕೆ ಶಿಕ್ಷಣ ಇಲಾಖೆಯಿಂದ ಸಹಕಾರ ನೀಡಲಾಗುವುದು. ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕೆಲಸ ಮಾಡಲಾಗುತ್ತಿದೆ. ಸಮ್ಮೇಳನ ಪ್ರಚಾರಕ್ಕೆ ಈಗಾಗಲೇ ಎಲ್ಲ ಶಾಲೆಗಳಲ್ಲಿ ತಿಳಿ ಹೇಳುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಕಸಾಪ ಪದಾಧಿ ಕಾರಿಗಳಾದ ಸಿದ್ಧಲಿಂಗ ಬಾಳಿ, ದೇವಪ್ಪ ನಂದೂರಕರ್, ಮಹ್ಮದ್ ಇಬ್ರಾಹಿಂ, ವೀರಸಂಗಪ್ಪ ಸುಲೇಗಾಂವ, ಮಹೇಶ ಕಾಶಿ, ರಾಜಶೇಖರ ಬಳ್ಳಾ, ಮಹೇಶ ಜಾಯಿ, ದೇವಿಂದ್ರ ಕುಮಸಿ, ಕಾಶಿರಾಯ ಕಲಾಲ್, ಶಾಂತಕುಮಾರ ಮಳಖೇಡ, ವಿಜಯಕುಮಾರ ಹರವಾಳ, ಶಿಕ್ಷಣ ಸಂಯೋಜಕ ಸಂತೋಷ ಶಿರನಾಳ, ದೈಹಿಕ ಶಿಕ್ಷಣಾ ಧಿಕಾರಿ ದೇವಿಂದ್ರರೆಡ್ಡಿ ದುಗನೂರ, ಅಮೃತ ಹಾಗೂ ಇತರರು ಇದ್ದರು.