Advertisement

Kalaburagi; ಬಿಜೆಪಿ ಎಂದರೆ ಬ್ರಿಟೀಷ್ ಜನತಾ ಪಾರ್ಟಿ: ಮಧು ಬಂಗಾರಪ್ಪ

01:29 PM Mar 08, 2024 | Team Udayavani |

ಕಲಬುರಗಿ: ಬಿಜೆಪಿ ಅಂದರೆ ಅದು ಪಕ್ಷವಲ್ಲ, ಬ್ರಿಟೀಷ್ ಜನತಾ ಪಾರ್ಟಿ. ಬ್ರಿಟೀಷರು ಹೇಗೆ ವ್ಯಾಪಾರಕ್ಕೆ ಬಂದು ಆಳಿದರೋ, ಆದೇ ರೀತಿಯಲ್ಲಿ ಬಿಜೆಪಿಯವರು ವ್ಯಾಪಾರ ಮಾಡಿಕೊಂಡು, ಶಾಸಕರನ್ನು ಖರೀದಿ ಮಾಡಿಕೊಂಡು ತಂತ್ರದಿಂದ ಅಧಿಕಾರ ಹಿಡಿಯುವುದು ಅವರ ಚಾಳಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.

Advertisement

ನಗರದಲ್ಲಿ ಶುಕ್ರವಾರ ಕೆಕೆಆರ್‌ಡಿಬಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ 113ರಕ್ಕಿಂತ ಹೆಚ್ಚು ಸ್ಥಾನ ಎಲ್ಲಿ ಗೆದ್ದಿದ್ದಾರೆ ಹೇಳಿ ಎಂದು ಪ್ರಶ್ನಿಸಿದ ಅವರು, ವ್ಯವಹಾರ ಕುದುರಿಸಿಯೇ ಅಧಿಕಾರ ಹಿಡಿಯುವುದು ಅವರ ಹುಟ್ಟುಗುಣ. ದೇಶದಲ್ಲಿ ರಾಜ್ಯದಲ್ಲಿ ರೈತರ, ಕಾರ್ಮಿಕರ ಸಾಲ ಮನ್ನಾ ಮಾಡಿದ ಇತಿಹಾಸವೇನಾದರೂ ಇದೆಯಾ? ಕೇವಲ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಮುಖೇನ ತಾವೇನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ದೇಶದಲ್ಲಿ ಬಿಜೆಪಿ ಭಾವನೆಗಳ ಮೂಲಕವೇ ಆಡಳಿತ ಮಾಡುವುದು ಹುಟ್ಟುಗುಣ. ಶ್ರೀರಾಮನನ್ನು ಬೀದಿಗೆ ತಂದು ಬಿಟ್ಟರು. ಹಾದಿ ಬೀದಿಯಲ್ಲಿ ಕಟೌಟು ನಿಲ್ಲಿಸಿದರು. ಅವು ಬಿದ್ದು ಕಸದ ಬುಟ್ಟಿ ಸೇರುತ್ತಿವೆ. ಇದಕ್ಕೆ ಯಾರು ಹೊಣೆ ಎಂದ ಅವರು, 32 ವರ್ಷಗಳ ಹಿಂದೆ ನಮ್ಮ ತಂದೆ ದಿ. ಬಂಗಾರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ದೇವಸ್ಥಾನಗಳಲ್ಲಿ (ರಾಮನ ದೇವಸ್ಥಾನ ಸೇರಿ) ಆರಾಧನಾ ಯೋಜನೆ ಅಡಿಯಲ್ಲಿ ಹಚ್ಚಲು ಕೋಟ್ಯಾಂತರ ಅನುದಾನದ ನೀಡಿ ದೇವರ ಗುಡಿಗಳಲ್ಲಿ ಬೆಳಕು ಬರುವಂತೆ ಮಾಡಿದ್ದಾರೆ. ಇದೇನು ತೋರಿಸುತ್ತದೆ. ಕಾಂಗ್ರೆಸ್‌ ನವರಿಗೆ ಧರ್ಮ, ದೇವರುಗಳ ಬಗ್ಗೆ ಪ್ರೀತಿ ಇಲ್ಲವೇನು ಎಂದು ಪ್ರಶ್ನಿಸಿದರು.

ಈಗ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಎರಡು ಸಾವಿರ ರೂ.ಗಳನ್ನು ಕೊಡುವ ಮೂಲಕ ಮನೆ ಬೆಳಗುವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಮೂಲಕ ಮಾಡಲಾಗುತ್ತಿದೆ. ಇದರ ಬಹುತೇಕ ಫಲಾನುಭವಿಗಳು ಬಿಜೆಪಿಗರೇ ಇದ್ದಾರೆ. ನಾಯಕರ ಮನೆಗಳ ಡ್ರೈವರ್, ಕಸ ಗೂಡಿಸುವವರು, ಮನೆ ಕೆಲಸದವರಿಗೆ ಎರಡು ಸಾವಿರ ರೂ. ಬರುತ್ತದೋ ಇಲ್ಲವೋ ಕೇಳಿ, ಆಗಲಾದರೂ ಗ್ಯಾರಂಟಿ ಓಕೆ ಎನ್ನಿಸಬಹುದು ಎಂದು ಛೇಡಿಸಿದರು.

ಎನ್.ರವಿ ಇವರೆಲ್ಲಾ ಸೀಮೆಯ ನಾಯಕರು, ಗ್ರಾಮ ಪಂಚಾಯತ್ ಗೆ ನಿಂತರೆ ಗೆಲ್ಲುವುದು ಡೌಟು. ಇವರಿಂದ ಹೇಳಿಸಿಕೊಂಡು ಸರಕಾರ ನಡೆಸುವ ಜರೂರತ್ತು ನಮಗೇನು ಇಲ್ಲ ಎಂದು ತಿರುಗೇಟು ನೀಡಿದರು.

Advertisement

ಈ ವೇಳೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕ ಎಂ.ವೈ.ಪಾಟೀಲ ಹಾಗೂ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next