Advertisement
ಪಟ್ಟಣದ ಸಂಗಮೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ದಾನಮ್ಮದೇವಿ ಪುರಾಣ ಮಂಗಲೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು.
Related Articles
Advertisement
ಜ್ಞಾನದಾಸೋಹ, ಅನ್ನದಾಸೋಹದಂತಹ ಧಾರ್ಮಿಕ ಕಾರ್ಯಗಳು ನಿರಂತರ ಸಾಗಲಿ. ನಾಡಿನಲ್ಲಿ ಮಳೆ ಬಂದು ರೈತನ ಬಾಳು ಹಸನಾಗಲಿ. ಶರಣರ ತತ್ವ ನಂಬಿದ ಭಕ್ತರ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಇದೇ ವೇಳೆ ಸಂಗಮೇಶ್ವರ ಮಠದ ಸದ್ಭಕ್ತರ ವತಿಯಿಂದ ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳಿಗೆ(ಕಾಯಕ ಚೇತನ), ಪೂಜ್ಯ ಅಡವಿಲಿಂಗ ಮಹಾರಾಜರಿಗೆ (ಕರುನಾಡ ದಾಸೋಹ ಮೂರ್ತಿ), ಪೂಜ್ಯ ಬಸಯ್ಯಶಾಸ್ತ್ರಿ ಯಾಳಗಿ(ಪುರಾಣ ಭಾಸ್ಕರ), ಸೋಮನಾಥ ಗವಾಯಿ(ಜಾನಪದ ಜಾಣ) ಹಾಗೂ ತಬಲಾ ವಾದಕ ಪ್ರವೀಣಕುಮಾರ ಅವರಿಗೆ (ಮಧುರವಾಧ್ಯ ಭಾಸ್ಕರ) ಎಂಬ ಬಿರುದು ನೀಡಿ ಗೌರವಿಸಲಾಯಿತು.
ತುಲಾಭಾರ: ಜಂಬಗಿ ಶ್ರೀ ಪ್ರಭುಲಿಂಗೇಶ್ವರ ಬೆಟ್ಟದ ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳಿಗೆ ಹಾಗೂ ಅಡವಿಲಿಂಗ ಮಹಾರಾಜ, ಶಿವಯೋಗೇಶ್ವರ ಮಹಾಸ್ವಾಮೀಜಿಗೆ ತುಲಾಭಾರ ನೆರವೇರಿಸಲಾಯಿತು.
ದೇವಾಪುರದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು, ಕಂಠಿಮಠದ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ಮತ್ತು ಏಕದಂಡಿಗಿ ಮಠದ ಪೂಜ್ಯ ಕಾಳಹಸ್ತೇಂದ್ರ ಮಹಾಸ್ವಾಮಿ, ದುರುದುಂಡೇಶ್ವರ ಮಠದ ಪೂಜ್ಯ ಶಿವಕುಮಾರ ದೇವರು, ಪೂಜ್ಯ ರಾಜೇಂದ್ರ ಒಡೆಯರು, ಪೂಜ್ಯ ಅಭಿನವ ಹುಚ್ಚೇಶ್ವರ ಸ್ವಾಮೀಜಿ, ಪೂಜ್ಯ ನಂದಣ್ಣಪ್ಪ ಪೂಜಾರಿ ನೇತೃತ್ವ, ಮುಖಂಡ ಹಣಮಂತ್ರಾಯ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಮಾನಯ್ಯ ಪೂಜಾರಿ, ರಾಜು ಹವಾಲ್ದಾರ, ದಶರಥ ಆರೇಶಂಕರ, ಗುಂಡಪ್ಪ ಸೊಲ್ಲಾಪುರ, ದೇವಿಂದ್ರಪ್ಪ ಬಳಿಚಕ್ರ, ರಮೇಶ ಶೆಟ್ಟಿ, ಪರಮಣ್ಣ ತೇರಿನ, ಎಎಸ್‌ಐ ಬಸನಗೌಡ, ಪುರಸಭೆ ಸದಸ್ಯರು, ಗಣ್ಯಮಾನ್ಯರು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಇದ್ದರು.
ಸೋಮಶೇಖರ ದೊರೆ ಸ್ವಾಗತಿಸಿದರು. ಬಸಯ್ಯಸ್ವಾಮಿ ನಿರೂಪಿಸಿದರು. ಸೋಮನಾಥ ಸಂಗೀತ ಪಾಠ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿಂಗಣ್ಣ ಗುರಿಕಾರ ವಂದಿಸಿದರು.