Advertisement

ಉಪೇಂದ್ರ ಬರ್ತ್ ಡೇಗೆ ಕಬ್ಜ ಟೀಸರ್ ಗಿಫ್ಟ್

10:09 AM Sep 13, 2022 | Team Udayavani |

ಕನ್ನಡದಿಂದ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಈಗ ಇಡೀ ದೇಶ ತಿರುಗಿ ನೋಡುತ್ತಿದೆ. ಕನ್ನಡದಿಂದ ಪ್ಯಾನ್‌ ಇಂಡಿಯಾ ಸಿನಿಮಾಗಳು ರಿಲೀಸ್‌ ಆಗುತ್ತಿವೆ ಎಂದರೆ ಆ ಸಿನಿಮಾದೊಳಗೊಂದು ಗಟ್ಟಿ ಕಥೆ ಇದೆ ಎಂಬ ಮಟ್ಟಕ್ಕೆ ಕನ್ನಡ ಚಿತ್ರಗಳು ಹವಾ ಕ್ರಿಯೇಟ್‌ ಮಾಡಿವೆ.

Advertisement

ಈಗ ಆ ಸಾಲಿಗೆ ಸೇರುವ ಮತ್ತೂಂದು ಸಿನಿಮಾ “ಕಬ್ಜ’. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್‌ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್‌ 17 ರ ಸಂಜೆ 5 ಗಂಟೆಗೆ ಆನಂದ್‌ ಆಡಿಯೋ ಮೂಲಕ ಬಹು ನಿರೀಕ್ಷಿತ ಈ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ. ಇದಕ್ಕೆ ಕಾರಣ ಉಪೇಂದ್ರ ಅವರ ಹುಟ್ಟುಹಬ್ಬ.

ಸೆ.18 ಉಪೇಂದ್ರ ಹುಟ್ಟುಹಬ್ಬವಿರುವುದರಿಂದ ನಿರ್ದೇಶಕ ಆರ್.ಚಂದ್ರು, ಉಪ್ಪಿಗೆ ಟೀಸರ್‌ ಗಿಫ್ಟ್ ಮಾಡುತ್ತಿದ್ದಾರೆ. ರಿಯಲ್‌ ಸ್ಟಾರ್  ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಈ ಚಿತ್ರ ಆರಂಭದಿಂದಲೂ ನಿರೀಕ್ಷೆ ಹುಟ್ಟಿಸಿದ್ದು, ಅಭಿಮಾನಿಗಳು ಚಿತ್ರದ ಟೀಸರ್‌ ಯಾವಾಗ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸುತ್ತಲೇ ಇದ್ದರು. ಈಗ ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ.

ಇದನ್ನೂ ಓದಿ:ದಸರಾ ರಜೆ : ದ.ಕ.ದಲ್ಲಿ ಸೆ. 26ರಿಂದ ಅ.10ರ ವರೆಗೆ ,ಉಡುಪಿಯಲ್ಲಿ ಅ.3ರಿಂದ 16ರ ವರೆಗೆ ರಜೆ

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ “ಕೆ.ಜಿ.ಎಫ್- 2′ ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ. ಈಗ ಕನ್ನಡದಿಂದ ಮತ್ತೂಂದು ಬಿಗ್‌ ಬಜೆಟ್‌ ಚಿತ್ರವಾಗಿ “ಕಬ್ಜ’ ಬಿಡುಗಡೆಯಾಗುತ್ತಿದ್ದು, ಈ ಚಿತ್ರವೂ ಹಿಟ್‌ಲಿಸ್ಟ್‌ ಸೇರುವ ಸೂಚನೆ ಸಿಕ್ಕಿದೆ. ಬಾಲಿವುಡ್‌ ಮಂದಿ ಕೂಡಾ ಈ ಚಿತ್ರದತ್ತ ಒಂದು ದೃಷ್ಟಿ ನೆಟ್ಟಿದ್ದಾರೆ. ಇಬ್ಬರು ಸ್ಟಾರ್‌ ನಟರು ಒಂದೇ ಚಿತ್ರದಲ್ಲಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಆರ್‌. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸಲಿದೆ ಚಿತ್ರತಂಡ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next