Advertisement

ಕಲ್ಯಾಣ ಕಣ್ಮಣಿಗೆ ಕಣ್ಣೀರ ವಿದಾಯ

01:43 PM Nov 04, 2019 | Naveen |

ಕಲಬುರಗಿ: ನಾಡಿನ ಮಠಾಧೀಶರು, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಬಂಧುಗಳು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ರವಿವಾರ ಚಿಂಚೋಳಿ ಪಟ್ಟಣದಲ್ಲಿ ಮಾಜಿ ಸಚಿವ, 371ನೇ (ಜೆ) ವಿಧಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ ಅಂತ್ಯಕ್ರಿಯೆ ಧಾರ್ಮಿಕ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

Advertisement

ಮೃತರ ಕಳೆಬರ ಕಲಬುಗಿಯಿಂದ ಶನಿವಾರ ತಡರಾತ್ರಿ ಚಿಂಚೋಳಿಗೆ ಬರುತ್ತಲೇ ಸಾವಿರ ಸಂಖ್ಯೆಯಲ್ಲಿ ಸೇರಿದ ಜನತೆ ಅಗಲಿದ ನಾಯಕನಿಗಾಗಿ ಕಣ್ಣೀರು ಹಾಕರಿದರು. ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ 11ರ ವರೆಗೆ ಮೃತದೇಹವನ್ನು ವೈಜನಾಥ ಪಾಟೀಲರ ಮನೆಯಲ್ಲೇ ಇಡಲಾಗಿತ್ತು.

ಈ ವೇಳೆ ಕೆಲವು ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಕೈಗೊಳ್ಳಲಾಯಿತು. ಬಳಿಕ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಚಿಂಚೋಳಿ ಪಟ್ಟಣದ ರಾಜಬೀದಿಗಳ ಮೂಲಕ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪಕ್ಕೆ ತಂದು, ಹಲವು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ರಾಯಚೂರು, ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಮತ್ತು ನೆರೆಯ ತೆಲಂಗಾಣ, ಮಹಾರಾಷ್ಟ್ರದಿಂದ ಆಗಮಿಸಿದ ಪಾಟೀಲ ಅಭಿಮಾನಿಗಳು, ಬಂಧುಗಳು, ಹಿತೈಷಿಗಳು ಅಂತಿಮ ನಮನ ಸಲ್ಲಿಸಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ| ಚನ್ನವೀರ ಶಿವಾಚಾರ್ಯರು, ಬೀದರನ ಶ್ರೀ ಬಸವಪ್ರಭು ಸ್ವಾಮೀಜಿ ಹಾಗೂ ಮತ್ತಿತರ ಮಠಾಧೀಶರು ಅಂತಿಮ ಸಂಸ್ಕಾರದ ವಿಧಿ-ವಿಧಾನ ಪೂರೈಸಿದರು. ತೋಟದಲ್ಲಿ ನಿರ್ಮಿಸಿದ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಸಲು ಮೂರು ಸಾವಿರ ವಿಭೂತಿ, ಬಿಲ್ವಪತ್ರೆ, ಉಪ್ಪುಬ ಳಸಲಾಯಿತು.

Advertisement

ಮೃತರ ಕುಟುಂಬದ ಸದಸ್ಯರು, ಸಂಬಂಧಿಗಳು, ಗಣ್ಯರು, ಚಿಂಚೋಳಿ ತಾಲೂಕಿನ ಜನತೆ ಹಾಗೂ ಪಾಟೀಲರ ಜತೆ ಹೋರಾಟದಲ್ಲಿ ತೊಡಗಿದವರು ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಸರ್ಕಾರದ ಪ್ರತಿನಿಧಿಯಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಜಿಲ್ಲಾಡಳಿತ ಪರವಾಗಿ ಜಿಲ್ಲಾಧಿಕಾರಿ ಶರತ್‌ ಬಿ., ಎಸ್‌ಪಿ ವಿನಾಯಕ ಪಾಟೀಲ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಅಕ್ಷಯ ಹಾಕೆ ಅಗಲಿದ ನಾಯಕನಿಗೆ ಪುಷ್ಪಗುತ್ಛ ಅರ್ಪಿಸಿ, ನಮನ ಸಲ್ಲಿಸಿದರು. ನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಗುಂಡು ಹಾರಿಸಿ, ಪೊಲೀಸ್‌ ವಾದ್ಯದಲ್ಲಿ ರಾಷ್ಟ್ರಗೀತೆ ನುಡಿಸುವ ಮೂಲಕ ಗೌರವ ಅರ್ಪಿಸಿದರು. ಪಾಟೀಲ್‌ರ ದೇಹದ ಮೇಲೆ ಹೊದಿಸಲಾಗಿದ್ದ ರಾಷ್ಟ್ರ ಧ್ವಜವನ್ನು ವೈಜನಾಥ ಪಾಟೀಲ್‌ ಅವರ ಪತ್ನಿ ಜ್ಞಾನೇಶ್ವರಿ ಅವರಿಗೆ ಅಧಿಕಾರಿಗಳು ಹಸ್ತಾಂತರಿಸಿದರು.

ಮೃತ ವೈಜನಾಥ ಪಾಟೀಲ ಸಹೋದರರಾದ ಸಿದ್ರಾಮಪ್ಪ ಪಾಟೀಲ, ಶಿವರಾಜ ಪಾಟೀಲ, ಬಾಬುರಾವ ಪಾಟೀಲ, ಸಹೋದರಿ ಗಂಗೂಬಾಯಿ, ವೈಜನಾಥ ಪಾಟೀಲ ಪತ್ನಿ ಜ್ಞಾನೇಶ್ವರಿ, ಮಕ್ಕಳಾದ ಡಾ| ವಿಕ್ರಮ್‌ ಪಾಟೀಲ, ಗೌತಮ್‌ ಪಾಟೀಲ, ಡಾ| ಸರ್ವೇಶ ಪಾಟೀಲ, ಪುತ್ರಿಯರಾದ ಭಾರತಿ, ಆರತಿ ಹಾಗೂ ಸಂಬಂಧಿಗಳು ಅಂತಿಮ ಕಾರ್ಯದ ವಿಧಿ ವಿಧಾನಗಳನ್ನು ಬೀದರನ ಬಸವ ಧರ್ಮಪೀಠದ ಅಧ್ಯಕ್ಷರಾದ ಬ ಸವಪ್ರಭು ಸ್ವಾಮೀಜಿ ಸಲಹೆಯಂತೆ ನೆರವೇರಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರು, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ, ಮಾಜಿ ಸಚಿವರಾದ ಎಸ್‌.ಕೆ. ಕಾಂತಾ, ರೇವು ನಾಯಕ ಬೆಳಮಗಿ, ಡಾ| ಶರಣಪ್ರಕಾಶ ಪಾಟೀಲ, ಸುನೀಲ ವಲ್ಲಾಪುರೆ, ಶಾಸಕರಾದ ಎಂ.ವೈ. ಪಾಟೀಲ, ಶರಣಬಸಪ್ಪ ದರ್ಶನಾಪುರ, ತಿಪ್ಪಣ್ಣಪ್ಪ ಕಮಕನೂರ, ರಾಜಶೇಖರ ಪಾಟೀಲ ಹುಮನಾಬಾದ, ಈಶ್ವರ ಖಂಡ್ರೆ, ಡಾ| ಚಂದ್ರಶೇಖರ ಪಾಟೀಲ, ವೆಂಕಟರಡ್ಡಿ ಮುದ್ನಾಳ, ಅರವಿಂದ ಅರಳಿ, ಡಾ| ಅಜಯಸಿಂಗ್‌, ಡಾ| ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಮಾಜಿ ಶಾಸಕರಾದ ಬಿ.ಆರ್‌. ಪಾಟೀಲ, ವಿಶ್ವನಾಥ ಪಾಟೀಲ ಹೆಬ್ಟಾಳ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಶೀಲ ನಮೋಶಿ, ಅಲ್ಲಂಪ್ರಭು ಪಾಟೀಲ ನೆಲೋಗಿ, ಚಂದ್ರಶೇಖರರಡ್ಡಿ ಮದನಾ ದೇಶಮುಖ, ಗುರು ಪಾಟೀಲ ಶಿರವಾಳ, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬಸವರಾಜ ವಾಲಿ, ಮಾಜಿ ಅಧ್ಯಕ್ಷ ಸೋಮಶೇಖರ ಗೋನಾಯಕ, ಪ್ರಮುಖರಾದ ಸಿ.ಬಿ. ಪಾಟೀಲ ಓಕಳಿ, ಉಮಾಕಾಂತ ನಿಗ್ಗುಡಗಿ, ಬಸವರಾಜ ಇಂಗಿನ್‌, ಸುಭಾಷ ರಾಠೊಡ, ಚಂದ್ರಶೇಖರ ಹರಸೂರ, ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್‌, ರಮೇಶ ದುತ್ತರಗಿ, ದೀಪಕನಾಗ ಪುಣ್ಯಶೆಟ್ಟಿ, ಮಚ್ಚೇಂದ್ರನಾಥ ಮೂಲಗೆ, ಶಿವಶರಣಪ್ಪ ಕೊಬಾಳ, ಶರಣಪ್ಪ ತಳವಾರ, ಚಂದ್ರಶೇಖರ ಪಾಟೀಲ ಹರಸೂರ, ಎಂ.ಎಸ್‌. ಪಾಟೀಲ ನರಿಬೋಳ, ಶರಣು ನಾಗಣ್ಣ ಸಾಹುಕಾರ ದಂಡಿನ, ಮಹಾದೇವಿ ಕೆಸರಟಗಿ, ಶಶಿಕಲಾ ಟೆಂಗಳಿ, ಸಾವಿತ್ರಿ ಸಲಗರ, ದೇವಿಂದ್ರಪ್ಪ ಆವಂಟಿ, ರಾಜೇಂದ್ರ ಕರೆಕಲ್‌, ಶರಣು ಸಲಗರ, ಎಂ.ಬಿ.ಅಂಬಲಗಿ, ಸುರೇಶ ಸಜ್ಜನ, ಬಸವರಾಜ ಶೆಟಕಾರ, ಸಿದ್ದರಾಮರಡ್ಡಿ ಪಾಟೀಲ, ಶರಣಬಸವಪ್ಪ ಪಾಟೀಲ ಅಷ್ಟಗಿ, ರವಿರಾಜ ಕೊರವಿ, ನಾಗಲಿಂಗಯ್ಯ ಮಠಪತಿ, ಜಿ.ಎಸ್‌.ರೆಹಮತ, ಶರಣು ಪಪ್ಪಾ, ಮಲ್ಲಿಕಾರ್ಜುನ ಪಾಟೀಲ, ಶಿವರಾಜ ಭಾಸಗಿ, ಬಸಯ್ಯ ಗುತ್ತೇದಾರ ಗಾರಂಪಳ್ಳಿ, ಸೀತಿಕಂಠ ತಡಕಲ್‌, ಬಸವರಾಜ ತಡಕಲ್‌, ಗುರುಶಾಂತ ಪಟ್ಟೇದಾರ, ದೇವೇಗೌಡ ತೆಲ್ಲೂರ, ಅಶೋಕ ಪಾಟೀಲ, ಮಡಿವಾಳಪ್ಪ ಮಂಗಲಗಿ, ಸಂಜೀವ ಪಾಟೀಲ, ಅಶೋಕ ದುರ್ಗದ, ಬಾಬು ಹೊನ್ನಾ ನಾಯಕ ಹಾಗೂ ಮತ್ತಿತರರು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next