ಮಹಾನಗರ: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಗ್ರಾಹಕರ ಸೇವೆಗೆ ತೆರದುಕೊಳ್ಳುವ ನಿರೀಕ್ಷೆ ಇದೆ.
ಸದ್ಯ ಕದ್ರಿ ಮಾರುಕಟ್ಟೆಯ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ತರಕಾರಿ ಮಾರುಕಟ್ಟೆ ಸೇರಿದಂತೆ ಒಟ್ಟು ಎರಡು ಮಹಡಿಯನ್ನು ಕೆಲವೇ ದಿನಗಳಲ್ಲಿ ಗ್ರಾಹಕರ ಸೇವೆಗೆ ಬಿಡುವ ಸಾಧ್ಯತೆ ಹೆಚ್ಚಿದೆ. ಹಳೆ ಮಾರುಕಟ್ಟೆ ಶಿಥಿಲಾವಸ್ಥೆಯ ಕಾರಣ 12.30 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗಿದೆ. ವ್ಯಾಪಾರಸ್ಥರ ಮನವಿಯ ಮೇರೆಗೆ ಮಾರುಕಟ್ಟೆಯ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಕದ್ರಿಯಲ್ಲಿದ್ದ ಸುಮಾರು 40 ವರ್ಷಗಳ ಹಿಂದೆ ಇಲ್ಲಿನ ಮಾರುಕಟ್ಟೆ ಕಟ್ಟಡವನ್ನು ಅಂದಿನ ಆವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿತ್ತು. ಕದ್ರಿ ಮಾರುಕಟ್ಟೆಯ ಹಳೆ ಕಟ್ಟಡದಲ್ಲಿ ಒಟ್ಟು 45 ಮಳಿಗೆಗಳಿತ್ತು. ಮಾರುಕಟ್ಟೆ ಶಿಥಿಲಾವಸ್ಥೆಯ ಕಾರಣ ಕದ್ರಿ ಹಳೆಯ ಮಾರುಕಟ್ಟೆ ಕಟ್ಟಡವನ್ನು ಕೆಡವಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 2018ರ ಮಾರ್ಚ್ 26ರಂದು ಶಂಕುಸ್ಥಾಪನೆ ಮಾಡಲಾ ಗಿತ್ತು. ಹಳೆಯ ಕದ್ರಿ ಮಾರುಕಟ್ಟೆಯಲ್ಲಿದ್ದ ಒಟ್ಟು 45 ಮಳಿಗೆಗಳ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಿ ನೀಡಲಾಯಿತು. ಕಾಮಗಾರಿ ಆರಂಭಗೊಂಡರೂ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳುವ ಸ್ವರೂಪದಲ್ಲಿ ಎದುರಾದ ಗೊಂದಲದಿಂದ ನೆಲ ಅಂತಸ್ತು ಹಂತದಲ್ಲೇ 10 ತಿಂಗಳು ಸ್ಥಗಿತಗೊಂಡಿತ್ತು. ಬಳಿಕ ಕಾಮಗಾರಿಗೆ ವೇಗ ನೀಡಲಾಯಿತು.
ಮಾರುಕಟ್ಟೆಯಲ್ಲಿ ಏನೇನಿದೆ?
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕದ್ರಿ ಮಾರುಕಟ್ಟೆಯಲ್ಲಿ ಲೋವರ್ ಬೇಸ್‌ಮೆಂಟ್ 1090.23 ಚ.ಮೀ., ಅಪ್ಪರ್ ಬೇಸ್‌ಮೆಂಟ್ 924.20 ಚ.ಮೀ. ಇರಲಿದ್ದು, ಇಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಲೋವರ್ ಗ್ರೌಂಡ್‌ನಲ್ಲಿ 957.17 ಚ.ಮೀ. ಇದರಲಿದ್ದು, 11 ಶಾಪ್ 28 ಸ್ಟಾಲ್ ಇರಲಿದೆ. ಅಪ್ಪರ್ ಗ್ರೌಂಡ್‌ನಲ್ಲಿ 989.54 ಚ.ಮೀ. ಇರಲಿದ್ದು, 11 ಶಾಪ್, 34 ಸ್ಟಾಲ್ ಇರಲಿದೆ. ಮೊದಲ ಮಹಡಿ 941 ಚ.ಮೀ., ಎರಡನೇ ಮಹಡಿ 927 ಚ.ಮೀ., ಮೂರನೇ ಮಹಡಿ 927 ಮೀ. ಇರಲಿದ್ದು, ಇಲ್ಲಿ ಕಚೇರಿ ಹೊಂದಿದೆ. ಮಾರುಕಟ್ಟೆಯ ಒಟ್ಟು ವಿಸೀ¤ರ್ಣ 6756 ಚ.ಮೀ. ಇರಲಿದೆ.
ಮಾರುಕಟ್ಟೆಯಲ್ಲಿ ಏನೇನಿದೆ?
ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಕದ್ರಿ ಮಾರುಕಟ್ಟೆಯಲ್ಲಿ ಲೋವರ್ ಬೇಸ್‌ಮೆಂಟ್ 1090.23 ಚ.ಮೀ., ಅಪ್ಪರ್ ಬೇಸ್‌ಮೆಂಟ್ 924.20 ಚ.ಮೀ. ಇರಲಿದ್ದು, ಇಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಲೋವರ್ ಗ್ರೌಂಡ್‌ನಲ್ಲಿ 957.17 ಚ.ಮೀ. ಇದರಲಿದ್ದು, 11 ಶಾಪ್ 28 ಸ್ಟಾಲ್ ಇರಲಿದೆ. ಅಪ್ಪರ್ ಗ್ರೌಂಡ್‌ನಲ್ಲಿ 989.54 ಚ.ಮೀ. ಇರಲಿದ್ದು, 11 ಶಾಪ್, 34 ಸ್ಟಾಲ್ ಇರಲಿದೆ. ಮೊದಲ ಮಹಡಿ 941 ಚ.ಮೀ., ಎರಡನೇ ಮಹಡಿ 927 ಚ.ಮೀ., ಮೂರನೇ ಮಹಡಿ 927 ಮೀ. ಇರಲಿದ್ದು, ಇಲ್ಲಿ ಕಚೇರಿ ಹೊಂದಿದೆ. ಮಾರುಕಟ್ಟೆಯ ಒಟ್ಟು ವಿಸೀ¤ರ್ಣ 6756 ಚ.ಮೀ. ಇರಲಿದೆ.
Related Articles
ಉಳಿದ ಮಾರುಕಟ್ಟೆ ಕಥೆಯೇನು?
ಉರ್ವ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಮುಡಾದಿಂದ ಪಾಲಿಕೆಗೆ ಹಸ್ತಾಂತರ ಪಕ್ರಿಯೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಳಕೆ ಮಾರುಕಟ್ಟೆ ಉದ್ಘಾಟನೆಗೊಂಡರೂ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರಿಗೆ ತೆರೆದುಕೊಂಡಿಲ್ಲ. ಇದರಿಂದ ಪಾಲಿಕೆ ಆದಾಯಕ್ಕೆ ಹಿನ್ನಡೆ ಉಂಟಾಗಿದೆ. ಅಂಗಡಿ ಕೋಣೆಗಳಿಗೆ ಪಾಲಿಕೆ ಮತ್ತೆ ಟೆಂಡರ್ ಕರೆದಿದೆ. ಕಂಕನಾಡಿಯಲ್ಲಿ 41.5 ಕೋ.ರೂ. ವೆಚ್ಚದಲ್ಲಿ ನೂತನ ಬಹುಮಹಡಿ ಮಾರುಕಟ್ಟೆ ನಿರ್ಮಾಣ ಹಂತದಲ್ಲಿದೆ. ಹಳೆ ಸೆಂಟ್ರಲ್ ಮಾರುಕಟ್ಟೆ ಈಗಾಗಲೇ ಕೆಡಹಲಾಗಿದ್ದು, ಬಹುನಿರೀಕ್ಷಿತ ನೂತನ ಮಾರುಕಟ್ಟೆ ಆರಂಭಿಕ ಹಂತದ ಕಾಮಗಾರಿಗೆ ನಡೆಯುತ್ತಿದ್ದು, ಸದ್ಯದಲ್ಲೇ ಅಧಿ ಕೃತ ಚಾಲನೆ ಸಿಗುವ ಸಾಧ್ಯತೆ ಇದೆ.