Advertisement
ಇಲ್ಲಿನ ಭಾರತ ವಿಕಾಸ ಸಂಗಮ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸೇಡಂ ತಾಲೂಕಿನ ಬೀರನಳ್ಳಿ ಕ್ರಾಸ್ ಬಳಿ ವಿಶಾಲ 24 ಎಕರೆ ಪ್ರದೇಶದಲ್ಲಿ ನಡೆಯಲಿರುವ ಐತಿಹಾಸಿಕ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಹಗಲಿರಳು ಸಿದ್ಧತೆಗಳು ನಡೆದಿವೆ. 51 ಪುಟಗಳ ಆಮಂತ್ರಣ ಪತ್ರ ಅಂತಿಮಗೊಂಡು ಎಲ್ಲಾ ಕಡೆ ತಲುಪುತ್ತಿವೆ. ಲಕ್ಷಾಂತರ ಜನ ಪಾಲ್ಗೊಳ್ಳುವ ಹಾಗೂ ಸುಮಾರು ಮೂರು ಕೋಟಿ ಜನ ವೀಕ್ಷಿಸುವ ಈ ಉತ್ಸವ ಒಂದು ಮೈಲುಗಲ್ಲು ಆಗಲಿದೆ ಎಂದು ವಿವರಣೆ ನೀಡಿದರು.
Related Articles
Advertisement
ಯುವಕರಿಗೆ ಸ್ವ ಉದ್ಯೋಗದಲ್ಲಿ ಯಶಸ್ವಿ ಹೊಂದುವುದು ಕುರಿತಾದ ಕಾರ್ಯಗಾರ, ಕಲಾವಿದರಿಗೂ ಸ್ಪೂರ್ತಿ ತುಂಬುವ ಕಲಾಮೇಳ, ಸಾಹಿತ್ಯಾಸಕ್ತಿ ಹೆಚ್ಚಿಸುವ ಮಾಗದರ್ಶನ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗೆ ಸೇರಿ ಇತ್ಯಾದಿಗಳ ಹಲವಾರು ವಿನೂತನವಾದ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ನಾವು ನೋಡುವ ನೋಟ ಬದಲಾದರೆ ಎಲ್ಲವೂ ಅಭಿವೃದ್ಧಿಯಾಗುತ್ತದೆ. ಎಲ್ಲವೂ ಸರ್ಕಾರದಿಂದ ಆಗಬೇಕೆನ್ನುವುದರಕ್ಕಿಂತ ನನ್ನಿಂದಲೂ ಸಮಾಜ ಅಭಿವೃದ್ಧಿಗೆ ಕೈ ಜೋಡಣೆ ಎಂಬ ಮನೋಬಲ ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ರಾತ್ರಿ ಮೊದಲು ಸ್ಥಳೀಯ ಹಾಗೂ ತದನಂತರ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಸಂಗೀತ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ. ಒಟ್ಟಾರೆ ಉತ್ಸವಕ್ಕೆ ಬಂದರೆ ತಾನು ಏನು ಮಾಡಿದರೆ ಸ್ವಾವಲಂಬಿಯಾಗಬಲ್ಲೆ ಜತೆಗೆ ತನ್ನ ಪಾತ್ರ ಏನು ಎಂಬ ಪರಿಕಲ್ಪನೆ ಮೂಡದೆ ಇರದು ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ 10 ವರ್ಷದೊಳಗಿನ ಮಕ್ಕಳ ಬೌದ್ಧಿಕ ವಿಕಾಸ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ವಿಶೇಷ ಮಳಿಗೆ ರೂಪಿಸಲಾಗಿದೆ. ಶಿಶು ಶಿಕ್ಷಣದಲ್ಲಿ ಹೆಸರು ಮಾಡಿರುವ ದಾವಣಗೆರೆಯ ಸಂಸ್ಥೆಯೊಂದು ಇದನ್ನು ನಿರ್ವಹಿಸಲು ಈಗಾಗಲೇ ಕಾರ್ಯೋನ್ಮುಖಗೊಂಡಿದೆ. ಐತಿಹಾಸಿಕ ಎನ್ನುವಂತೆ ಕೈ ತುತ್ತಿನ ಊಟದಲ್ಲಿ 2 ಲಕ್ಷ ಮಕ್ಕಳು ಹಾಗೂ 80 ಸಾವಿರ ತಾಯಿಯಂದಿರು ಪಾಳ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಬಲಪಡಿಸಿದ 50 ಗಣ್ಯರಿಗೆ ಹಾಗೂ ಸೇಡಂ 15 ಹಳ್ಳಿಗಳಲ್ಲಿ ಸ್ವಾವಲಂಬಿ ಬದುಕು ರೂಪಿಸಿದವರನ್ನು ಉತ್ಸವದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಗುತ್ತಿದೆ ಎಂದು ಡಾ. ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಸಿಎಂಗೆ ಆಹ್ವಾನ: ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆಮಂತ್ರಣ ನೀಡಲಾಗಿದೆ. ಡಾ. ಸದಾಶಿವ ಸ್ವಾಮಿಗಳವರೇ ಆಮಂತ್ರಣ ನೀಡಿ ಬಂದಿದ್ದಾರೆ. ಬರುವುದು- ಬಿಡುವುದು ಅವರಿಗೆ ಬಿಟ್ಟದ್ದು. ಮುಂದೆ ನೋಡಿ ಉತ್ಸವ ಮಾಡುವುದು ತಮ್ಮದಾಗಿದೆ. ಈ ಹಿಂದೆ ಕಲಬುರಗಿ ಕಂಪಿಗೂ ಇದೇ ತೆರನಾಗಿ ಪ್ರತಿಕ್ರಿಯೆ ವ್ಯಕ್ತವಾದಾಗ್ಯೂ ಹೆಚ್ಚಿನ ಗಮನ ಕೊಡಲಿಲ್ಲ. ದೊಡ್ಡ ಉತ್ಸವ ಎಂದ ಮೇಲೆ ಎಲ್ಲ ತರಹದ ಮಾತುಗಳನ್ನು ಸ್ವಾಗತ ಮಾಡಿಕೊಳ್ಳಬೇಕು. ಪ್ರಮುಖವಾಗಿ ಸಂಘರ್ಷವಿಲ್ಲ. ಅಭಿವೃದ್ಧಿಯೇ ಮುಖ್ಯ. ಭಾರತೀಯ ಸಂಸೃತಿ ಉತ್ಸವ ಅಭಿವೃದ್ಧಿಗಾಗಿ ನಡೆಸಲಾಗುತ್ತಿದೆಯೇ ಹೊರತು ಸಂಘರ್ಷಕ್ಕಲ್ಲ. ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ ಎಂದು ಡಾ. ಸೇಡಂ ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು. ಡಾ. ಮಾರ್ತಾಂಡ ಶಾಸ್ತ್ರೀ, ಪ್ರಭಾಕರ ಜೋಶಿ, ಸದಾನಂದ ಪೆರ್ಲ ಸೇರಿದಂತೆ ಮುಂತಾದವರಿದ್ದರು.