ಪುಂಜಾಲಕಟ್ಟೆ: ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಚೆನ್ನೈತ್ತೋಡಿ ಗ್ರಾಮದ ಕಡ್ತಲಬೆಟ್ಟು ಕೋಡಿಬಾಕಿಮಾರ್ ಎಂಬಲ್ಲಿ ಮೇ 25 ರಂದು ಸಂಭವಿಸಿದೆ.
ಇಲ್ಲಿನ ಸುಧಾಕರ ಶೆಟ್ಟಿ ಅವರ ಮನೆಗೆ ಮಧ್ಯರಾತ್ರಿ ಸುಮಾರು 12.30ರ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಸುಮಾರು 2 ಲಕ್ಷಕ್ಕೂ ರೂ.ಗೂ ಅಧಿಕ ನಷ್ಟ
ಸಂಭವಿಸಿದೆ. ಈ ವೇಳೆ ಮನೆ ಮಂದಿ ಮಲಗಿದ್ದು, ಎಚ್ಚರಗೊಂಡು ಮನೆಯಿಂದ ಹೊರಗೋಡಿ ಬಂದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮನೆಯ ಒಂದು ಪಾರ್ಶ್ವ ಬೆಂಕಿಗೆ ಅಹುತಿಯಾಗಿದೆ. ಮನೆಯ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರೊಳಗೆ ದಾಸ್ತಾನು ಮಾಡಲಾಗಿದ್ದ ಒಣ ಅಡಿಕೆ ಮತ್ತು ಬೆಲೆಬಾಳುವ ಮರದ ಸೊತ್ತುಗಳು ಕರಕಲಾಗಿವೆ. ಸ್ಥಳೀಯ ಯುವಕರು ನೀರು ಹಾಯಿಸಿ ಬೆಂಕಿ ಆರಿಸಿದ್ದರು. ಸ್ಥಳಕ್ಕೆ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.