Advertisement
ಅವರು ಅವರು ಶನಿವಾರ ಕುಂತೂರು ಪದವು ಸೈಂಟ್ ಜಾರ್ಜ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಫಾ|ಎ.ಜೇಕಬ್ ವೇದಿಕೆ, ಡಾ|ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಸಮ್ಮೇಳನದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿ ಸಮಾಜದ ಮಾರ್ಗದರ್ಶಕ. ಆತ ಅನುಭವಗಳ ಸಂಗ್ರಾಹಕ, ಅವುಗಳನ್ನು ಜನರತ್ತ ತಲುಪಿಸಿ ಬದುಕು ಹಸನುಗೊಳಿಸುವ ಶ್ರಮಿಕ ಎಂದು ಹೇಳಿದ ಅವರು, ಜಾಲತಾಣಗಳನ್ನು ತಡಕಾಡುವುದಕ್ಕಿಂತ ಪುಸ್ತಕಗಳನ್ನು ಓದು ವುದು ಎಷ್ಟೋ ಮೇಲು ಎಂದು ಪ್ರತಿಪಾದಿಸಿದರು.
Related Articles
Advertisement
ಸಮ್ಮೇಳನವನ್ನು ಉದ್ಘಾಟಿಸಿದ ಕವಿ, ಸಾಹಿತಿ ಡಾ| ವಸಂತ್ ಕುಮಾರ್ ಪೆರ್ಲ ಅವರು, ಸರಕಾರ ಕನ್ನಡ ಭಾಷೆ ಸಾಹಿತ್ಯ ಅಭಿವೃದ್ಧಿಗೆ ರಾಜ್ಯದ ಒಟ್ಟು ಬಜೆಟ್ನ ಶೇ.5 ಭಾಗ ಅನುದಾನವನ್ನಾದರೂ ಮೀಸಲಿರಿಸಬೇಕು ಎಂದು ಹೇಳಿದರು. ಶಿಕ್ಷಣದ ಮೂಲಕ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಬಹುದು ಎಂದ ಅವರು ನಾವು ಎಷ್ಟೇ ಬೆಳೆದರೂ ಈ ಮಣ್ಣಿನ ಭಾಷೆ, ತಾಯಿ ಭಾಷೆಯನ್ನು ಮೀರಿ ಹೋಗುವಂತಿಲ್ಲ. ಹಳ್ಳಿ ಸೊಗಡಿನಲ್ಲಿ ಕನ್ನಡ ಭಾಷೆ ಅಡಕವಾಗಿರುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಹಳ್ಳಿ ಭಾಗಗಳಲ್ಲಿ ನಡೆದಾಗ ಅಲ್ಲಿನ ಪ್ರತಿಭೆಗಳು ಪ್ರೇರಣೆಗೊಂಡು ಕನ್ನಡ ಸಾಹಿತ್ಯ ಕ್ಷೇತ್ರ ಬೆಳೆಯಲು ಸಹಾಯಕವಾಗುತ್ತದೆ ಎಂದರು. ಕೃತಿ, ಸ್ಮರಣ ಸಂಚಿಕೆ ಬಿಡುಗಡೆ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಅವರು ದೀಪ ಪ್ರಜ್ವಲನೆ ಮಾಡಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಾಹಿತ್ಯ ಪರಿಷತ್ನ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಕಲಾ ಪ್ರದರ್ಶನ, ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಪ್ರಬಂಧಕ ಮಹಮ್ಮದ್ ಕುಂಞಿ ಪುಸ್ತಕ ಪ್ರದರ್ಶನ , ಸ್ವಾಗತ ಸಮಿತಿ ಸಂಚಾಲಕ ರೋಯಿ ಅಬ್ರಹಾಂ ಪ್ರಾಚ್ಯವಸ್ತು ಪ್ರದರ್ಶನ ಹಾಗೂ ಅಧ್ಯಕ್ಷ ಗುರುರಾಜ್ ರೈ ಕೇವಳ ವಿಜ್ಞಾನ ಪ್ರದರ್ಶನ ಉದ್ಘಾಟಿಸಿದರು. ಸುಪ್ರಿತಾ ಚರಣ್ ಪಾಲಪ್ಪೆ, ದೀಪ್ತಿ ಬಿ. ನೂಜಿಬಾಳ್ತಿಲ ಹಾಗೂ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಅವರುಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಚಾರ ಮಂಡನೆ
ವಿಚಾರಗೋಷ್ಠಿಯಲ್ಲಿ ಓದುವ ಹವ್ಯಾಸ ಮೂಡಿಸುವಲ್ಲಿ ಸಮ್ಮೇಳನಗಳ ಪಾತ್ರ ಎಂಬ ವಿಷಯದ ಬಗ್ಗೆ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಹಾಗೂ ಕನ್ನಡಶಾಲೆಗಳನ್ನು ಉಳಿಸುವುದು ಹೇಗೆ?-ಹೊಸ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಓಂತ್ರಡ್ಕ ಶಾಲಾ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ವಿಚಾರ ಮಂಡನೆ ಮಾಡಿದರು. ಕುಂತೂರು ಪದವು ಸ.ಹಿ. ಪ್ರಾಥಮಿಕ ಶಾಲೆ ಹಾಗೂ ಸಂತ ಜಾರ್ಜ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಕನ್ನಡ ಭುವನೇಶ್ವರಿ ವೈಭವದ ಮೆರವಣಿಗೆ
ಪದವು ಸೈಂಟ್ ಜಾರ್ಜ್ ಆರ್ಥೋಡಕ್ಸ್ ಚರ್ಚ್ ಬಳಿಯಿಂದ ಸಮ್ಮೇಳನ ವೇದಿಕೆವರೆಗೆ ಕನ್ನಡ ಭುವನೇಶ್ವರಿಯ ಅದ್ದೂರಿ ಮೆರವಣಿಗೆ ಸಾಗಿತು. ಪೆರಾಬೆ ಗ್ರಾಪಂ ಸದಸ್ಯ ಪಿ.ಜಿ. ರಾಜು ಮೆರವಣಿಗೆ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಕುಮಾರ್, ಶಿಕ್ಷಕರಾದ ದಿಲೀಪ್ ಎಸ್., ಮಹೇಶ್ ಪಾಟಾಳಿ, ಬಿ. ಪದ್ಮನಾಭ ಗೌಡ ಸಂಯೋಜಿಸಿದರು.