ಗುತ್ತಿಗಾರು: ಸೌದೆ ತರಲೆಂದು ರಬ್ಬರ್ ತೋಟಕ್ಕೆ ತೆರಳಿದ್ದ ದಂಪತಿಯ ಮೇಲೆ ಕಾಡುಕೋಣ ದಾಳಿ ನಡೆಸಿ ಅವರು ಗಾಯಗೊಂಡ ಘಟನೆ ದೇವಚಳ್ಳ ಗ್ರಾಮದ ಗುಡ್ಡೆ ಎಂಬ ಪ್ರದೇಶದಲ್ಲಿ ನಡೆದಿದೆ.
Advertisement
ಇಲ್ಲಿನ ಗುಡ್ಡೆಮನೆಯ ಧರ್ಮಪಾಲ ಎಂಬವರು ಗುರುವಾರ ಬೆಳಗ್ಗೆ ಪತ್ನಿಯೊಂದಿಗೆ ತಮ್ಮ ರಬ್ಬರ್ ತೋಟಕ್ಕೆ ತೆರಳಿದ್ದರು. ಆಗ ಮರೆಯಲ್ಲಿದ್ದ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಕಾಡುಕೋಣ ದಾಳಿ ವೇಳೆ ಓಡಲು ಯತ್ನಿಸಿದರೂ ಬಿದ್ದು ಧರ್ಮಪಾಲರ ತಲೆಯ ಭಾಗಕ್ಕೆ, ದವಡೆಗೆ ಗಂಭೀರ ಗಾಯವಾಗಿದೆ. ಅವರ ಪತ್ನಿಗೂ ಗಾಯವಾಗಿದ್ದು, ಇಬ್ಬರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.