ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮತ್ತೋರ್ವ ವೃದ್ದ ಸಾವನ್ನಪ್ಪಿದ್ದು, ಮಹಾಮಾರಿ ರೋಗಕ್ಕೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ನಗರದ ನ್ಯಾಷನಲ್ ಚೌಕ್ ನಿವಾಸಿಯಾದ 80 ವರ್ಷದ ವೃದ್ಧನಿಗೆ ಕೋವಿಡ್-19 ಸೋಂಕು ಇರೋದು ಖಚಿತವಾಗಿದ್ದು, ಸೋಮವಾರ ಈತ ಮೃತಪಟ್ಟಿದ್ದಾನೆ.
ಪಾರ್ಕಿನ್ಸನ್ ನಿಂದ ಬಳಲುತ್ತಿದ್ದ ಈತ ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಇದ್ದ. ರವಿವಾರ ಮಧ್ಯ ರಾತ್ರಿ ಜ್ವರ ಮತ್ತು ನಿಶ್ಯಕ್ತಿ ಕಂಡು ಬಂದದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.
ವೃದ್ದನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ದೆಹಲಿಯಿಂದ ಮರಳಿದವರ ಸಂಪರ್ಕಕ್ಕೆ ಬಂದ ಮಾಹಿತಿ ಕೂಡ ಲಭ್ಯವಾಗಿಲ್ಲ. ಹೀಗಾಗಿ ವೃದ್ದನಿಗೆ ಸೋಂಕು ಹೇಗೆ ತಗುಲಿತು ಅನ್ನೋದನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಇನ್ನು, ಮಾ.10ರಂದು ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ 76 ವರ್ಷದ ವೃದ್ಧ ಬಲಿಯಾಗಿದ್ದ. ಇದು ಕೋವಿಡ್-19ಗೆ ದೇಶದಲ್ಲೇ ದಾಖಲಾದ ಮೊದಲ ಸಾವಾಗಿತ್ತು. ಏ.7ಕ್ಕೆ ದೆಹಲಿಯಿಂದ ಬಂದವರ ಸಂಪರ್ಕಕ್ಕೆ ಬಂದಿದ್ದ 65 ವರ್ಷದ ಹಣ್ಣಿನ ವ್ಯಾಪಾರಿ ಮತ್ತು ಏ.13ಕ್ಕೆ 55 ವರ್ಷದ ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದ.