Advertisement
ಕಾವ್ರಾಡಿ ಸೇರಿದಂತೆ ಈ ಪಂಚಾಯತ್‌ಗೆ ವ್ಯಾಪ್ತಿಗೆ ಹಳನಾಡು ಗ್ರಾಮವೂ ಸೇರಿವೆ. ಈ ಹಿಂದೆ ಕಾವ್ರಾಡಿ, ವಾಲೂ¤ರು, ಕಂಡೂÉರು ಗ್ರಾಮಗಳು ಬೇರೆ ಬೇರೆ ಇದ್ದು, ಬ್ರಿಟಿಷರ ಕಾಲದಲ್ಲಿ ಇವೆಲ್ಲವೂ ಸೇರಿ ಕಾವ್ರಾಡಿ ಗ್ರಾಮವಾಗಿ ಬದಲಾಗಿದೆ. ಹಳನಾಡು ಗ್ರಾಮಕ್ಕೆ 67 ಹಾಗೂ ಕಾವ್ರಾಡಿ ಗ್ರಾಮಕ್ಕೆ 68 ಎಂದು ನಮೂದಿಸಲಾಗಿದ್ದು, ಇಲ್ಲಿ 5,800ರಷ್ಟು ಜನಸಂಖ್ಯೆಯೂ ಇದೆ. ಇಲ್ಲಿ ಕಂಡೂÉರು ಹೊಳೆ ಇಲ್ಲಿ ಹರಿಯುತ್ತಿದ್ದರೂ, ಬೇಸಗೆಯಲ್ಲಿ ನೀರಿನ ಕೊರತೆ ಕಾಡುತ್ತದೆೆ.
ಈ ವ್ಯಾಪ್ತಿಯ ವಾಲೂ¤ರು, ಹಳ್ನಾಡು, ಬಡಾಬೆಟ್ಟು, ಮುಳಳುಗುಡ್ಡೆ, ಕಾವ್ರಾಡಿ, ನೆಲ್ಲಿಕಟ್ಟೆ ಮೊದಲಾದೆಡೆ ಮಾರ್ಚ್ ಅಂತ್ಯದಿಂದ ಬೇಸಗೆ ಮುಗಿಯುವವರೆಗೆ ಕುಡಿಯುವ ನೀರಿಗೆ ತಾತ್ವಾರ ಉಂಟಾಗುತ್ತದೆ. ಹಳ್ನಾಡಿನ ಆಚಾರಿಬೆಟ್ಟು ಎಂಬಲ್ಲಿ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಬಾವಿ ತೆಗೆಸಿದೆ. ಕಳೆದ ಬಾರಿ ವಾಲೂ¤ರಿನ ಶೇ.50ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಟ್ಯಾಂಕರ್ ಮೂಲಕ ಮಾಡಲಾಗುತ್ತಿತ್ತು. ಈಗ ಅದರಲ್ಲಿ ಅರ್ಧದಷ್ಟು ಸಮಸ್ಯೆ ನಿವಾರಣೆಯಾಗಿದೆ. ಮುಂಬಾರಿನಲ್ಲಿ ಟ್ಯಾಂಕ್ ರಚನೆ ಮಾಡಿ ಪಡುವಾಲೂ¤ರು ಬಾವಿಗೆ ನೀರು ಹರಿಸಿ ಅದನ್ನು ಮೂಡುವಾಲೂ¤ರಿನ ಜನರಿಗೆ ನೀಡಲಾಗುತ್ತಿದೆ. ಇದರಿಂದಾಗಿ ಕುಲಾಲಕೇರಿ, ತೊಪುÉ ಪ್ರದೇಶದ ಜನರಿಗೆ ಒಂದಷ್ಟು ಬರದ ಹೊರೆ ಕಡಿಮೆಯಾಗಲಿದೆ. ತೆರೆದ ಬಾವಿಗಳ ನೀರು ಕುಡಿಯಲು ಉಪಯೋಗಕ್ಕೆ ದೊರೆಯುತ್ತಿರುವುದು ಇಲ್ಲಿನ ವಿಶೇಷ. ಆದರೆ ಕಂಡೂÉರು ಹೊಳೆ ಇದ್ದರೂ ಕುಡಿಯುವ ನೀರಿನ ಮಟ್ಟಿಗೆ ಅಷ್ಟು ಫಲಪ್ರದವಾಗಿ ಪರಿಣಮಿಸಿಲ್ಲ.
Related Articles
ಕಳೆದ ಬಾರಿ ಸಮಸ್ಯೆ ಆಗಿದ್ದನ್ನು ಮನಗಂಡು ಅಲ್ಲಿಗೆ ಬದಲಿ ವ್ಯವಸ್ಥೆ ಮಾಡಿ ಸಮಸ್ಯೆಯನ್ನು ತಗ್ಗಿಸಲಾಗಿದೆ. ಒಂದೇ ಬಾರಿ ಎಲ್ಲ ಸಮಸ್ಯೆ ನಿವಾರಿಸಲು ಅನುದಾನ ಕೊರತೆ ಇರುವ ಕಾರಣ ಹಂತ ಹಂತವಾಗಿ ವ್ಯವಸ್ಥೆ ಮಾಡಲಾಗುತ್ತಿದೆ.
– ಎಚ್. ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು
Advertisement
ಟ್ಯಾಂಕರ್ ನೀರುಸಮಸ್ಯೆ ಆದಲ್ಲಿ ತತ್‌ಕ್ಷಣ ಸ್ಪಂದಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಈ ಬಾರಿ ಕಳೆದ ಬೇಸಗೆಯಷ್ಟು ನೀರು ಬೇಕಾಗದಂತೆ ಬದಲಿ ವ್ಯವಸ್ಥೆ ಪಂಚಾಯತ್ ಅನುದಾನ ಹಾಗೂ ಜಿ.ಪಂ. ಅನುದಾನ ಮೂಲಕ ಮಾಡಲಾಗಿದೆ.
– ಗೀತಾ ಪಂ. ಅಭಿವೃದ್ಧಿ ಅಧಿಕಾರಿ