Advertisement

ಕೈಗಾ ಅಣು ಸ್ಥಾವರ: 5-6ನೇ ಘಟಕ ಯೋಜನಾ ನಿರ್ದೇಶಕರಾಗಿ ಬಿ.ಕೆ. ಚೆನ್ನಕೇಶವ ನಿಯುಕ್ತಿ

11:15 PM Jul 18, 2022 | Team Udayavani |

ಕಾರವಾರ: ಕೈಗಾ ಅಣುಸ್ಥಾವರ ಯೋಜನೆ 5 ಮತ್ತು 6ನೇ ಘಟಕದ ಯೋಜನಾ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೂಲದ ಬಿ.ಕೆ. ಚೆನ್ನಕೇಶವ ನಿಯುಕ್ತಿಗೊಂಡಿದ್ದಾರೆ.

Advertisement

ಅವರು 30 ವರ್ಷಗಳಿಂದ ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಶನ್‌ನಲ್ಲಿ ವೈಜ್ಞಾನಿಕ ಅ ಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಕೈಗಾ ಯೋಜನೆ ಒಂದು, ಎರಡು, ಮೂರು ಮತ್ತು ನಾಲ್ಕು ಘಟಕಗಳು ಹಾಗೂ ಕಲ್ಪಾಕಂ, ಹರಿಯಾಣದ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

ಈ ಹಿಂದೆ ಎನ್‌ಪಿಸಿಐಎಲ್‌ ಕೈಗಾ 4 ಮತ್ತು 4ನೇ ಘಟಕದ ನಿರ್ಮಾಣ ಕೆಲಸ ಕೇವಲ 59 ತಿಂಗಳಲ್ಲಿ ಮುಗಿಸಿದ ದಾಖಲೆಯಿದ್ದು, ಇದರಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಈಗ ಬಿ.ಕೆ. ಚೆನ್ನಕೇಶವ ನೇತೃತ್ವದಲ್ಲಿ ಕೈಗಾ 5 ಮತ್ತು 6ನೇ ಘಟಕ ನಿರ್ಮಾಣವಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next