Advertisement
ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಪಿಸಿರುವ ವೈಫೈ, ಎಸ್ಕಲೇಟರ್, ಲಿಪ್ಟ್ ಸೌಲಭ್ಯದ ಜತೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಸಬ್‌ವೇ ಹಾಗೂ ಡಿಜಿಪೇ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು.
Related Articles
Advertisement
ಈ ವೈಫೈ ಸೌಲಭ್ಯ ಎಲ್ಲಾ ಪ್ರಯಾಣಿಕರೂ ಪಡೆಯಬಹುದಾಗಿದ್ದು, ದಿನದ 24 ಗಂಟೆಗಳು ವೈಫೈ ಸೌಲಭ್ಯವಿರುತ್ತದೆ ಎಂದು ಹೇಳಿದರು. ಶಾಸಕ ವಾಸು, ವಿಪ ಸದಸ್ಯ ಸಂದೇಶ್ ನಾಗರಾಜು, ಮೇಯರ್ ಎಂ.ಜೆ.ರವಿಕುಮಾರ್, ನೈರುತ್ಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಪಿ.ರಾವ್ ಹಾಜರಿದ್ದರು.
ಸಾರ್ವಜನಿಕ ಸೇವೆಗೆ ಮುಕ್ತರೈಲ್ವೆ ನಿಲ್ದಾಣಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮೈಸೂರು, ಬೆಂಗಳೂರಿನ ಯಶವಂತಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವೈ-ಫೈ, ಎಸ್ಕಲೇಟರ್, ಲಿಫ್ಟ್ ವ್ಯವಸ್ಥೆ ಮತ್ತು ಮೈಸೂರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ಗಳನ್ನು ಸಂಪರ್ಕಿಸುವ ಪ್ರಯಾಣಿಕ ಸಬ್‌ವೇ, ಡಿಜಿಪೇ ಸೌಲಭ್ಯ ಭಾನುವಾರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕಲ್ಪಿಸಿರುವ ವೈಫೈ, ಎಸ್ಕಲೇಟರ್, ಲಿಪ್ಟ್, ಸಬ್‌ವೇ ಸೌಲಭ್ಯಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಬೆಂಗಳೂರಿನಿಂದ ಆನ್‌ಲೈನ್ ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದರು. ನಗರ ರೈಲ್ವೆ ನಿಲ್ದಾಣದಲ್ಲಿ ಗೂಗಲ್ ಹಾಗೂ ರೈಲ್‌ಟೆಲ್ (ಭಾರತೀಯ ರೈಲ್ವೆ ಟೆಲಿಕಾಂ ವಿಭಾಗ)ದಿಂದ ಉಚಿತ ವೈಫೈ ಸೌಲಭ್ಯ ನೀಡಲಾಗುತ್ತಿದೆ. ಜತೆಗೆ ಡಿಜಿಟಲ್ ಭಾರತ ಉದ್ದೇಶದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಕುರಿತು ರೈಲ್ವೆ ಮುಂಗಡಪತ್ರ 2016ರಲ್ಲಿ ಪ್ರಸ್ತಾಪಿಸಲಾಗಿತ್ತು. ಬೆಂಗಳೂರು- ಹಾಸನ ಈ ಮಾರ್ಗ 1996-97ರಲ್ಲಿ ಮಂಜೂರಾಗಿದ್ದು, 1290 ಕೋಟಿ ರೂ. (ರೈಲ್ವೆ 823 ಕೋಟಿ ರೂ., ಕರ್ನಾಟಕ ಸರ್ಕಾರ 467 ಕೋಟಿ ರೂ.) ಅಂದಾಜು ವೆಚ್ಚವಾಗಿದೆ. 167 ಕಿ.ಮೀ ಹೊಸ ರೈಲು ಮಾರ್ಗವನ್ನು 3 ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತದಲ್ಲಿ 42 ಕಿ.ಮೀ. ಉದ್ದದ ಹಾಸನ-ಶ್ರವಣ ಬೆಳಗೊಳ ಭಾಗವನ್ನು 2006 ರಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. 2ನೇ ಹಂತದಲ್ಲಿ 14 ಕಿ.ಮೀ ಉದ್ದದ ಚಿಕ್ಕಬಾಣಾವರ – ನೆಲಮಂಗಲ ಭಾಗವನ್ನು 2013ರಲ್ಲಿ ಲೋಕಾರ್ಪಣೆಗೊಳಿಸಲಾಯಿತು ಮತ್ತು ನೆಲಮಂಗಲದಿಂದ ಶ್ರವಣಬೆಳಗೊಳದವರೆಗಿನ 111 ಕಿ.ಮೀ ರೈಲು ಸೇವೆಗೂ ಭಾನುವಾರ ಚಾಲನೆ ದೊರೆಯಿತು.