Advertisement
ಅವರು ರವಿವಾರ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಭಗವಂತನು ಸರ್ವರ ಹೃದಯ ದಲ್ಲಿದ್ದಾನೆ. ಶೋಷಿತರು, ಬಡವರು, ನೊಂದವರಿಗೆ ಮಾಡಿದ ಸಹಕಾರ ಶೇ. 100ರಷ್ಟು ದೇವರನ್ನು ತಲುಪುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು. ಧರ್ಮವಿಲ್ಲದೆ ಬದುಕಿಲ್ಲ, ಅದರಲ್ಲಿರುವ ತಪ್ಪು ತಿಳುವಳಿಕೆ, ಮೂಢನಂಬಿಕೆಯಿಂದ ಹೊರಬನ್ನಿ. ಶಿಕ್ಷಣದಿಂದ ಸಮುದಾಯ, ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಧನಾತ್ಮಕ ಚಿಂತನೆ ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದರು. ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳಾದ ಛಲವಾದಿ ನಾರಾಯಣಸ್ವಾಮಿ, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಪ್ರಮುಖರಾದ ರಘುಪತಿ ಭಟ್,ವಿನಯ ಕುಮಾರ್ ಸೊರಕೆ, ಪ್ರಸಾದ್‌ರಾಜ್ ಕಾಂಚನ್, ಮೋಹನ್, ಹರೀಶ್ಚಂದ್ರ ಕಟಪಾಡಿ, ಶಂಕರ ಮಲ್ಲಾರ್, ರಮೇಶ್ ಡಿ., ಪ್ರಭಾಕರ ಹಾರಾಡಿ, ರಮೇಶ್ ಉಚ್ಚಿಲ, ಭೋಜರಾಜ್ ಕಾವ್ರಾಡಿ, ರವಿಪ್ರಕಾಶ್ ಮಾರ್ಪಳ್ಳಿ, ವಿರೂಪಾಕ್ಷ ಬಾರಕೂರು, ಉಮೇಶ್‌ಕುಮಾರ್ ಕಾಪಿಕಾಡ್, ಸುಬ್ರಹ್ಮಣ್ಯ ಪ್ರಸಾದ್, ಚಂದ್ರಶೇಖರ ವಾಮಂಜೂರು, ನವೀನ್ ಕುಮಾರ್ ಮುಕ್ಕ ಅತಿಥಿಗಳಾಗಿದ್ದರು. ವಿವಿಧ ಬಬ್ಬುಸ್ವಾಮಿದೇವಸ್ಥಾನಗಳ ಗುರಿಕಾರರು, ಸಂಘಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
Related Articles
Advertisement
ಧರ್ಮದರ್ಶಿ ಗೋಕುಲ್‌ದಾಸ್ ಬಾರಕೂರು ಬಾರಕೂರು ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ವಂದಿಸಿದರು. ಸಂತೋಷ್ ಪಡುಬಿದ್ರಿ ನಿರೂಪಿಸಿದರು.
ಸಮುದಾಯ ಭವನಕ್ಕೆ ಬೇಡಿಕೆಉಡುಪಿ ಜಿಲ್ಲೆಯ ಕಾಪು ತಾಲೂಕು, ದ.ಕ.ದ ಮಂಗಳೂರು ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಡಾಳ (ಪರಿಶಿಷ್ಟ ಜಾತಿ) ಸಮುದಾಯ ಭವನ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯಿಂದ 21 ಕೋಟಿ ರೂ. ಅನುದಾನ ನೀಡುವಂತೆ ಕಚ್ಚಾರು ಕ್ಷೇತ್ರದ ಧರ್ಮದರ್ಶಿ ಗೋಕುಲ್‌ದಾಸ್ ಬಾರಕೂರು ಸಚಿವರಿಗೆ ಮನವಿ ಸಲ್ಲಿಸಿದರು. ಪ.ಜಾತಿ/ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಳ, ಗಂಗಾ ಕಲ್ಯಾಣ ಯೋಜನೆಯಲ್ಲಿ ರಿಯಾಯಿತಿ, ಭೂಮಿ ಪರಭಾರೆ ಮತ್ತು ವಾಣಿಜ್ಯ ಪರಿವರ್ತಿತ ಕುರಿತಂತೆ ಸಮುದಾಯದ ಪರವಾಗಿ ವಿನಂತಿಸಿದರು. ಲಕ್ಷಾಂತರ ಮಂದಿ ಭಾಗಿ
ಶನಿವಾರ ರಾತ್ರಿಯ ಕೆಂಡ ಸೇವೆ, ರವಿವಾರದ ರಥೋತ್ಸವ, ಜನಪದ ಉತ್ಸವದಲ್ಲಿ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಪಾಲ್ಗೊಂಡರು.