Advertisement

ಕಬಡ್ಡಿ ಗಂಡುಗಲಿಗಳ ದೇಶಿ ಆಟ; ಕಬಡ್ಡಿ, ಖೋಖೋ ಪಂದ್ಯಾವಳಿಗೆ ಚಾಲನೆ

06:23 PM Dec 03, 2022 | Team Udayavani |

ಕಮತಗಿ: ಕಬಡ್ಡಿ ಆಟವು ಗಂಡುಗಲಿಗಳ ದೇಶಿ ಆಟವಾಗಿದ್ದು, ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎಲ್‌.ಜಯಂತಿ ಹೇಳಿದರು.

Advertisement

ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಶ್ರೀಮತಿ ಯೋಗಿನಿದೇವಿ ಆರ್‌. ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿವಿ ವ್ಯಾಪ್ತಿಯ ಅಂತರ ಕಾಲೇಜುಗಳ ಕಬಡ್ಡಿ ಹಾಗೂ ಖೋಖೋ ಪಂದ್ಯಾವಳಿ ಹಾಗೂ ವಿವಿ ತಂಡ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪುರುಷ ಪ್ರಧಾನವಾಗಿತ್ತು. ತಂದೆ-ತಾಯಿಗಳ ಪ್ರೋತ್ಸಾಹದಿಂದ ಕಬಡ್ಡಿ ಆಟದಲ್ಲಿ ಮಹಿಳೆಯರು ಸಕ್ರಿಯರಾಗಿರುವುದು ನೇಪಥ್ಯಕ್ಕೆ ಸರಿಯುವ ಹಂತದಲ್ಲಿದ್ದ ಕಬಡ್ಡಿ ಆಟವು ಮತ್ತೆ ತನ್ನ ವೈಭವವನ್ನು ಉಳಿಸಿಕೊಂಡಿದೆ. ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕ್ರೀಡೆಯಲ್ಲಿ ಸಕ್ರಿಯರಾಗುವುದು. ಕ್ರೀಡಾಸ್ಫೂರ್ತಿಯನ್ನು ಮೆರೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣ ಎಂದರು.

ಕ್ರೀಡಾಜ್ಯೋತಿಗೆ ಚಾಲನೆ ನೀಡಿದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ| ಸಕಾ³ಲ್‌ ಹೂವಣ್ಣ ಮಾತನಾಡಿ, ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದರಿಂದ ಕ್ರೀಡಾಪಟು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ರೀಡೆಗೆ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರೋತ್ಸಾಹ-ನೆರವು ದೊರೆಯುತ್ತಿದೆ. ಇದರಿಂದ ಕ್ರೀಡಾಕ್ಷೇತ್ರವು ಬಲಿಷ್ಠವಾಗಲು ಸಾಧ್ಯವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡುತ್ತಿದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಕ್ರೀಡೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಸಕ್ರಿಯರಾಗಬೇಕು ಎಂದು ಕರೆ ನೀಡಿದರು.

ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಹಾಗೂ ಕುಂದರಗಿಯ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ಕುಮಚಗಿ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ವಿದ್ಯಾಧರ ಆರ್‌. ಮಳ್ಳಿ, ಆಡಳಿತಾಧಿಕಾರಿ ಅನಿಲಕುಮಾರ ಎಸ್‌. ಕಲ್ಯಾಣಶೆಟ್ಟಿ, ಯುವ ಉದ್ಯಮಿ ಸಾಯಿಕಿರಣ ಸರಡಗಿ, ಪ್ರವೀಣ ಹೆರೂರ, ಪಪಂ ಸದಸ್ಯ ದೇವಿಪ್ರಸಾದ ನಿಂಬಲಗುಂದಿ, ಮಾಜಿ ಸದಸ್ಯ ಸಿದ್ದು ಹೊಸಮನಿ, ಬಿಜೆಪಿ ಅಧ್ಯಕ್ಷ ಗಂಗಾಧರ ಕ್ಯಾದಿಗ್ಗೇರಿ, ಕಾಲೇಜಿನ ಪ್ರಾಚಾರ್ಯ ಡಾ| ಶ್ರೀದೇವಿ ರೆಡ್ಡಿ, ಕ್ರೀಡಾ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಲಾಯದಗುಂದಿ, ಮುಖ್ಯೋಪಾಧ್ಯಾಯ ಎಸ್‌.ವಿ. ಶೆಟ್ಟರ, ಪ್ರಾಚಾರ್ಯರಾದ ಎಸ್‌.ವಿ.ಬಾಗೇವಾಡಿ, ಪಿ.ಎಂ.ಗುರುವಿನಮಠ, ಉಪನ್ಯಾಸಕರಾದ ಎ.ಎಚ್‌. ಮಲಘಾಣ, ಜಿ.ಎಲ್‌. ವಾಲಿಕಾರ, ಶ್ರೀಮತಿ ಎಸ್‌.ವಿ. ಕಲ್ಮನಿ ಸೇರಿದಂತೆ ಮತ್ತಿತರರು ಇದ್ದರು.

Advertisement

ಹೇಮಲತಾ ಬಾಗಲಕೋಟೆ ಪ್ರಾರ್ಥಿಸಿದರು. ಪೂಜಾ, ಕಮ್ಮಾರ, ಗೀತಾ ಉಮಚಗಿ, ಹುಚ್ಚೇಶ ಲಾಗುಯದಗುಂದಿ, ಬಸವರಾಜ ನಿಡಗುಂದಿ ನಿರೂಪಿಸಿದರು. ಉಪನ್ಯಾಸಕ ಕಲ್ಯಾಣ ಎಸ್‌. ಭಜಂತ್ರಿ ಪರಿಚಿಯಿಸಿದರು. ಉಪನ್ಯಾಸಕ ಬಿ.ಎಚ್‌. ಕಂಬಾಳಿಮಠ ಸ್ವಾಗತಿಸಿದರು. ಕ್ರೀಡಾ ಸಹಸಂಘಟನಾ ಕಾರ್ಯದರ್ಶಿ ಎ.ಎಚ್‌. ಮಲಘಾಣ ವಂದಿಸಿದರು.

ಹೆಣ್ಣು ಮಕ್ಕಳು ಖೋಖೋ, ಕಬಡ್ಡಿಯಂತಹ ಗಂಡುಗಲಿಗಳ ಆಟದಲ್ಲಿ ಸಕ್ರಿಯರಾಗಿರುವುದು ತಂದೆ-ತಾಯಿಗಳ ಪ್ರೋತ್ಸಾಹವೇ ಕಾರಣವಾಗಿದೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಕ್ರೀಡೆಯು ಎತ್ತರಕ್ಕೆ ಬೆಳೆಸುತ್ತದೆ.
ಎಲ್‌. ಜಯಂತಿ, ಅಂತಾರಾಷ್ಟ್ರೀಯ
ಮಹಿಳಾ ಕಬಡ್ಡಿ ಪಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next