ಮಹಾನಗರ: ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಜಲಕ್ಷಾಮ ತಲೆದೋರಿದ್ದು, ಆ ಪ್ರಯುಕ್ತ ಅಖೀಲ ಭಾರತ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇಗುಲದ ಕೆರೆಯ ಪ್ರಾಂಗಣದಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ 7.30ರ ವರೆಗೆ ವರುಣ ದೇವರ ಪ್ರೀತ್ಯರ್ಥ,ಪರ್ಜನ್ಯಜಪ,ರುದ್ರ ಪಾರಾಯಣ, ವಿಷ್ಣುಸಹಸ್ರನಾಮ ಪಠಣ ನಡೆಯಿತು.
ಕದ್ರಿ ದೇಗುಲದ ಅರ್ಚಕ ರಾಘವೇಂದ್ರ ಅಡಿಗ, ಡಾ| ಪ್ರಭಾಕರ ಅಡಿಗ ದೀಪ ಬೆಳಗಿಸಿದರು. ಇತರ ವೈದಿಕರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನೇತೃತ್ವ ವಹಿಸಿದ್ದರು.
ವಿಪ್ರರಿಂದ ಜಪ
ವಿಪ್ರ ಸಮೂಹ ಕೊಂಚಾಡಿ, ರುದ್ರ ಸಮಿತಿ ನಂತೂರು, ಸುಬ್ರಹ್ಮಣ್ಯ ಸಭಾ, ವಿಪ್ರ ಸಭಾ ಕೊಡಿಯಾಲಬೈಲ್, ಕರ್ಹಾಡ ಬ್ರಾಹ್ಮಣ ಸಂಘ, ಸಮತಾ ಬಳಗ, ಶಿವಳ್ಳಿ ಬ್ರಾಹ್ಮಣ, ಸಹಿತ ವಿವಿಧ ಸಂಘಟನೆಗಳ 200ಕ್ಕೂ ಮಿಕ್ಕಿ ವಿಪ್ರರು ಭಾಗವಹಿಸಿ ಜಪ ಮತ್ತು ಪಾರಾಯಣಗಳನ್ನು ನಡೆಸಿದರು.
ನಾರಾಯಣ ಕಂಜರ್ಪಣೆ, ಸುಧಾಕರ ರಾವ್ ಪೇಜಾವರ, ರಾಮಕೃಷ್ಣ, ನಂದಳಿಕೆ ಬಾಲಚಂದ್ರ ರಾವ್, ಶ್ರೀಕಾಂತ್ ಸುಬ್ರಹ್ಮಣ್ಯ ಸಭಾ, ಶ್ರೀಧರ ಐತಾಳ, ರಘುರಾಮ ಲ್ಯಾಂಡ್‌ಲಿಂಕ್ಸ್, ಎಲ್ಲೂರು ರಾಮಚಂದ್ರ ಭಟ್, ಕೃಷ್ಣ ಭಟ್ ಕೆ., ಕೆ. ವಾಸುದೇವ ಭಟ್, ಗಣೇಶ್ ಹೆಬ್ಟಾರ್, ರಾಮ ಹೊಳ್ಳ ಅವರಲ್ಲದೆ ದಿನೇಶ್ ದೇವಾಡಿಗ ಕದ್ರಿ, ಅರುಣ್ ಕುಮಾರ್ ಕದ್ರಿ, ರೂಪಾ ಡಿ. ಬಂಗೇರ, ಅಶೋಕ ಡಿ.ಕೆ., ಸಹಿತ ಸಾರ್ವಜನಿಕರು ಪಾಲ್ಗೊಂಡರು.