Advertisement

ಕಗ್ಗೆರೆ ಗ್ರಾಪಂ ಕಾವ್ಯಾ ಅಧ್ಯಕ್ಷೆ: ಅವಿರೋಧ ಆಯ್ಕೆ

02:35 PM May 22, 2022 | Team Udayavani |

ಕೆ.ಆರ್‌.ನಗರ: ತಾಲೂಕಿನ ಕಗ್ಗೆರೆ ಗ್ರಾಪಂ ಅಧ್ಯಕ್ಷೆಯಾಗಿ ಜೆಡಿಎಸ್‌ ಬೆಂಬಲಿತ ಕಾವ್ಯಾ ಗಂಗಾಧರ ಅವಿರೋಧವಾಗಿ ಆಯ್ಕೆಯಾದರು.

Advertisement

ಈ ಹಿಂದೆ ಅಧ್ಯಕ್ಷರಾಗಿದ್ದ ಶಿಲ್ಪಾ ಶಾಂತಾರಾಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಎಂ.ಅಶೋಕ್‌ಕುಮಾರ್‌ ಚುನಾವಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಪಂ

ಉಪಾಧ್ಯಕ್ಷ ಮಹದೇವ, ಸದಸ್ಯರಾದ ಶಿಲ್ಪಾ ಶಾಂತಾರಾಂ, ಗೀತಾ ಮಂಜುನಾಥ್‌, ಕಮಲಮ್ಮ ಜವರನಾಯಕ, ಚಂದ್ರಮ್ಮ ಮಲ್ಲಿಕಾರ್ಜುನ, ಕೆ.ಎಸ್‌.ಸುನಿಲ್‌ಕುಮಾರ್‌, ಜಯಮ್ಮ ರಾಜೇಗೌಡ, ಲತಾ ಮರೀಗೌಡ, ಪುಟ್ಟರಾಜನಾಯಕ, ಎಸ್‌.ಆರ್‌.ತ್ರಿಗುಣ ಮೂರ್ತಿ, ಆರ್‌.ಸವಿತಾ ಹರೀಶ್‌, ಪಿಡಿಒ ಕೆ.ಎಸ್‌.ಭಾಸ್ಕರ್‌, ಲೆಕ್ಕಸಹಾಯಕ ಅನಿಲ್‌ ಕುಮಾರ್‌, ಬಿಲ್‌ ಕಲೆಕ್ಟರ್‌ ಮಹದೇವ ನಾಯಕ, ಡಿಇಒ ವಿನುತಾ ಹಾಜರಿದ್ದರು.

ಜಿಲ್ಲಾ ಯುವ ಜೆಡಿಎಸ್‌ ಉಪಾಧ್ಯಕ್ಷ ಕೆ.ಜೆ. ಕುಚೇಲ, ತಾಲೂಕು ಪ್ರಧಾನ ಕಾರ್ಯದರ್ಶಿ ಕಗ್ಗೆರೆ ಕೆ.ಟಿ.ತ್ಯಾಗರಾಜು, ಮಾಜಿ ಅಧ್ಯಕ್ಷ ನಾರಾಯಣಪುರ ಬಾಬು, ಜೆಡಿಎಸ್‌ ಮುಖಂಡರಾದ ಶಾಂತರಾಂ, ಸುರೇಶ್‌, ಶಿವಕುಮಾರ್‌, ಶಂಕರ್‌, ಮಲ್ಲಿಕಾ, ಚನ್ನಪ್ಪ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next