Advertisement

 ಮಾಸ್- ಸೆಂಟಿಮೆಂಟ್ ಮಿಶ್ರಣ..; ಟ್ರೆಂಡಿಂಗ್‌ ನಲ್ಲಿದೆ ‘ಕಬ್ಜ’ ಟ್ರೇಲರ್‌

09:51 AM Mar 06, 2023 | Team Udayavani |

ಕೊನೆಗೂ ಬಹುನಿರೀಕ್ಷಿತ “ಕಬ್ಜ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

Advertisement

ಔಟ್‌ ಅಂಡ್‌ ಔಟ್‌ ಮಾಸ್‌ ಅಂಶಗಳೊಂದಿಗೆ ಮೂಡಿಬಂದಿರುವ ಟ್ರೇಲರ್‌ನಲ್ಲಿ ಸ್ವಾತಂತ್ರ್ಯ, ಬ್ರಿಟಿಷರ ವಿರುದ್ಧದ ಹೋರಾಟ, ತಾಯಿ-ಅಣ್ಣನ ಸೆಂಟಿಮೆಂಟ್‌ ಸೇರಿದಂತೆ ಹಲವು ಸನ್ನಿವೇಶಗಳು ಟ್ರೇಲರ್‌ನಲ್ಲಿ ಮೂಡಿಬಂದಿವೆ. ಇದರ ಜೊತೆಗೆ ಚಿತ್ರದಲ್ಲಿ ಸುದೀಪ್‌ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. “ಕವ್ಜ’ ಚಿತ್ರದಲ್ಲಿ ಉಪೇಂದ್ರ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದ್ದಾರೆ. ಏರ್‌ಫೋರ್ಸ್‌ ಆಫೀಸರ್‌ ಆಗಿ ಹಾಗೂ ರುಂಡ ಚೆಂಡಾಡುವ ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದರ ಜೊತೆಗೆ ಚಿತ್ರದ ಹಲವು ಪ್ರಮುಖ ಪಾತ್ರಗಳನ್ನು ಕೂಡಾ ಪರಿಚಯಿಸಿದ್ದಾರೆ.

ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದಲ್ಲ, ಅದನ್ನು ಹಿಡಿದಿತರುವ ಬಲವಾದ ಕೈಗಳಿಂದ.. ಎಂಬ ಮಾಸ್‌ ಡೈಲಾಗ್‌ ಚಿತ್ರದ ಆ್ಯಕ್ಷನ್‌ ಅಬ್ಬರದ ಸೂಚನೆ ನೀಡಿದೆ. ಇನ್ನು, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಟ್ರೇಲರ್‌ ಖದರ್‌ ಹೆಚ್ಚಿಸಿದೆ.

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಾ ಶರಣ್‌ ಈ ಸಿನಿಮಾದ ನಾಯಕಿ. ಉಳಿದಂತೆ ತೆಲುಗು, ಹಿಂದಿ ಚಿತ್ರರಂಗದ ಪ್ರಮುಖ ನಟರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ನಟ-ನಟಿಯರು ಟ್ರೇಲರ್‌ ಬಗ್ಗೆ ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next