Advertisement

ಸಿನಿ ಪ್ರಿಯರ ದಿಲ್‌ ಕಬ್ಜ ಮಾಡಿದ ಟೀಸರ್‌; 25 ಮಿಲಿಯನ್‌ ದಾಟಿ ಮುನ್ನಡೆ

01:25 PM Sep 22, 2022 | Team Udayavani |

ಸಿನಿಮಾದ ಗೆಲುವಿನ ಸೂಚನೆ ಸಿಗೋದು ಒಂದು ಚಿತ್ರದ ಟೀಸರ್‌, ಟ್ರೇಲರ್‌ ಅಥವಾ ಹಾಡು ಗಳು ಹಿಟ್‌ ಆಗುವ ಮೂಲಕ. ಈಗ ಆ ತರ ಹದ ಒಂದು ಸೂಚ ನೆಯನ್ನು “ಕಬ್ಜ’ ಟೀಸರ್‌ ಕೊಟ್ಟಿದೆ. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಟೀಸರ್‌ ಸೂಪರ್‌ ಹಿಟ್‌ ಆಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ 25 ಮಿಲಿಯನ್‌ಗೂ ಅಧಿಕ ವೀವ್ಸ್‌ ನೊಂದಿಗೆ ಮುನ್ನುಗ್ಗುತ್ತಿದೆ.

Advertisement

ಇದು ಇಡೀ ತಂಡದ ಖುಷಿಯನ್ನು ಹೆಚ್ಚಿಸಿದೆ. ನಾಯಕ ಉಪೇಂದ್ರ ಕೂಡಾ ಖುಷಿಯಾಗಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಗಿಫ್ಟ್ ಆಗಿ ಸಿಕ್ಕ “ಕಬ್ಜ’ ಟೀಸರ್‌ ಈಗ ಪರ ಭಾಷೆ ಮಂದಿಯ ಗಮನ ಸೆಳೆದಿದೆ. ಈ ಬಗ್ಗೆ ಮಾತನಾಡುವ ಆರ್‌. ಚಂದ್ರು, “ಟೀಸರ್‌ ಬಿಡುಗಡೆಯಾಗಿ 16 ನಿಮಿಷಕ್ಕೆ ತಮಿಳಿನ ಸೂಪರ್‌ ಸ್ಟಾರ್‌ ವೊಬ್ಬರು ಫೋನ್‌ ಮಾಡಿ, ವಿಶ್‌ ಮಾಡಿದರು. ಇದೇ ತರಹ ಬೇರೆ ಬೇರೆ ಭಾಷೆಯಿಂದ ಫೋನ್‌ ಮಾಡುತ್ತಿದ್ದಾರೆ. ಇದು ಕೇವಲ ಟೀಸರ್‌.

ಸಿನಿಮಾ ಇನ್ನೂ ಮಜಾ ಇದೆ. ಕೋವಿಡ್‌ ಅನೇಕರಿಗೆ ತೊಂದರೆ ಕೊಟ್ಟರೆ, ನಮಗೆ ಸ್ವಲ್ಪ ಸಹಾಯ ಮಾಡಿತು. ನಾನಂದುಕೊಂಡಂತೆ ಸಿನಿಮಾ ಬರಲು ಒಂದಷ್ಟು ತಯಾರಿ ಬೇಕಿತ್ತು. ಅದಕ್ಕೆ ಕೋವಿಡ್‌ನ‌ಲ್ಲಿ ಸಮಯ ಸಿಕ್ಕಿತು. ಉಪೇಂದ್ರ ಹಾಗೂ ಎಲ್ಲರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎನ್ನುವುದು ಚಂದ್ರು ಮಾತು.

ಟೀಸರ್‌ ಗೆಲುವು ಉಪೇಂದ್ರ ಅವರಿಗೂ ಸಂತಸ ತಂದಿದೆ. ಈ ಬಗ್ಗೆ ಮಾತನಾಡುವ ಅವರು, “ಟೀಸರ್‌ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆಂಧ್ರದಿಂದ ನನಗೆ ಫೋನ್‌ ಬರಲು ಶುರು ವಾಯಿತು. ಸಿನಿಮಾದ ಬಿಝಿನೆಸ್‌ ಬಗ್ಗೆ ಮಾತನಾಡಬೇಕು ಎಂದರು. ಟೀಸರ್‌ ಈ ಮಟ್ಟಕ್ಕೆ ಹಿಟ್‌ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಬೇರೆ ಬೇರೆ ಭಾಷೆಯಿಂದ ಅನೇಕರು ಕರೆ ಮಾಡಿ, ಟೀಸರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದಕ್ಕೆಲ್ಲಾ ಕಾರಣ ಚಂದ್ರು ಅವರ ಶ್ರಮ ಹಾಗೂ ಸಿನಿಮಾ ಪ್ರೀತಿ. ಆರಂಭದಲ್ಲಿ ಬಂದು ಈ ಕಥೆ ಹೇಳಿದಾಗ, “ಇದು ಆಗುತ್ತಾ, ನಿಜಕ್ಕೂ ಮಾಡುತ್ತೀರಾ’ ಎಂದು ಕೇಳಿದ್ದೆ. ಚಂದ್ರು ಧೈರ್ಯವಾಗಿ ನಿಂತು ಈ ಸಿನಿಮಾ ಮಾಡಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ’ ಎಂದರು.

Advertisement

ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಕೂಡಾ ಟೀಸರ್‌ ಹಿಟ್‌ ಸಂಭ್ರಮದಲ್ಲಿ ಭಾಗಿಯಾಗಿದ್ದರು. “ಕಬ್ಜ ಟೀಸರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ನೇಪಾಳ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಈ ಸಿನಿಮಾಕ್ಕೆ ಬೇಡಿಕೆ ಬರುತ್ತಿದೆ. ಚಂದ್ರು ಈ ಸಿನಿಮಾ ಮಾಡಲು ಎಷ್ಟು ಕಷ್ಟ ಪಟ್ಟಿದ್ದಾರೆ ಮತ್ತು ಖರ್ಚು ಮಾಡಿದ್ದಾರೆಂದು ನನಗೆ ಗೊತ್ತು. ಈ ಸಿನಿಮಾದಿಂದ ಅವರಿಗೆ ಒಳ್ಳೆಯದಾಗುತ್ತದೆ’ ಎಂದರು ಶ್ರೀಕಾಂತ್‌.

ಟೀಸರ್‌ ನೋಡಿ ಬೇರೆ ಬೇರೆ ಭಾಷೆ ಯಿಂದ ಕರೆಬರುತ್ತಿದೆ. ತಮಿಳಿನ ಸ್ಟಾರ್‌ ನಟರೊಬ್ಬರು ಕರೆ ಮಾಡಿ, ವಿಶ್‌ ಮಾಡಿದರು. ಈಗಾಗಲೇ ಸಿನಿಮಾದ ಬಿಝಿ ನೆಸ್‌ ಕುರಿತು ಮಾತುಕತೆ ಆರಂಭ ವಾಗಿದೆ.ಶೀಘ್ರದಲ್ಲೇ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುತ್ತೇನೆ.
●ಆರ್‌.ಚಂದ್ರು, ನಿರ್ದೇಶಕ

“ಕಬ್ಜ’ ಮೇಕಿಂಗ್‌ ನೋಡಿದ ನಂತರ ನಾನೀಗ, ನನ್ನ ನಿರ್ದೇಶನದ ಮೇಕಿಂಗ್‌ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಏಕೆಂದರೆ ಚಂದ್ರು ಕಬ್ಜವನ್ನು ಅಷ್ಟೊಂದು ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದ ಹಿಂದಿನ ಅವರ ಶ್ರಮವನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ.
●ಉಪೇಂದ್ರ, ನಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next