Advertisement
ಪಟ್ಟಣದ ಛತ್ರದ ಬೀದಿ, ಬಸವೇಶ್ವರ ವೃತ್ತ, ಎಪಿಎಂಸಿ, ಮರವಂಜಿ ವೃತ್ತ, ಹಳೇ ಸಂತೆ ಮೈದಾನ ಸೇರಿದಂತೆ ಇತರೆ ಬಡಾವಣೆ ಮತ್ತು ಬೀದಿಗಳಲ್ಲಿ ಅಲ್ಲಲ್ಲಿ ಗುಂಪು-ಗುಂಪಾಗಿ ಸಾಗುವ ಶ್ವಾನಗಳ ಹಿಂಡು ದಾರಿಯಲ್ಲಿ ಸಾಗುವವರನ್ನು ಕಂಡ ಕೂಡಲೇ ಬೊಗಳುತ್ತ ಕಚ್ಚಲು ಮುಂದಾಗುತ್ತವೆ. ಇದರಿಂದ ಜನ ನಾಯಿಗಳಿವೆಯೇ ಇಲ್ಲವೇ ಎಂಬುದನ್ನು ನೋಡುತ್ತ ಭಯದಲ್ಲೇ ಓಡಾಡುವಂತಾಗಿದೆ.
ಹೆದರುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಅಂಗಡಿಗಳಿಗೆ ತೆರಳಲು ಮಕ್ಕಳಲ್ಲ, ಹಿರಿಯರೂ ಸಹ ಹಿಂಜರಿಯುತ್ತಿದ್ದಾರೆ. ಯಾವ ರಸ್ತೆ ನೋಡಿದರೂ ಗುರ್.. ಎನ್ನುವ , ಬೊಗಳುತ್ತ ಒಮ್ಮೆಲೇ ಕಚ್ಚಲು ಬರುವ ನಾಯಿಗಳು ಅಡ್ಡಾಡುತ್ತಲೇ ಇರುತ್ತವೆ. ಎರಡು ಸಾವಿರ ಶ್ವಾನ: ಕಡೂರು ಪಟ್ಟಣದಲ್ಲಿ ಅಂದಾಜು ಎರಡು ಸಾವಿರ ನಾಯಿಗಳಿವೆ ಎಂದು ಹೇಳಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಬಹುತೇಕ ಬೀದಿಗಳಲ್ಲಿ ಜಮಾಯಿಸುವ ನಾಯಿಗಳು ಅರಚುತ್ತಾ, ಬೊಗಳುತ್ತಾ ತಿರುಗುತ್ತವೆ. ಇದರಿಂದ ರೈಲು ಮತ್ತು ಬಸ್ ಮೂಲಕ ಬೇರೆ ಊರಿಗೆ ತೆರಳುವವರು, ಜಾಗಿಂಗ್ ಹಾಗೂ
ವಾಕಿಂಗ್ ಮಾಡುವವರು, ಹಾಲು ಮತ್ತು ದಿನಪತ್ರಿಕೆ ಹಂಚುವವರು ಹೀಗೆ ನಿತ್ಯ ನೂರಾರು ಜನ ನಾಯಿಗಳಿಂದ ಕಿರಿಕಿರಿ ಅನುಭವಿಸುವಂತಾಗಿದೆ.
Related Articles
ಅವಕಾಶವಿಲ್ಲ. ಬದಲಿಗೆ ಅವುಗಳನ್ನು ಹಿಡಿದು ಸಂತಾನ ಹರಣ
ಚುಚ್ಚುಮದ್ದು ನೀಡಬೇಕು. ಆದರೆ ಈ ಕಾರ್ಯಕ್ಕೆ ಮುಂದಾಗಬೇಕಾದ ಪುರಸಭೆ ಮೌನವಾಗಿದೆ. ಆದಷ್ಟು ಬೇಗ ಬೀದಿ ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ
ದೊರಕಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
Advertisement
ಪಟ್ಟಣದ ಆಸ್ಪತ್ರೆಗೆ ನಿತ್ಯ 4-5 ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯಲು ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿಲ್ಲ. ಗಾಯದ ಪ್ರಮಾಣ ಮತ್ತು ಹುಚ್ಚು ನಾಯಿಯೇ ಎಂಬುದನ್ನು ಖಚಿತಪಡಿಸಿಕೊಂಡು ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.ಡಾ| ಉಮೇಶ್,
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಮಿತಿ ಮೀರಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ನಾಯಿಗಳನ್ನು ಹಿಡಿದು
ಅವುಗಳಿಗೆ ಸಂತಾನ ಹರಣ ಲಸಿಕೆ ನೀಡಿದಲ್ಲಿ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ ತಜ್ಞರ ಅವಶ್ಯಕತೆ
ಇದ್ದು, ಸಂಬಂಧಪಟ್ಟ ಅಧಿಕಾರಿಗಳು ನಾಯಿ ಹಿಡಿಯುವ ತಜ್ಞರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಬೇಕು.
ವೆಂಕಟೇಶ್ ಗಾಣಿಗ,
ಸ್ಥಳೀಯ ವ್ಯಾಪಾರಿ ಎ.ಜೆ. ಪ್ರಕಾಶ್‌ಮೂರ್ತಿ