ಕಲಬುರಗಿ: ಆಯಿಲ್ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ರವಿವಾರ ಸಂಜೆ ನಗರದ ಹೊರ ವಲಯ ಶಹಾಬಾದ್ ರಸ್ತೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜು ಬಳಿ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಅಮಿತ್ ಗುಂಡೇಶ ಸುಬೇದಾರ್ (21) ಬಿಇ ವಿದ್ಯಾರ್ಥಿ ಹಾಗೂ ಆದಶ್೯ ಬಸವಂತರಾಯ (22) ಎನ್ನುವ ಬಿಕಾಂ ವಿದ್ಯಾರ್ಥಿಗಳೇ ಸಾವನ್ನಪ್ಪಿದ್ದಾರೆ. ಮಹಾಂತೇಶ್ ಎನ್ನುವ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿಗಳು ನಗರ ಪ್ರದೇಶದವರಾಗಿದ್ದಾರೆ.
ಕಲಬುರಗಿಯಿಂದ ಶಹಬಾದ್‌ನತ್ತ ಹೊರಟಿದ್ದ ಕಾರು ಹಾಗೂ ಶಹಬಾದ್‌ನಿಂದ ಕಲಬುರಗಿ ನಗರದ ಕಡೆ ಬರುತ್ತಿದ್ದ ಆಯಿಲ್ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಈ ಕುರಿತು ಕಲಬುರಗಿ ಸಂಚಾರಿ-2 ರಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುಂಚೆ ಜಿಲ್ಲೆಯ ಕಮಲಾಪುರ ಬಳಿ ಭೀಮನಾಳ ಕ್ತಾಸ್ ಬಳಿ ಸಂಭವಿಸಿದ ರಸ್ತ ಅಪಘಾತದಲ್ಲೂ ಇಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಒಟ್ಟಾರೆ ಪ್ರತ್ಯೇಕ ಎರಡು ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ.