Advertisement

ಬ್ಲಡ್‌ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿ: ಕೆಂಪರಾಜು

04:38 PM Apr 22, 2020 | Naveen |

ಕಡೂರು: ಕಡೂರು ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ಬ್ಲಡ್‌ ಬ್ಯಾಂಕ್‌ ಅವಶ್ಯಕತೆ ಇದೆ. ಆದ್ದರಿಂದ ಶಾಸಕರು ಗಮನ ಹರಿಸಿ ಬ್ಲಡ್‌ ಬ್ಯಾಂಕ್‌ ತೆರೆಯಲು ಮುಂದಾಗಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು.

Advertisement

ಪಟ್ಟಣದ ನಂದಿ ಕ್ರೀಡಾಭವನದಲ್ಲಿ ಕಾಂಗ್ರೆಸ್‌ ಯುವಮುಖಂಡ ಕೆ.ಎಂ. ಭರತ್‌ ಕೆಂಪರಾಜು ಮತ್ತು ಎನ್‌ಎಸ್‌ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಯಾಣ ತೇಜಸ್ವಿ ಮತ್ತು ಯುವ ಕಾಂಗ್ರೆಸ್‌ ಅಧ್ಯಕ್ಷ ಬೀರೂರು ಹರ್ಷ, ಬೀರೂರು ಸ್ವಾಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ರಕ್ತ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ರೆಡ್‌ಕ್ರಾಸ್‌ ಸಂಸ್ಥೆಯ ಸಹಕಾರದಿಂದ ರಕ್ತನಿಧಿ ಘಟಕ ಆರಂಭಿಸಲಾಗಿತ್ತು. ಆದರೆ ಕಾಲಕ್ರಮೇಣ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿತು. ಕಡೂರು- ಬೀರೂರು ಪಟ್ಟಣಗಳು ದಿನೇ ದಿನೇ ಬೆಳೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಅವಳಿ ಪಟ್ಟಣದಲ್ಲಿ ಹಾದು ಹೋಗಿದ್ದು ಅಫಘಾತ ವಲಯವೆಂದು ಗುರುತಿಸಿಕೊಂಡಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕೆ.ಎಂ. ವಿನಾಯಕ ಮಾತನಾಡಿದರು. ಚಿಕ್ಕಮಗಳೂರಿನ ವಿಶ್ವ ವುಮೇನ್‌ ಆ್ಯಂಡ್‌ ಚೈಲ್ಡ್‌ ವೆಲ್‌ಫೇರ್‌ ಆರ್ಗನೈಸೇಷನ್‌ನ ಬ್ಲಾಡ್‌ ಬ್ಯಾಂಕಿನ ವ್ಯವಸ್ಥಾಪಕ ತಿಮ್ಮಯ್ಯ ಮತ್ತು ಸಿಬ್ಬಂದಿ ವರ್ಗದವರು ಸುಮಾರು 56 ಜನರ ರಕ್ತವನ್ನು ಸಂಗ್ರಹಿಸಿದರು. ಪತ್ರಕರ್ತರಾದ ಬಾಲುಮಚ್ಚೇರಿ 54 ನೇ ಬಾರಿ ರಕ್ತ ನೀಡಿ ವೈಯಕ್ತಿಕ ದಾಖಲೆ ಮಾಡಿದರೆ ಮತ್ತೋರ್ವ ಪತ್ರಕರ್ತ ನಾಗೇಂದ್ರ ಪ್ರಸಾದ್‌ 8 ನೇ ಬಾರಿ ರಕ್ತ ನೀಡಿದರು. ಭರತ್‌ ಕೆಎಂಕೆ, ಕಾಂಗ್ರೆಸ್‌ ಕಿಸಾನ್‌ ಸೆಲ್‌ನ ಬೀರೂರು ಘಟಕದ ಅಧ್ಯಕ್ಷ ಪ್ರದೀಪ್‌ ಹಾಗೂ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next