Advertisement

ಕೀರ್ತಿ ಭಟ್.. ”ಕಾಣೆಯಾದವಳ” ಹುಡುಕಾಟ ಶುರು…

12:51 PM Dec 08, 2021 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಕಾಣೆಯಾಗಿದ್ದಾಳೆ…’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್‌ ಮಾಡುವ ಮೂಲಕ ಹೊಸಬರ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

Advertisement

“ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗತ್ತಿರುವ, “ಕಾಣೆಯಾಗಿದ್ದಾಳೆ…’ ಚಿತ್ರಕ್ಕೆ ಆರ್‌. ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿನಯ್‌ ಕಾರ್ತಿಕ್‌, ಕೀರ್ತಿ ಭಟ್‌ ಜೋಡಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಗಿರಿಜಾ ಲೋಕೇಶ್‌, ವಿನಯಾ ಪ್ರಸಾದ್‌, ಬಿರಾದಾರ್‌, ಜಯರಾಂ, ಅಂಜನಾ ಮುಂತಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಮಂಡ್ಯ ಮತ್ತು ಬೆಂಗಳೂರು ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ. ಅರ್ಧ ನೈಜ ಘಟನೆ ಮತ್ತು ಅರ್ಧ ಕಾಲ್ಪನಿಕ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಐಎಎಸ್‌ ಮಾಡುವ ಸಲುವಾಗಿ ಹಳ್ಳಿ ಹುಡುಗಿಯೊಬ್ಬಳು ನಗರಕ್ಕೆ ಬರುತ್ತಾಳೆ. ಹೀಗೆ ಬಂದ ಹುಡುಗಿ ಹಳ್ಳಿಗೆ ವಾಪಾಸಾಗುವುದಿಲ್ಲ. ಆ ಹುಡುಗಿಯನ್ನು ಹುಡುಕಿಕೊಂಡು ಹೀರೋ ಮತ್ತವನ ಸ್ನೇಹಿತರು ಸಿಟಿಗೆ ಬರುತ್ತಾರೆ. ಮುಂದೇನಾಗುತ್ತದೆ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು’ ಎಂದು ಕಥಾಹಂದರ ಎಳೆಯನ್ನು ಬಿಟ್ಟುಕೊಟ್ಟಿತು.

“ಕಾಣೆಯಾಗಿದ್ದಾಳೆ…’ ಚಿತ್ರದ ಟೈಟಲ್‌ಗೆ “ಹುಡುಕಿಕೊಟ್ಟವರಿಗೆ ಬಹುಮಾನ’ ಎಂಬ ಟ್ಯಾಗ್‌ಲೈನ್‌ ಇದೆ. ಬೆಂಗಳೂರು, ಮಂಡ್ಯ, ಸಾಗರ ಮುಂತಾದ ಕಡೆಗಳಲ್ಲಿ “ಕಾಣೆಯಾಗಿದ್ದಾಳೆ…’ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಚಿತ್ರದ ಹಾಡುಗಳಿಗೆ ಕೌಶಿಕ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ನಾಗರಾಜ್‌ ಛಾಯಾಗ್ರಹಣ ಹಾಗೂ ಶಿವರಾಜ್‌ ಮೇಹು ಅವರ ಸಂಕಲನವಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಚಿತ್ರತಂಡ ಮುಂದಿನ ವರ್ಷದ ಮಧ್ಯಭಾಗದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next