Advertisement

ಅಮೃತ್‌ ಮಹಲ್‌ ಗಂಡು ಕರುಗಳ ಹರಾಜು

01:45 PM Jan 23, 2020 | Naveen |

ಕಡೂರು: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಸಹಯೋಗದೊಂದಿಗೆ ಕಡೂರು-ಬೀರೂರು ನಡುವೆ ಇರುವ ಜಾನುವಾರು ತಳಿ ಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್‌ ಮಹಲ್‌ ಗಂಡು ಕರುಗಳ ಭಾರೀ ಬಹಿರಂಗ ಹರಾಜು ಬುಧವಾರ ನಡೆಯಿತು.

Advertisement

ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್‌ ಮಹಲ್‌ ಆಕರ್ಷಕ ಮೈಕಟ್ಟನ್ನು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿರುವಂತಹ ಹೋರಿಕರುಗಳಿಗೆ ಭಾರೀ ಬೇಡಿಕೆಯಿದ್ದು, ಹರಾಜು ಪ್ರಕ್ರಿಯೆ ಅಂದಿನಿಂದಲೂ ಚಾಲನೆಯಲ್ಲಿದೆ. ನಂತರದ ದಿನಗಳಲ್ಲಿ ಸರ್ಕಾರದ ಅಧೀನದಲ್ಲಿರುವ ರಾಜ್ಯದ ವಿವಿಧೆಡೆಯಲ್ಲಿ ತಳಿ ಸಂವರ್ಧನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ಬೆಳೆದಂತಹ ಹೋರಿ ಕರುಗಳಿಗೆ ಭಾರೀ ಬೇಡಿಕೆಯಿದೆ. ಜಿಲ್ಲೆಯ ಬಾಸೂರು, ಲಿಂಗದಹಳ್ಳಿ, ಅಜ್ಜಂಪುರ ಹಾಗೂ ನೆರೆಯ ಜಿಲ್ಲೆಯ ರಾಮಗಿರಿ, ಹಬ್ಬನಗದ್ದೆ, ಚಿಕ್ಕಎಮ್ಮಿಗನೂರು ಮತ್ತು ರಾಯಚಂದ್ರ ಅಮೃತ್‌ಮಹಲ್‌ ಕಾವಲುಗಳಲ್ಲಿ ವೈಶಿಷ್ಟಪೂರ್ಣವಾಗಿ ಬೆಳೆಸಲಾಗುತ್ತದೆ.

ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ,
ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೆ„ದೆ, ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆ ಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಹೋರಿಕರುಗಳು ಕೇವಲ ಒಂದೂವರೆ ವರ್ಷದಿಂದ ಎರಡು ವರ್ಷದ ಒಳಗಿನದ್ದಾಗಿವೆ.

ಹರಾಜಿನಲ್ಲಿ 192 ಅಮೃತ್‌ ಮಹಲ್‌ ಕ್ಷೇತ್ರದ ಹೋರಿಕರುಗಳು, 14 ಬೀಜದ ಹೋರಿಗಳನ್ನು
ಇಡಲಾಗಿತ್ತು. ಹಬ್ಬನಘಟ್ಟ ಕೇಂದ್ರದ ಮೆಣಸಿ ಮತ್ತು ನಿರ್ವಾಣಿ ತಳಿಯ ಜೋಡಿ ರಾಸು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪೆದವಬೈಯ್ಯ ಅವರು ಇಂದಿನ ಗರಿಷ್ಠ ಬೆಲೆ 2.1 ಲಕ್ಷಕ್ಕೆ ಕೂಗಿ ತಮ್ಮದಾಗಿಸಿಕೊಂಡರು. ಚಿತ್ರದುರ್ಗದ ಜಿಲ್ಲೆಯ ಗೊಡಬನಾಳು ಗ್ರಾಮದ ಕಲ್ಲೇಶ್‌ ಸಣ್ಣಿ ಮತ್ತು ಪಾತ್ರೆ ಜೋಡಿಯನ್ನು 1.51ಲಕ್ಷಕ್ಕೆ ಪಡೆದುಕೊಂಡರು.

ಹರಾಜು ಪ್ರಕ್ರಿಯೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಬಿಡ್ಡುದಾರರು ಪಾಲ್ಗೊಂಡಿದ್ದು,
ಹಾಸನ, ಮೈಸೂರು, ಅರಸೀಕೆರೆ ರಾಣಿಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Advertisement

ಹರಾಜು ಪ್ರಕ್ರಿಯೆಯಲ್ಲಿ ಗೊಂದಲ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಬೀರೂರು
ಪೊಲೀಸ್‌ ಉಪನಿರೀಕ್ಷಕ ಕೆ.ವಿ. ರಾಜಶೇಖರ್‌ ಸಿಬ್ಬಂದಿಯೊಂದಿಗೆ ಸೂಕ್ತ ಭದ್ರತೆ ಕಲ್ಪಿಸಿದ್ದರು.
ಜಂಟಿ ನಿರ್ದೇಶಕರಾದ ಡಾ| ಪ್ರಶಾಂತಮೂರ್ತಿ ಅಮೃತ್‌ ಮಹಲ್‌ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ರಮೆಶ್‌ ಕುಮಾರ್‌, ಡಾ. ಮೋಹನ್‌, ಡಾ| ಸಿದ್ದಗಂಗಪ್ಪ ಡಾ| ಶ್ರೀನಿವಾಸ್‌ ಬೀರೂರು ತಳಿ ಸಂವಂರ್ಧನ ಕೇಂದ್ರದ ಡಾ.ಬಾನುಪ್ರಕಾಶ್‌, ಡಾ| ನವೀನ್‌, ಡಾ|
ಮಂಜುನಾಥ್‌, ಡಾ| ಕಿರಣ್‌ ಮತ್ತಿತರಿದ್ದರು.

ಅಮೃತ್‌ ಮಹಲ್‌ ತಳಿಯ ಹೋರಿಗಳು ಉತ್ತಮ ದೇಶೀಯ ತಳಿಗಳಾಗಿದ್ದು, ಬಹು ಬೇಡಿಕೆಯಿದೆ. ಕೃಷಿ ಚಟುವಟಿಕೆಗಳಿಗೂ ಹೇಳಿ ಮಾಡಿಸಿರುವಂತಹ ಈ ಹೋರಿಗಳನ್ನು ನಾವು
ಕೊಂಡೊಯ್ದು ಒಂದೆರಡು ವರ್ಷಗಳ ಕಾಲ ಬೇಸಾಯದಂತಹ ಕಾಯಕಗಳಿಗೆ ಬಳಸಿಕೊಂಡು ನಂತರ ಬೇರೆಯವರಿಗೆ ಉತ್ತಮ ಲಾಭದಾಯಕ ಬೆಲೆಗೆ ಮಾರಾಟ ಮಾಡಲಾಗುವುದು.
ಮಹೇಶ್‌ಗೌಡ, ರೈತ, ಹಾಸನ

512 ವರ್ಷಗಳ ಇತಿಹಾಸ ಇರುವ ಅಮೃತ್‌ ಮಹಲ್‌ ಹೋರಿಗಳು ಉತ್ತಮವಾಗಿದ್ದು,
ಮಹಾರಾಜರ ಕಾಲದಿಂದಲೂ ಈ ತಳಿಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ 190 ಹೋರಿಕರುಗಳನ್ನು ಬಿಕರಿ ಮಾಡಲಾಗಿದ್ದು, ಪ್ರಸ್ತುತ ಈ ವರ್ಷ
ಅವುಗಳ ಸಂಖ್ಯೆ ಗಣನೀಯವಾಗಿ 21 ಕ್ಕೆ ಏರಿರುವುದು ಪ್ರಗತಿಯ ಸಂಕೇತವಾಗಿದೆ. ಇಂದಿನ
ಬಿಡ್‌ನ‌ಲ್ಲಿ ವಿವಿಧ ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ರಾಸುಗಳು ರೈತರ ಹೊಸಮನೆ ಕೆಲಸಗಳಿಗೆ ಸೂಕ್ತವಾಗಿದ್ದು ಅವರ ಪ್ರಗತಿಗೆ ನೆರವಾಗುತ್ತವೆ.
.ಡಾ| ಶ್ರೀನಿವಾಸ್‌,
ಜಂಟಿ ನಿರ್ದೇಶಕರು, ಪಶುಪಾಲನಾ
ಇಲಾಖೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next