Advertisement
1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ, ಕೆ. ಶಿವನ್ ಅವರು “ಚಂದ್ರಯಾನ- 2′ ಯೋಜನೆಯ ರೂವಾರಿ ಕೂಡಾ ಹೌದು .2. ಅವರನ್ನು ಭಾರತದ “ರಾಕೆಟ್ ಮ್ಯಾನ್’ ಎಂದೂ ಕರೆಯಲಾಗುತ್ತದೆ.
3. ಶಿವನ್ ಅವರು ಹುಟ್ಟಿದ್ದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸರಕ್ಕಲ್‌ವಿಳೈ ಎಂಬ ಸಣ್ಣ ಹಳ್ಳಿಯಲ್ಲಿ.
4. ಕೃಷಿ ಕುಟುಂಬದಿಂದ ಬಂದ ಅವರು ತಮಿಳು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದಿದರು.
5. ಶಿವನ್‌ರ ತಂದೆ ಮಾವಿನಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಶಾಲೆಗೆ ರಜೆ ಸಿಕ್ಕಿದಾಗೆಲ್ಲಾ ಶಿವನ್ ಕೂಡಾ ತಂದೆಯ ವ್ಯಾಪಾರಕ್ಕೆ ಕೈ ಜೋಡಿಸುತ್ತಿದ್ದರಂತೆ.
6. ಅವರಿಗೆ ಎಂಜಿನಿಯರಿಂಗ್ ಓದುವ ಆಸೆಯಿತ್ತು. ಆದರೆ, ಹಣಕಾಸಿನ ಅಡಚಣೆಯಿಂದಾಗಿ ತಂದೆ ಅದಕ್ಕೆ ಒಪ್ಪಲಿಲ್ಲವಂತೆ. ಒಂದು ವಾರ ಉಪವಾಸ ಮಾಡಿದರೂ ತಂದೆಯ ನಿರ್ಧಾರ ಬದಲಾಗದಿದ್ದಾಗ ಶಿವನ್, ಬಿ.ಎಸ್ಸಿ. (ಗಣಿತ) ಸೇರಿದರು.
7. ಪದವಿಯಲ್ಲಿ ಉತ್ತಮ ಅಂಕ ಪಡೆದ ನಂತರ ಅವರ ತಂದೆಯೇ, ಜಮೀನು ಮಾರಿಯಾದರೂ ನಿನ್ನನ್ನು ಇಂಜಿನಿಯರಿಂಗ್ ಓದಿಸುತ್ತೇನೆ ಎಂದಿದ್ದರು. ನಂತರ ಶಿವನ್, ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್‌ನಲ್ಲಿ ಎಂಜಿನಿಯರಿಂಗ್ ಮಾಡಿದರು.
8. ಇಡೀ ಕುಟುಂಬದಲ್ಲಿ ಅವರೊಬ್ಬರೇ ಪದವಿ ಶಿಕ್ಷಣವನ್ನು ಪೂರೈಸಿದವರು.
9. 1982ರಲ್ಲಿ ಇಸ್ರೋ ಸೇರಿದ ಶಿವನ್, ಪಿಎಸ್‌ಎಲ್‌ವಿ ಪ್ರಾಜೆಕ್ಟ್‌ನಲ್ಲಿ ಕೆಲಸ ಆರಂಭಿಸಿದರು.
10. ಡಾ. ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿ, ಇಸ್ರೋ ಮೆರಿಟ್ ಪ್ರಶಸ್ತಿ, ಡಾ. ಬಿರೆನ್ ರಾಯ್ ಬಾಹ್ಯಾಕಾಶ ವಿಜ್ಞಾನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಶಿವನ್‌ರಿಗೆ ಲಭಿಸಿವೆ.