Advertisement

ಸಂಭ್ರಮದ ಬ್ರಹ್ಮಕಲಶಾಭಿಷೇಕ; ಸಹಸ್ರಾರು ಭಕ್ತರು ಭಾಗಿ

12:52 AM May 10, 2019 | Sriram |

ಮಹಾನಗರ: ಕದ್ರಿ ಶ್ರೀ ಮಂಜು ನಾಥ ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ನಡೆಯಿತು.

Advertisement

ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟuಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಜರಗಿತು.

ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. ಮಧ್ಯಾಹ್ನ 2ರಿಂದ ರಥಾರೋಹಣ, ರಾತ್ರಿ 7ರಿಂದ ಮನ್ಮಹಾರಥೋತ್ಸವ, ಮಹಾ ದಂಡ ಜೋಡಣೆ, ವಿವಿಧ ಹೋಮಗಳು, ಉತ್ಸವ ಬಲಿ, ಭೂತಬಲಿ ನೆರವೇರಿತು.

ಬ್ರಹ್ಮಕಲಶಾಭಿಷೇಕದ ವೇಳೆ ಕದ್ರಿ ಶ್ರೀ ಮಂಜುನಾಥ ವ್ಯವಸ್ಥಾಪನ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜನಾರ್ದನ ಶೆಟ್ಟಿ, ಕಾರ್ಯ ನಿರ್ವಹ ಣಾಧಿಕಾರಿ ಡಾ| ನಿಂಗಯ್ಯ, ರಾಘವೇಂದ್ರ ಭಟ್‌, ರಂಜನ್‌ಕುಮಾರ್‌ ಬಿ.ಎಸ್‌., ಚಂದ್ರ ಕಲಾ ದೀಪಕ್‌, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್‌ ದೇವಾಡಿಗ, ಸುರೇಶ್‌ ಕುಮಾರ್‌ ಕದ್ರಿ, ಎಸ್‌. ಗಣೇಶ್‌ ರಾವ್‌, ಗಣೇಶ್‌ ಶೆಟ್ಟಿ, ಕದ್ರಿ ನವನೀತ್‌ ಶೆಟ್ಟಿ, ಗೋಕುಲ್‌ ಕದ್ರಿ, ಪುರುಷೋತ್ತಮ ಕೊಟ್ಟಾರಿ, ನಿವೇದಿತಾ ಎನ್‌. ಶೆಟ್ಟಿ, ಪ್ರದೀಪ್‌ ಕುಮಾರ್‌ ಕಲ್ಕೂರ, ವಾಸುದೇವ ರಾವ್‌ ಕುಡುಪು ಮತ್ತಿತರರಿದ್ದರು.

ಪಲ್ಲಪೂಜೆ
ಬ್ರಹ್ಮಕಲಶಾಭಿಷೇಕ ಮುಗಿದ ಬಳಿಕ ಮಧ್ಯಾಹ್ನ 12.45ಕ್ಕೆ ಪಲ್ಲ ಪೂಜೆ ನಡೆಯಿತು. ಬಳಿಕ ಮಹಾ ಅನ್ನ ಸಂತರ್ಪಣೆ ಆರಂಭ ಗೊಂಡಿತು. ಮಧ್ಯಾಹ್ನ 30 ಸಾವಿರಕ್ಕೂ ಅಧಿಕ  ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

Advertisement

ಅಪರಾಹ್ನ 3ರಿಂದ ಜಗದೀಶ್‌ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಭಕ್ತಿಗಾನ ಸುಧೆ, ರಾತ್ರಿ 8ರಿಂದ ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ತಂಡದಿಂದ ಶಿವಾರ್ಪಣಾ-ನೃತ್ಯ ಗೀತಾ ನಾಟಕ ರೂಪಕ ನಡೆಯಿತು.

ಇಂದು ಮಹಾದಂಡರುದ್ರಾಭಿಷೇಕ
ಕದ್ರಿ ಕ್ಷೇತ್ರದಲ್ಲಿ ಮೇ 10ರಂದು ಬೆಳಗ್ಗೆ 5.30ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಗಣ ಯಾಗ, ಅಮೃತೇಶ್ವರಿ ಪೂಜೆ, ಮಹಾ ದಂಡರು ದ್ರಾಭಿಷೇಕ ಪ್ರಾರಂಭವಾಗಲಿದೆ. ಬಳಿಕ ಮಹಾರುದ್ರಯಾಗ, ಪೂಣಾ ìಹುತಿ, ಮಹಾಪೂಜೆ, ನಡೆಯಲಿದೆ. ರಾತ್ರಿ 7ರಿಂದ ಅವಭೃಥ, ಧ್ವಜಾ ರೋಹಣ ಜರಗಲಿದೆ.

ಸಂಜೆ 6ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆಗೈಯಲಿದ್ದಾರೆ. ಕಾರ್ಪೊ ರೇಶನ್‌ ಬ್ಯಾಂಕ್‌ ಪ್ರಧಾನ ಕಚೇರಿ ಚೆಯರ್‌ಮನ್‌ ಪಿ.ವಿ. ಭಾರತಿ ಅಧ್ಯ  ಕ್ಷತೆ ವಹಿಸುವರು. ಹಲವು ಗಣ್ಯರು ಭಾಗವಹಿ ಸಲಿದ್ದು, ವಿವಿಧ ಕ್ಷೇತ್ರಗಳ ಸಾಧಕ ರನ್ನು ಸಮ್ಮಾನಿಸಲಾಗುವುದು ಎಂದು ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಅಧ್ಯಕ್ಷ ಎಸ್‌. ಪ್ರದೀಪಕುಮಾರ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ಸಂಜೆ 4ರಿಂದ ಉಪ್ಪುಂದ ರಾಜೇಶ್‌ ಪಡಿ ಯಾರ್‌ ಮೈಸೂರು ತಂಡದಿಂದ ಸಿ. ಅಶ್ವತ್ಥ್ ಹಾಡಿರುವ ಗಾಯನ, 8ರಿಂದ ಕಲೈಲಾಮಣಿ ಪದ್ಮಶ್ರೀ ಡಾ| ಕದ್ರಿ ಗೋಪಾಲ ನಾಥ ಬಳಗದಿಂದ ಸ್ಯಾಕೊÕà ಫೋನ್‌ ಕಛೇರಿ ನಡೆಯಲಿದೆ.

ಬ್ರಹ್ಮಕಲಶಾಭಿಷೇಕದ ಅಂಗವಾಗಿ ವಿಶ್ವ ಹಿಂದೂ  ಪರಿಷತ್‌ ಬಜರಂಗದಳ ಆಟೋ ಚಾಲ ಕರ ಮಾಲಕರ ಮಂಗಳೂರು ಘಟಕ ವತಿಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವವರಿಗೆ ಉಚಿತ ಆಟೋ ರಿಕ್ಷಾ ಸೇವೆಯನ್ನು ಗುರುವಾರ ಒದಗಿಸಲಾಯಿತು.ಘಟಕದ ನೂರು ರಿಕ್ಷಾ ಚಾಲಕರು ಕೆಪಿಟಿ ಬಳಿಯಿಂದ, ಬಂಟ್ಸ್‌ ಹಾಸ್ಟೆಲ್‌ನಿಂದ, ಮಲ್ಲಿಕಟ್ಟೆಯಿಂದ ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುವ, ದೇವಸ್ಥಾನದಿಂದ ಸಮೀಪದ ಬಸ್‌ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಈ ಉಚಿತ ಆಟೋರಿಕ್ಷಾ ಸೇವೆಯನ್ನು ನೀಡಲಾಯಿತು.

ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಚಾಲನೆ ನೀಡಿದರು. ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್‌ ಕುತ್ತಾರ್‌, ಆಟೋ ಚಾಲಕರ ಮಾಲಕರ ಘಟಕದ ಪೂಮಾಲೆ, ಚೇತನ್‌ ಉಪಸ್ಥಿತರಿದ್ದರು.

1,008 ಕಲಶದಿಂದ ಅಭಿಷೇಕ
ಕಲಶ ಮಂಟಪವನ್ನು ಅಲಂಕರಿಸಿ ಅದರಲ್ಲಿ 1,008 ಕಲಶಗಳನ್ನು ಜೋಡಿಸಿಡಲಾಗಿತ್ತು. ಬಳಿಕ ಅಷ್ಟೂ ಕಲಶದಿಂದ ಪ್ರಧಾನ ದೇವರು ಸಹಿತ ತ್ರಿಲೋಕೇಶ್ವರ, ಮಚ್ಛೇಂದ್ರನಾಥ, ಗೋರಕ್ಷನಾಥ, ತೌರಂಗಿನಾಥ, ವ್ಯಾಸ, ಬುದ್ಧ, ನವಗ್ರಹಗಳಿಗೆ ಕಲಶಾಭಿಷೇಕ ನಡೆಯಿತು. 25ಕ್ಕೂ ಅಧಿಕ ದ್ರವ್ಯ, ಕದ್ರಿ ದೇಗುಲದ ಮೇಲ್ಭಾಗದಲ್ಲಿ ಹರಿದು ಬರುತ್ತಿರುವ ಗೋಮುಖ ತೀರ್ಥ, ದೇವಸ್ಥಾನದ ಬಾವಿ ತೀರ್ಥವನ್ನು ಕಲಶದಲ್ಲಿ ಬಳಸಿ ಅಭಿಷೇಕ ನೆರವೇರಿಸಲಾಯಿತು. ನಿತ್ಯ ಪೂಜೆಯ ದೇವರ ಮುಖವಾಡ, ತ್ರಿಶೂಲ, ಢಮರುಗವನ್ನೂ ಕಲಶ ಮಂಟಪದಲ್ಲಿ ಇಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next