Advertisement

ಬಸವ ಜಯಂತಿ ಸರಳ ಆಚರಣೆ

12:42 PM Apr 27, 2020 | |

ಕಲಬುರಗಿ: ಮಹಾ ಮಾನವತಾವಾದಿಹಾಗೂ ಜಗಜ್ಯೋತಿ ಶ್ರೀ ಬಸವೇಶ್ವರ ಅವರಜಯಂತಿ ನಿಮಿತ್ತ ರವಿವಾರ ನಗರದ ಜಗತ್‌ವೃತ್ತದಲ್ಲಿರುವ ಬಸವೇಶ್ವರಪ್ರತಿಮೆಗೆ ಜಿಲ್ಲಾ ಧಿಕಾರಿ ಶರತ್‌ ಬಿ. ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

Advertisement

ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಇರುವುದರಿಂದ 12ನೇ ಶತಮಾನದ ಸಾಮಾಜಿಕ ಹರಿಕಾರನಿಗೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವುದರೊಂದಿಗೆ ಜಿಲ್ಲಾಡಳಿತದಿಂದ ಸರಳವಾಗಿ ಜಯಂತಿ ಆಚರಿಸಲಾಯಿತು. ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅಜಯ ಸಿಂಗ್‌, ಕಲಬುರಗಿ
ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶ್‌ ಕುಮಾರ್‌, ಜಿಲ್ಲಾ ಪಂಚಾಯತ್‌ ಸಿಇಒ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಪ್ರೊಬೇಷನರಿ ಐಎಎಸ್‌ ಅಧಿ ಕಾರಿ ಗೋಪಾಲಕೃಷ್ಣ ಬಿ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಅವರು ಸಹ ಮಹಾನ್‌ ದಾರ್ಶನಿಕನಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಪೊಲೀಸ್‌ ಠಾಣೆಗಳಲ್ಲಿ ಜಯಂತಿ: ನಗರದ ಚೌಕ್‌, ಬ್ರಹ್ಮಪುರ, ಮಹಿಳಾ ಹಾಗೂ ಗ್ರಾಮೀಣ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಬಸವಜ ಜಯಂತಿ ಆಚರಿಸಲಾಯಿತು. ಕಾಯಕವೇ ಕೈಲಾಸ ಹಾಗೂ ಸರ್ವರೂ ಸಮಾನರು ಎಂಬ ಬಸವಣ್ಣನವರ ತತ್ವದಡಿ ಇಲಾಖೆ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಎಂದು ಠಾಣಾಧಿಕಾರಿಗಳು ಹೇಳಿದರು. ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next