ಬೆಂಗಳೂರು: ಶಿಕ್ಷಣ ವ್ಯಾಪಾರೀಕರಣ ಮತ್ತು ಪಾಶ್ಚಾತ್ಯೀಕರಣ ತಡೆಯುವ ಸವಾಲನ್ನು ಸಮರ್ಥವಾಗಿ ಎದುರಿಸಿ, ಶಿಕ್ಷಣದಲ್ಲಿ ಭಾರತೀಯತೆ ತರಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಓದಿ : ಬೈಡನ್ ದಂಪತಿಗಳು ತೆರೆದಿಟ್ಟ ಪ್ರೇಮ್ ಕಹಾನಿ..!
ಶಿಕ್ಷಣ ವ್ಯಾಪಾರೀಕರಣ ಹಾಗೂ ಪಾಶ್ಚಾತ್ಯೀಕರಣ ಇಂದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಈ ಸವಾಲನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಭಾರತೀಯತೆ ಶಿಕ್ಷಣದಲ್ಲಿ ಬರಬೇಕು ಮತ್ತು ಭಾರತೀಯರ ಸಾಹಸ, ವೀರತ್ವದ ಪರಿಚಯ ಶಿಕ್ಷಣದ ಮೂಲಕ ಮಕ್ಕಳಿಗೆ ಆಗಬೇಕು ಎಂದು ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 40ನೇ ಪ್ರಾಂತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಭಾವನೆ, ಆದರ್ಶಗಳಿಗೆ ದಕ್ಕೆ ತರುವ ಕೆಲಸವನ್ನು ನಕ್ಸಲರು, ಮಾವೋವಾದಿಗಳು, ಎಡಪಂಥೀಯರು ಮಾಡುತ್ತಿದ್ದಾರೆ. ಯುವ ಸಮೂಹ ಒಗ್ಗಟ್ಟಿನಿಂದ ಇದ್ದಲ್ಲಿ ಮಾತ್ರ ಇದಕ್ಕೆಲ್ಲ ಸಮರ್ಥ ಉತ್ತರ ನೀಡಲು ಸಾಧ್ಯವಿದೆ. ಯುವ ಸಮೂಹದಲ್ಲಿ ಕೀಳರಿಮೆ ಇರಬಾರದು, ನಾವೆಲ್ಲರೂ ಬದಲಾವಣೆ ಹರಿಕಾರರು ಎಂಬುದನ್ನು ಮರೆಯಬಾರದು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ವೆಂಕಟೇಶ್, ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಲಕ್ಷ್ಮಣ್, ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ಈ ಸಂದರ್ಭ ಉಪಸ್ಥಿತರಿದ್ದರು.
ಓದಿ : ತಂತ್ರಜ್ಞಾನ ಅರಿವಿಗೆ ಡಿಜೆ ಫೋಟೋ ಎಕ್ಸ್‌ಪೋ ವೇದಿಕೆ