Advertisement

’83’ ಕೋವಿಡ್ ಗೆ ಬಲಿಪಶುವಾಯಿತು: ನಿರ್ಮಾಪಕ ಕಬೀರ್ ಖಾನ್ ಬೇಸರ

03:41 PM Jan 09, 2022 | Team Udayavani |

ಮುಂಬಯಿ : ಕೋವಿಡ್ ಸಾಂಕ್ರಾಮಿಕ ರೋಗ ನಮ್ಮ ಚಿತ್ರಕ್ಕೆ ತೀವ್ರವಾದ ಹೊಡೆತ ನೀಡಿದೆ, ನಮಗೆ ಹೋರಾಡಲು ಇನ್ಯಾವುದೇ ಅವಕಾಶವಿಲ್ಲ ಎಂದು ’83’ ಚಿತ್ರ ನಿರ್ಮಾಪಕ ಕಬೀರ್ ಖಾನ್ ನೋವು ಹೊರ ಹಾಕಿದ್ದಾರೆ.

Advertisement

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಖಾನ್  ಬಹು ನಿರೀಕ್ಷಿತ ಚಿತ್ರ “83” ಚಲನಚಿತ್ರವನ್ನು  “ಸಾಂಕ್ರಾಮಿಕ ಬಲಿಪಶು” ಎಂದು ಹೇಳಿದ್ದು, ನಿರ್ಬಂಧಗಳಿಂದಾಗಿ, ದೆಹಲಿ ಮತ್ತು ಹರಿಯಾಣ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ 50 ಪ್ರತಿಶತದಷ್ಟು ಥಿಯೇಟರ್ ಆಕ್ಯುಪೆನ್ಸಿ ಮತ್ತು ಚಲನಚಿತ್ರ ಮಂದಿರಗಳ ಸಂಪೂರ್ಣ ಮುಚ್ಚುವಿಕೆಯ ಹೊರತಾಗಿಯೂ ಪ್ರದರ್ಶನಗಳನ್ನು ಕಂಡಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಎರಡು ವಾರಗಳ ನಂತರ, “ಮಿಶ್ರ ಫಲಗಳ ಚೀಲ” ಎಂದು ಬಣ್ಣಿಸಿದ್ದಾರೆ.

ಕ್ರಿಕೆಟ್ ಕಥೆಯು ಅಭೂತಪೂರ್ವ ಪ್ರೀತಿಯನ್ನು ಪಡೆದಿದೆ ಎಂದು ಸಂತೋಷಪಡುತ್ತಿರುವಾಗ, ಕೊರೊನ ದಿಂದಾಗಿ ಯೋಜನೆಯ ಗಲ್ಲಾಪೆಟ್ಟಿಗೆಯ ನಿರೀಕ್ಷೆಗಳು ಹಿಟ್ ಆಗಿವೆ ಎಂಬ ಭಾವನೆಯು ವಾಸ್ತವದೊಂದಿಗೆ ಪಂಕ್ಚರ್ ಆಗಿದೆ ಎಂದಿದ್ದಾರೆ.

ತುಂಬಾ ಪ್ರೀತಿಯನ್ನು ಪಡೆದ ಈ ಚಿತ್ರವನ್ನು ರಚಿಸುವುದ್ದಕ್ಕಾಗಿ ನಾನು ಉತ್ಸುಕನಾಗಿದ್ದೇ ಆದರೆ ಅದೇ ಸಮಯದಲ್ಲಿ ಅದನ್ನು ವೀಕ್ಷಿಸಲು ಬಯಸುವ ಪ್ರತಿಯೊಬ್ಬರೂ ಇದನ್ನು ಇಂದು ನೋಡಲಾಗಲಿಲ್ಲ ಎಂಬ ನಿರಾಸೆ ಇದೆ. ನಾವು ಎರಡು ವರ್ಷಗಳ ಕಾಲ ಚಿತ್ರವನ್ನು ಪೋಷಿಸಿದೆವು, ಪ್ರತಿಯೊಬ್ಬರೂ ಅದನ್ನು ದೊಡ್ಡ ಪರದೆಯ ಮೇಲೆ ನೋಡುವಂತೆ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.

ಕೊರೊನ ದಿಂದ , ನಮ್ಮ ಅತ್ಯುತ್ತಮ ಯೋಜನೆ ಸರಿಯಾಗಿ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ. ಚಿತ್ರ ಬಿಡುಗಡೆಯ ದಿನದಂದು ಕೋವಿಡ್ ಪ್ರಕರಣಗಳ ಸ್ಫೋಟ ನಡೆಯುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಡಿಸೆಂಬರ್ 24 ರಂದು 6,000 ಪ್ರಕರಣಗಳನ್ನು ಕಂಡ ದೇಶ 10 ದಿನಗಳಲ್ಲಿ ಒಂದು ಲಕ್ಷವನ್ನು ದಾಟಿರುವುದು ದುಃಖದ ವಿಚಾರ ಎಂದು ”ಖಾನ್ ಹೇಳಿದ್ದಾರೆ.

Advertisement

“83” ಗಲ್ಲಾಪೆಟ್ಟಿಗೆಯಲ್ಲಿ ಕಡಿಮೆ ಪ್ರದರ್ಶನ ನೀಡಿದರೆ, ಅಲ್ಲು ಅರ್ಜುನ್ ಅಭಿನಯದ “ಪುಷ್ಪ: ದಿ ರೈಸ್”, ಹಾಲಿವುಡ್ ಸೂಪರ್ ಹೀರೋ ಚಿತ್ರ “ಸ್ಪೈಡರ್ ಮ್ಯಾನ್: ನೋ ವೇ ಹೋಮ್” ನೊಂದಿಗೆ ನಮ್ಮ ಚಿತ್ರದ ಘರ್ಷಣೆಯಾಯಿತು ಮತ್ತು ನಿರ್ಬಂಧ-ಮುಕ್ತ ಓಟವನ್ನು ಆನಂದಿಸುವ ಅವಕಾಶವನ್ನು ಸಹ ನಾವು ಹೊಂದಿರಲಿಲ್ಲ ಎಂದು ಖಾನ್ ಹೇಳಿದರು.

ರಣವೀರ್ ಸಿಂಗ್ ನಾಯಕತ್ವದ ಚಿತ್ರವು ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 1983 ರಲ್ಲಿ ಗಳಿಸಿದ ಮೊದಲ ವಿಶ್ವಕಪ್ ಟ್ರೋಫಿ ವಿಜಯದ ಕಥೆ ಹೊಂದಿದೆ.

ಡಿಸೆಂಬರ್ 24 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ನಂತರ “83” ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನು ಸೃಷ್ಟಿ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ದೊಡ್ಡ-ಪ್ರಮಾಣದ ಮಲ್ಟಿ-ಸ್ಟಾರರ್ ಚಿತ್ರಗಳನ್ನು ಮೀರಿಸುವಲ್ಲಿ ವಿಫಲವಾಯಿತು.ನಿರ್ಮಾಣ ಸಂಸ್ಥೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಪ್ರಕಾರ 83’ ಚಿತ್ರವು ದೇಶೀಯವಾಗಿ ಇದುವರೆಗೆ 97 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next