Advertisement

ಕ್ರೀಡಾಕೂಟ: ರಾಜ್ಯಮಟ್ಟಕ್ಕೆ ಲಗ್ಗೆ

11:05 AM Sep 26, 2019 | Naveen |

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಕಲಬುರಗಿಯ ಟೆಬಲ್‌ ಟೆನ್ನಿಸ್‌ ಮತ್ತು ಶಟಲ್‌ ಬ್ಯಾಡ್ಮಿಂಟನ್‌ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.

Advertisement

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2019-20ನೇ ಸಾಲಿನ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳು ಮಂಗಳವಾರ ಮತ್ತು ಬುಧವಾರ ನಡೆದವು. ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸುಮಾರು 2,500 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಶಟಲ್‌ ಬ್ಯಾಡ್ಮಿಂಟನ್‌ನ ಫೈನಲ್‌ನಲ್ಲಿ ಬಳ್ಳಾರಿ ತಂಡದ ಎದುರು ಕಲಬುರಗಿ ತಂಡ ಜಯ ಸಾ ಧಿಸಿತು. ಸುನಿಲ ಬಿ., ಝಾಕಿರ್‌, ಫಿರೋಜ್‌, ಶುಭಂ ಮತ್ತು ವರುಣ ಪಿ. ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದರು.

ಟೆಬಲ್‌ ಟೆನ್ನಿಸ್‌ ಫೈನಲ್‌ ಪಂದ್ಯದಲ್ಲಿ ಕಲಬುರಗಿ ಮತ್ತು ಬೀದರ್‌ ತಂಡಗಳು ಮುಖಾಮುಖೀ ಆಗಿದ್ದವು. ಕಲಬುರಗಿಯ ಮಂಜುನಾಥ, ಉಲ್ಲಾಸ್‌, ಬಾಪುಗೌಡ, ರಜತ್‌ ರುಮ್ಮನಗುಡ್‌, ಅಭೀಷೇಕ ಗೆಲುವಿನ ಗೆದ್ದು ರಾಜ್ಯ ಮಟ್ಟಕ್ಕೆ ಲಗ್ಗೆ ಇಟ್ಟರು. ಖೋ-ಖೋ ಫೈನಲ್‌ ಪಂದ್ಯದಲ್ಲಿ ಕಲಬುರಗಿ ಮತ್ತು ಕೊಪ್ಪಳ ಸೆಣಸಾಡಿದವು.

ಕೊಪ್ಪಳ ತಂಡ ಗೆದ್ದು ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯಿತು. ಮಂಜುನಾಥ, ಉದಯಕುಮಾರ, ಶ್ರೀಧರ, ಪ್ರಕಾಶ, ಶಿವುಕುಮಾರ, ಅರ್ಜುನ, ದಾವಲಸಾಬ, ಕಿರಣ, ಶಶಿಕುಮಾರ, ನಾಗರಾಜ, ಸಂಗಮೇಶ ಕೊಪ್ಪಳ ತಂಡದಲ್ಲಿ ಇದ್ದರು. ವಿಜೇತ ತಂಡಗಳ ವಿವರ- ಪುರುಷರ ವಿಭಾಗ: ಟೆನ್ನಿಸ್‌ ಪಂದ್ಯ-ಬಳ್ಳಾರಿ, ಥ್ರೋಬಾಲ್‌-ಕೊಪ್ಪಳ, ಕಬ್ಬಡಿ-ಕೊಪ್ಪಳ, ನೆಟ್‌ ಬಾಲ್‌-ಕೊಪ್ಪಳ, ಹಾಕಿ- ಬಳ್ಳಾರಿ, ಬಾಸ್ಕೆಟ್‌ ಬಾಲ್‌-ಕಲಬುರಗಿ, ಫುಟ್‌ಬಾಲ್‌ನಲ್ಲಿ ಬೀದರ್‌ ತಂಡಗಳು ವಿಜೇತವಾದವು.

Advertisement

ಮಹಿಳೆಯರ ವಿಭಾಗ: ಶಟಲ್‌ ಬ್ಯಾಡ್ಮಿಂಟನ್‌-ಬಳ್ಳಾರಿ ತಂಡ, ಥ್ರೋಬಾಲ್‌-ಯಾದಗಿರಿ, ಹಾಕಿ- ಬಳ್ಳಾರಿ, ಬಾಸ್ಕೆಟ್‌ ಬಾಲ್‌- ಬಳ್ಳಾರಿ, ಕಬ್ಬಡಿ ಸ್ಪರ್ಧೆಯಲ್ಲಿ ಬಳ್ಳಾರಿ ತಂಡಗಳು ಗೆಲುವು ಸಾಧಿ ಸಿದವು.

ಈಜು ಸ್ಪರ್ಧೆ – ಪುರುಷರ ವಿಭಾಗ: 100 ಮೀ. ಫ್ರೀ ಸ್ಟೈಲ್‌- ವಿಖೀಲೇಶ ಬಿ.ಎಸ್‌. (ಪ್ರಥಮ-ಕಲಬುರಗಿ), ಸುರೇಶ (ದ್ವಿತೀಯ-ಕಲಬುರಗಿ), 200 ಮೀ.ಫ್ರೀ ಸ್ಟೈಲ್‌-ಪ್ರಜ್ವಲ್‌ ಪಿ.ಕೆ. (ಪ್ರಥಮ-ಕಲಬುರಗಿ), ಉತ್ತೇಜ್‌ (ದ್ವಿತೀಯ-ಬಳ್ಳಾರಿ), 400 ಮೀ. ಫ್ರೀ ಸ್ಟೈಲ್‌-ಪ್ರಜ್ವಲ್‌ ಪಿ.ಕೆ. (ಪ್ರಥಮ-ಕಲಬುರಗಿ), ಎಚ್‌.ಹುಸೇನ (ದ್ವಿತೀಯ-ಬಳ್ಳಾರಿ), 100 ಮೀ. ಬ್ರೆಸ್ಟ್‌ ಸ್ಟ್ರೋಕ್‌-ಶಂಕರ ಕೆ. (ಪ್ರಥಮ-ಕಲಬುರಗಿ), ಲೋಕೇಶ ಪೂಜಾರಿ (ದ್ವಿತೀಯ-ಕಲಬುರಗಿ), 200 ಮೀ. ಬ್ರೆಸ್ಟ್‌ ಸ್ಟ್ರೋಕ್‌-ಶಂಕರ ಕೆ. (ಪ್ರಥಮ-ಕಲಬುರಗಿ), ಪ್ರಜ್ವಲ್‌ ಪಿ.ಕೆ. (ದ್ವಿತೀಯ-ಕಲಬುರಗಿ), 100 ಮೀ. ಬ್ಯಾಕ್‌ ಸ್ಟ್ರೋಕ್‌ -ವಿಖೀಲೇಶ ಬಿ.ಎಸ್‌. (ಪ್ರಥಮ-ಕಲಬುರಗಿ), ಎಚ್‌.ಹುಸೇನ (ದ್ವಿತೀಯ-ಬಳ್ಳಾರಿ), 200 ಮೀ. ಬ್ಯಾಕ್‌ ಸ್ಟ್ರೋಕ್‌-ವಿಖೀಲೇಶ ಬಿ.ಎಸ್‌. (ಪ್ರಥಮ-ಕಲಬುರಗಿ), ಸಮೀರ ಜಿ.ಕೆ. (ದ್ವಿತೀಯ-ಕಲಬುರಗಿ), 100 ಮೀ. ಬಟರ್‌ ಫ್ಲೆ„- ಸಮೀರ ಜಿ.ಕೆ. (ಪ್ರಥಮ-ಕಲಬುರಗಿ), ಶರಣಪ್ಪ ಕೆ. (ದ್ವಿತೀಯ-ಕಲಬುರಗಿ), 200 ಮೀ. ವಿಡ್ಲೆ- ಸಮೀರ ಜಿ.ಕೆ. (ಪ್ರಥಮ-ಕಲಬುರಗಿ), ಎಚ್‌.ಹುಸೇನ (ದ್ವಿತೀಯ-ಬಳ್ಳಾರಿ) ಗೆಲುವು ಸಾಧಿಸಿದರು.

ಮಹಿಳೆಯರ ವಿಭಾಗ: 100 ಮೀ. ಫ್ರೀ ಸ್ಟೈಲ್‌ – ದಿವ್ಯಾ (ಪ್ರಥಮ-ಬಳ್ಳಾರಿ), ಖುಷಿ ಪಾಟೀಲ (ದ್ವಿತೀಯ-ಬಳ್ಳಾರಿ), 200 ಮೀ. ಫ್ರೀ ಸ್ಟೈಲ್‌- ಖುಷಿ ಪಾಟೀಲ (ಪ್ರಥಮ-ಬಳ್ಳಾರಿ), ದಾಕ್ಷಾಯಿಣಿ (ದ್ವಿತೀಯ-ಕಲಬುರಗಿ), 400 ಮೀ. ಫ್ರೀ ಸ್ಟೈಲ್‌ – ಅಕ್ಷಯಾ ಎಂ. (ಪ್ರಥಮ-ಬಳ್ಳಾರಿ), ಕೆ.ಕವಿತಾ (ದ್ವಿತೀಯ-ಬಳ್ಳಾರಿ), 100 ಮೀ. ಬ್ರೆಸ್ಟ್‌ ಸ್ಟ್ರೋಕ್‌- ಶ್ರೀ ಲಕ್ಷಿ¾, (ಪ್ರಥಮ-ಕಲಬುರಗಿ), ಸ್ವಾಸ್ತಿಕಾ (ದ್ವಿತೀಯ-ಕಲಬುರಗಿ), 200 ಮೀ. ಬ್ರೆಸ್ಟ್‌ ಸ್ಟ್ರೋಕ್‌- ದಾಕ್ಷಾಯಿಣಿ (ಪ್ರಥಮ-ಕಲಬುರಗಿ), ಲಿಪೇಕಾ (ದ್ವಿತೀಯ-ಬಳ್ಳಾರಿ), 100 ಮೀ. ಬ್ಯಾಕ್‌ ಸ್ಟ್ರೋಕ್‌-ದಿವ್ಯಾ (ಪ್ರಥಮ-ಬಳ್ಳಾರಿ), ಖುಷಿ ಪಾಟೀಲ (ದ್ವಿತೀಯ-ಬಳ್ಳಾರಿ), 200 ಮೀ. ಬ್ಯಾಕ್‌ ಸ್ಟ್ರೋಕ್‌- ದಿವ್ಯಾ (ಪ್ರಥಮ-ಬಳ್ಳಾರಿ), ಪೂಜಾ (ದ್ವಿತೀಯ-ಕಲಬುರಗಿ), 100 ಮೀ. ಬಟರ್‌ ಫ್ಲೆ„-ಶ್ರೀಲಕ್ಷ್ಮೀ , ಸ್ವಾಸ್ತಿಕಾ (ದ್ವಿತೀಯ-ಕಲಬುರಗಿ), 200 ಮೀ. ವಿಡ್ಲೆ -ಶ್ರೀಲಕ್ಷ್ಮೀ (ಕಲಬುರಗಿ), ರಜನಿ (ದ್ವಿತೀಯ-ಬಳ್ಳಾರಿ) ಜಯ ಗಳಿಸಿದರು. ಜಿಮ್ನಾಸ್ಟಿಕ್ಸ್‌- ಪುರುಷರ ವಿಭಾಗದಲ್ಲಿ ಯಾದಗಿರಿಯ ಬಸವರಾಜ, ಮಲ್ಲಿಕಾರ್ಜುನ, ವೆಂಕಟೇಶ, ಸುನಿಲ, ಮುರುಳಿ ಮತ್ತು ಮಹಿಳೆಯರ ವಿಭಾಗದಲ್ಲಿ ತನು, ಕಾವೇರಿ, ಭಾಗ್ಯಶ್ರೀ, ಬಸಲಿಂಗಮ್ಮ, ಶ್ರೀದೇವಿ ಜಯ ಸಾಧಿ ಸಿದರು. ಪುರುಷರ 10 ಸಾವಿರ ಮೀ. ಓಟ ಸ್ಪರ್ಧೆ -ಇಂದ್ರೇಶ (ಕೊಪ್ಪಳ). ಮಹಿಳೆಯರ 4×400 ರಿಲೇ-ಬೀದರ್‌, ಪುರುಷರ 4×400 ರಿಲೇ-ಬೀದರ್‌ ತಂಡ ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯಿತು. ಮೈಸೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳು ಸೆ.29ರಿಂದ ಅ.6ರ ವರೆಗೆ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next