Advertisement

ಮನೆ ಮನೆಗೆ ಅಂಚೆ ಬ್ಯಾಂಕ್‌ ಸೇವೆ

12:43 PM Dec 28, 2019 | |

ಕಕ್ಕೇರಾ: ಗ್ರಾಮೀಣ ಭಾಗದ ಜನರಿಗಾಗಿ ಭಾರತೀಯ ಅಂಚೆ ಇಲಾಖೆ ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಯೋಜನೆ ಜಾರಿಗೆ ತಂದು ಮನೆ-ಮನೆಗೂ ಖಾತೆ ತೆರೆಯುವ ಪ್ರಯತ್ನ ನಡೆಸಿದೆ.

Advertisement

ಏನಿದು ಐಪಿಪಿಬಿ: ಐಪಿಪಿಬಿ ಎಂದರೆ ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌. ಎನ್‌ಪಿಸಿಐ (ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಶನ್‌ ಇಂಡಿಯಾ) ಅಡಿಯಲ್ಲಿ 9 ಸೆಪ್ಟೆಂಬರ್‌ 2018ರಂದು ಈ ಯೋಜನೆ ಜಾರಿಗೊಳಿಸಲಾಗಿದೆ. ಆಧಾರ ಕಾರ್ಡ್‌ ಹೊಂದಿದ ಪ್ರತಿಯೊಬ್ಬರು ಪೋಸ್ಟ್‌ ಮಾಸ್ಟರ್‌ ಅಥವಾ ಅಂಚೆ ಕಚೇರಿಗೆ ಭೇಟಿಯಾಗಿ ಉಳಿತಾಯ ಖಾತೆ ತೆರೆಯಬಹುದು. ಕಾಗದ ರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಇದಾಗಿದೆ.

ಉಳಿತಾಯ ಖಾತೆಗೆ ನಿಮ್ಮ ಬೆರಳಚ್ಚು, ಆಧಾರ ಮಾಹಿತಿ ಪಡೆದು ಎಟಿಎಂ ವಿತರಿಸಲಾಗುತ್ತಿದೆ. ಹೀಗಾಗಿ ದೇಶದ ಯಾವುದೇ ಮೂಲೆಯ ಅಂಚೆ ಕಚೇರಿಯಲ್ಲಿ ಆಧಾರ, ಮೊಬೈಲ್‌ ಸಂಖ್ಯೆ ಇಲ್ಲವೇ ಬೆರಳಚ್ಚು ನೀಡಿ ಹಣದ ವ್ಯವಹಾರ ನಡೆಸಬಹುದಾಗಿದೆ. ರಾಜ್ಯದ 31 ವಿಭಾಗದಲ್ಲಿನ ಒಂಭತ್ತು ಸಾವಿರ ಅಧಿಕ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವ ಸೌಲತ್ತು ಗ್ರಾಮೀಣ, ನಗರ, ಪಟ್ಟಣದ ಜನರಿಗೆ ಸಿಗಲಿದೆ.

ಕಲಬುರಗಿ ವಿಭಾಗದ 70 ಉಪ ಕಚೇರಿ ಹಾಗೂ 553 ಶಾಖಾ ಕಚೇರಿಗಳಲ್ಲಿ ಈ ಸೌಲಭ್ಯ ತಲುಪಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಅಂಚೆ ಕಚೇರಿ ಅಧಿಕಾರಿಗಳು.

ನಗರ ಪ್ರದೇಶದಲ್ಲಿ ಎಟಿಎಂ, ಡಿಜಿಟಲ್‌ ಆ್ಯಪ್‌ ಮೂಲಕ ಹಣ ಪಡೆಯಬಹುದು. ಆದರೆ ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ಇಂತಹ ಸೌಲಭ್ಯಗಳಿಲ್ಲ. ಹೀಗಾಗಿ ಮನೆಗೆ ಪೋಸ್ಟ್‌ಮ್ಯಾನ್‌ ಬಂದಾಗ ಬೆರಳಚ್ಚು ನೀಡಿ, ಹಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದಿನನಿತ್ಯ ಇದಕ್ಕಾಗಿ ಪೋಸ್ಟ್‌ಮ್ಯಾನ್‌ ಹತ್ತಿರ 15000
ಸಾವಿರ ರೂ. ಇಟ್ಟುಕೊಳ್ಳುವ ಅವಕಾಶ ನೀಡಲಾಗಿದೆ. ಇತರೆ ಬ್ಯಾಂಕ್‌ಗಳಲ್ಲಿ ಆಧಾರ ಜೋಡಣೆ ಮಾಡಿದ್ದರೆ ಹಣ ಪಡೆಯುವ ಸೌಲತ್ತು ಇದೆ. ಹಾಗೆ ಶುಲ್ಕವನ್ನು ಕಟ್ಟಾಗುತ್ತದೆ. ಆದರೆ “ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌’ನಲ್ಲಿ ಯಾವುದೇ ಶುಲ್ಕವಿಲ್ಲದೆ 10 ಸಾವಿರ ರೂ.ಗಳನ್ನು ಒಂದು ಬಾರಿ ಪಡೆಯಬಹುದು. ಅಂಚೆ ಕಚೇರಿಗೆ ಹೋದರೆ ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಸಂಖ್ಯೆ ನೀಡಿ ಹಣ ತೆಗೆದುಕೊಳ್ಳಬಹುದು.

Advertisement

ಆನ್‌ಲೈನ್‌ ವ್ಯವಸ್ಥೆ: ಐಪಿಪಿಬಿ ಖಾತೆ ತೆರೆದ ಗ್ರಾಹಕರಿಗಾಗಿ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಐಪಿಪಿಬಿ ಆ್ಯಪ್‌ ರಚಿಸಲಾಗಿದ್ದು, ಖಾತೆ ಹೊಂದಿ ಮೊಬೈಲ್‌ ಇರುವ ಗ್ರಾಹಕರು ಆ್ಯಪ್‌ ಮೂಲಕ ನಗದು ಜಮೆ, ಹಣ ವರ್ಗಾವಣೆ, ವ್ಯಾಪಾರದ ಪಾವತಿ, ನೇರ ನಗದು ವರ್ಗಾವಣೆ, ಬಿಲ್ಲುಗಳ ಪಾವತಿ ಸೇರಿದಂತೆ ಯಾವುದೇ ದಾಖಲೆ ನೀಡದೇ ತನ್ನ ಖಾತೆಯಲ್ಲಿ ಎಷ್ಟು ಹಣ ಇದೆ. ಎಷ್ಟು ವರ್ಗಾವಣೆ ಮಾಡಲಾಗಿದೆ ಎನ್ನುವ ಕುರಿತು ಖಾತೆಯ ಸಂಪೂರ್ಣ ವಿವರ ತಿಳಿಯಬಹುದಾಗಿದೆ.

ಐಪಿಪಿಬಿ ಉತ್ತಮ ಯೋಜನೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರತಿಯೊಂದು ಅಂಚೆ ಕಚೇರಿಗಳಲ್ಲಿ ಡಿ. 28ರಂದು ಮನೆ ಮನೆಗೂ ತೆರಳಿ “ತಮ್ಮ ಬ್ಯಾಂಕ್‌ ಸೇವೆ’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಅರಿವು ಮೂಡಿಸುವಂತೆ ಅಂಚೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ರೀತಿಯಲ್ಲಿ ಖಾತೆ ತೆರೆಯುವ ಪ್ರಯತ್ನ ಮಾಡಲಾಗುತ್ತಿದೆ.
ಬಿ.ಆರ್‌. ನನಜಗಿ,
ಅಂಚೆ ವರಿಷ್ಠಾಧಿಕಾರಿ, ಕಲಬುರಗಿ ವಿಭಾಗ

„ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next