Advertisement

Kadur: ಬೈಕ್ ಗೆ ಕಾರು ಢಿಕ್ಕಿಯಾಗಿ ಮಹಿಳೆ ಸಾವು, ಸವಾರ ಆಸ್ಪತ್ರೆಗೆ

07:43 PM Aug 20, 2023 | Team Udayavani |

ಕಡೂರು : ತಾಲೂಕಿನ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಲಿಂಗ್ಲಾಪುರ ಬಳಿ ಭಾನುವಾರ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಸವಾರೆಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.

Advertisement

ಪಕ್ಕದ ಅರಸೀಕೆರೆ ತಾಲೂಕಿನ ಮಾವುತನಹಳ್ಳಿಯ ಕಲ್ಲಮ್ಮ(58)ಮೃತಪಟ್ಟಿದ್ದು. ಬೈಕ್ ಚಲಾಯಿಸುತ್ತಿದ್ದ ಚಂದ್ರಶೇಖರ್ ಅವರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೈಕ್ ಸವಾರರು ಕಡೂರಿನಿಂದ ಅರಸೀಕೆರೆಗೆ ಪ್ರಯಾಣ ಬೆಳೆಸಿದ್ದರು.ಕಾರು ಕಡೂರು ಕಡೆಗೆ ಬರುತ್ತಿತ್ತು ಎಂಬ ಮಾಹಿತಿಯನ್ನು ಕಡೂರು ಪೊಲೀಸ್ ಠಾಣಾಧಿಕಾರಿ ಧನಂಜಯ ಅವರು ನೀಡಿದ್ದು, ದೂರು ದಾಖಲು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next