ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆಯುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ನ.30ರ ಶನಿವಾರ ಬೆಳಗ್ಗೆ ಅದ್ದೂರಿಯ ಚಾಲನೆ ನೀಡಲಾಯಿತು.
ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು. ಉದ್ಯಮಿಗಳಾದ ವಿಜಯ ವಿ.ಕೋಟ್ಯಾನ್ ಅಲ್ಲಿಪಾದೆ ಮತ್ತು ರೋಹಿತ್ ಪೂಜಾರಿ ಉಡ್ಕುಂಜ ಅವರು ಸತ್ಯ-ಧರ್ಮ ಜೋಡುಕರೆಯನ್ನು ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಶಿವಪ್ಪ ಪೂಜಾರಿ ಜೇಡರಬೆಟ್ಟು, ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿ.ಸಿರೋಡ್ ದಂತ ವೈದ್ಯ ಡಾ.ಬಾಲಚಂದ್ರ ಶೆಟ್ಟಿ ಮಿಯ್ಯಾರು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ಉಳಿಸುವ ಕಾರ್ಯಅಭಿನಂದನೀಯ ಎಂದರು.
ಉಳಿ ಗ್ರಾ.ಪಂ.ಉಪಾಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ, ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ಉಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಶುಭ ಹಾರೈಸಿದರು.
ಪ್ರಮುಖರಾದ ಸಂಜೀವ ಪೂಜಾರಿ ಕಟ್ಟದಡೆ, ರವಿ ಶೆಟ್ಟಿ ಬೋಳ್ಯ, ಲೋಕೇಶ್ ಗೌಡ ಬರ್ಕೆಜಾಲು, ತನಿಯಪ್ಪ ಗೌಡ ಪೆಂರ್ಗಾಲು, ಪಶು ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಕೆ., ಧರ್ಣಪ್ಪ ಪೂಜಾರಿ, ರವಿ ಶೆಟ್ಟಿ ಕಿಂಜಾಲು, ಚಂದ್ರಶೇಖರ, ದಯಾನಂದ ಮುಂಡ್ರೇಲು, ಕೇಶವ ಪೂಜಾರಿ ಕಂಚಲಪಲ್ಕೆ, ಸುಧಾಕರ ಶೆಟ್ಟಿ ಶಂಕರಬೆಟ್ಟು,ಗಣೇಶ್ ಕೋಂಗುಜೆ, ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಲತೀಶ್ ಕುಕ್ಕಾಜೆ, ಪದಾಧಿಕಾರಿಗಳಾದ ಎನ್.ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಸುರೇಶ್ ಮೈರ, ಉಮೇಶ್ ಪೂಜಾರಿ,ಪುರುಷೋತ್ತಮ ಪೂಜಾರಿ ಪಲ್ಕೆ, ರಂಜಿತ್ ಮೈರಾ, ವಸಂತ ಪೂಜಾರಿ ಡೆಚ್ಚಾರು, ಚೇತನ್ ಊರ್ದೊಟ್ಟು , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನ್ ಸಿರಿಲ್ ಡಿಸೋಜ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಪ್ರಕಾಶ್ ಕರ್ಲ ಮೊದಲಾದವರಿದ್ದರು.
ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಶಾಂತ್ ಮೈರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉದ್ಘಾಟನೆಗೆ ಮುನ್ನ ಮೈರ ಶ್ರೀ ರಾಮಾಂಜನೇಯ ಭಜನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಓಟದ ಕೋಣಗಳನ್ನು ಕರೆತರಲಾಯಿತು.