Advertisement

ಕದ್ರಿ ಪಾರ್ಕ್‌ನಲ್ಲಿ ಆರ್ಕಿಡ್‌ ಪ್ರದರ್ಶನ

09:56 PM Apr 14, 2019 | Team Udayavani |

ಮಹಾನಗರ: ಆಲಿಯಾ ಆರ್ಕಿಡ್‌ ಸಂಸ್ಥೆ ವತಿಯಿಂದ ನಗರದ ಕದ್ರಿ ಪಾರ್ಕ್‌ನಲ್ಲಿ ಎ.16ರ ವರೆಗೆ ನಡೆಯಲಿರುವ ಆರ್ಕಿಡ್‌ ಪ್ರದರ್ಶ ನವನ್ನು ಸೈಂಟ್‌ ಅಲೋಶಿಯಸ್‌ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವಂ| ಡಾ| ಲಿಯೋ ಡಿ’ಸೋಜಾ ಶನಿವಾರ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು, ಮಂಗಳೂರಿನ ಜನತೆಗೆ ಈ ಹಿಂದೆ ಆರ್ಕಿಡ್‌ ಗಿಡಗಳ ಬಗ್ಗೆ ಮಾಹಿತಿ ಕಡಿಮೆ ಇತ್ತು. ಆದರೆ ಈಗ ಕರಾವಳಿಯವರು ಆರ್ಕಿಡ್‌ ಮಹತ್ವವನ್ನು ಅರಿತಿದ್ದಾರೆ. ಕ್ವೀನಿ ಲಸ್ರಾದೋ ಅವರಿಗೆ ಆರ್ಕಿಡ್‌ ಬಗೆಗಿನ ಅಪಾರವಾದ ಪ್ರೀತಿ ಮೆಚ್ಚುವಂತಹದ್ದು ಎಂದು ಹೇಳಿದರು.

ಸಂಸ್ಥೆಯ ಕ್ವೀನಿ ಲಸ್ರಾದೋ ಮಾತನಾಡಿ, ಪ್ರದರ್ಶನದಲ್ಲಿ ಹಲವಾರು ಜಾತಿಗಳಿವೆ. ಅದರಲ್ಲಿ ಕೆಲವು ವಿನಾಶದ ಅಂಚಿಗೆ ಸಾಗುತ್ತಿವೆ. ಅವುಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ. ಕರಾವಳಿಯ ವಾತಾ ವರಣದಲ್ಲಿ ಬೆಳೆಯುವಂತಹ ಆರ್ಕಿಡ್‌ನ‌ ಹೈಬ್ರಿಡ್‌ ಮತ್ತು ಸ್ಥಳೀಯ ತಳಿಗಳನ್ನು ಈ ಪ್ರದರ್ಶನದಲ್ಲಿ ಮಾರಾಟಕ್ಕಿಡಲಾಗಿದೆ. ಮಲೇಶಿಯಾ ಹಾಗೂ ಥೈಲ್ಯಾಂಡ್‌ನಿಂದ ಆಮದು ಮಾಡಿಕೊಂಡಂತಹ ವಿವಿಧ ಜಾತಿಯ ಆರ್ಕಿಡ್‌ ಸಸಿಗಳು ಮನ ತಣಿಸುತ್ತಿವೆ ಎಂದರು.

ಕರಾವಳಿಯ ತಾಪಮಾನಕ್ಕೆ ಅಳವಡಿ ಸಿಕೊಂಡು ಮೊಳಕೆ ಹಂತದಿಂದ ಸಣ್ಣ ಪ್ರಮಾಣದಲ್ಲಿ ಹೂಬಿಡುವ ಹಂತಕ್ಕೆ ಹೈಬ್ರಿàಡ್‌ಗಳನ್ನು ಬೆಳೆಸಿ ಆರ್ಕಿಡ್‌ ಸಸ್ಯಗಳನ್ನು ಸಂಸ್ಥೆ ಸಾರ್ವಜನಿಕರಿಗೆ ನೀಡುವಲ್ಲಿ ಶ್ರಮಿಸುತ್ತಿದೆ. ಮಲೇಷ್ಯಾ, ಥೈಲ್ಯಾಂಡ್‌ಗಳಿಂದಲೂ ಚಿಕ್ಕ ಆರ್ಕಿಡ್‌ ಗಿಡಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆಲಿಯಾ ಆರ್ಕಿಡ್‌ ಕೇರ್‌ ಕರ್ನಾಟಕ ಸರಕಾರದ ತೋಟಗಾರಿಕಾ ಇಲಾಖೆಯಡಿ ನೋಂದಾಯಿತ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಸಸ್ಯಗಳ ಪ್ರದರ್ಶನ
ಸುಮಾರು 5,000 ಆರ್ಕಿಡ್‌ ಸಸ್ಯಗಳು, 1,000 ಅಂಥೋರಿಯಂ, ಸುಮಾರು 500 ಅಡೇನಿಯಮ್‌ ಸಸ್ಯಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಪ್ರದರ್ಶನದಲ್ಲಿ ನವಿಲಿನ ಬಣ್ಣಗಳನ್ನು ಪ್ರದರ್ಶಿಸಲಾಗಿದೆ. 1,200ಕ್ಕೂ ಹೆಚ್ಚು ಆರ್ಕಿಡ್‌ ಹೂವಿನ ಕಾಂಡಗಳನ್ನು ಬಳಸಿ ಅಲಂಕರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next