Advertisement

ಸಾಗರ:  ವಿಕಿಪೀಡಿಯಾ ಪ್ರಕಾರ ಕಾಗೋಡು ಈಗ ಮಾಜಿ ರಾಜಕಾರಣಿ!

07:34 PM Jun 27, 2022 | Team Udayavani |

ಸಾಗರ: ಬರಲಿರುವ ವಿಧಾನಸಭಾ ಚುನಾವಣೆಗೆ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಅವರು ಮತ್ತೊಮ್ಮೆ ಸ್ಪರ್ಧಿಸಬಹುದು ಎಂಬ ಇಂಗಿತವನ್ನು ಕಾಗೋಡು ಪುತ್ರಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಇತ್ತೀಚೆಗೆ ವ್ಯಕ್ತಪಡಿಸಿದ್ದರೆ, ವಿಕಿಪೀಡಿಯಾ ತನ್ನ ಪುಟದಲ್ಲಿ ಕಾಗೋಡು ಅವರನ್ನು ಮಾಜಿ ರಾಜಕಾರಣಿ ಎಂದು ಘೋಷಿಸಿದೆ.

Advertisement

ಜನ ಜನರ ಮಾತುಗಳನ್ನು ನಂಬುವುದಕ್ಕಿಂತ ಗೂಗಲ್, ವೀಕಿಪೀಡಿಯಾಗಳನ್ನು ನಂಬುತ್ತಿದ್ದಾರೆ. ರಸ್ತೆ ಬದಿಯ ಮಾರ್ಗಸೂಚಕ ಕಲ್ಲಿಗಿಂತ ಗೂಗಲ್ ಮ್ಯಾಪ್ ಈಗಿನ ಜನರಿಗೆ ಹೆಚ್ಚು ನಂಬಲರ್ಹ ಎಂಬ ಪರಿಸ್ಥಿತಿ ಇರುವಾಗ ನೋಡಿದರೆ, ಕಾಗೋಡು ತಿಮ್ಮಪ್ಪ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಸ್ವಾರಸ್ಯಕರ ವಿಶ್ಲೇಷಣೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ವಿಕಿಪೀಡಿಯಾ ‘ಕಾಗೋಡು ತಿಮ್ಮಪ್ಪ ಈಸ್ ಎನ್ ಇಂಡಿಯನ್ ರಿಟೈರ್ಡ್ ಪೊಲಿಟಿಷಿಯನ್’ ಎಂದು ವರ್ಣಿಸಿದೆ. ವಿಧಾನಸಭೆಯ ಸ್ಪೀಕರ್ ಆಗಿ ಕೂಡ ಕಾರ್ಯನಿರ್ವಹಿಸಿರುವ 90  ವರ್ಷದ ಕಾಗೋಡು ತಿಮ್ಮಪ್ಪ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಎಚ್.ಹಾಲಪ್ಪ ಹರತಾಳು ಅವರ ಕೈಯಲ್ಲಿ ಪರಾಭವಗೊಂಡಿದ್ದರು. ಹಲವು ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿರುವರಾದರೂ ಅಧಿಕೃತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next