Advertisement

K.Venakatesh;ನಿಮ್ಮ ಚಲನವಲನಕ್ಕಾಗಿ ಏಜೆಂಟ್ ಇಟ್ಟಿಲ್ಲ: ಅಧಿಕಾರಿಗಳಿಗೆ ಎಚ್ಚರಿಕೆ

05:16 PM Jun 05, 2023 | Team Udayavani |

ಪಿರಿಯಾಪಟ್ಟಣ: ಅಧಿಕಾರಿಗಳ ಚಲನವಲನದ ಮೇಲೆ ಕಣ್ಣಿಡಲು ತಾಲ್ಲೂಕಿನಲ್ಲಿ ನಾನು ಏಜೆಂಟುಗಳನ್ನು ಇಟ್ಟಿಲ್ಲ,ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರ ಕೆಲಸ ಮಾಡುವ ಅಧಿಕಾರಿಗಳಿಗೆ ಸದಾ ನನ್ನ ಬೆಂಬಲ ಮತ್ತು ಸಹಕಾರವಿದೆ ಎಂದು ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತ ಪ್ರಗತಿ ಪರಿಶೀಲಿ ಸಭೆಯಲ್ಲಿ ಮಾತನಾಡಿದರು. ಹಿಂದಿನ ಶಾಸಕರು ಹಾಗೂ ಅಧಿಕಾರಿಗಳು ಸೇರಿ ತಾಲ್ಲೂಕಿನಲ್ಲಿ ಏನೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಮಾಹಿತಿ ನನಗಿದೆ, ವಿವಿಧ ಇಲಾಖೆಗಳ ಸೌಲಭ್ಯಗಳ ಹಂಚಿಕೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರೆ ಹಾವಳಿಗೆ ತುತ್ತಾಗಿ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ವಿಷಯದಲ್ಲಿ ಅರ್ಹ ಫಲಾನುಭವಿಗಳನ್ನು ವಂಚಿಸಿ ಕೇವಲ ತಮ್ಮ ಪಕ್ಷ ಬೆಂಬಲಿತರು ಎಂಬ ಕಾರಣಕ್ಕೆ ಮಾಜಿ ಶಾಸಕ ಹೇಳಿದವರಿಗೆ ಹಾಗೂ ಯಾವುದೇ ಮನೆ ಕಳೆದುಕೊಳ್ಳದವರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವೈಜ್ಞಾನಿಕವಾಗಿ ಮನೆಗಳಿಗೆ ಪರಿಹಾರ ನೀಡಲಾಗಿದ್ದು, ಇದನ್ನು ಮರು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಅರ್ಹರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು .

ತಾಲೂಕಿನಲ್ಲಿ ಅನೇಕ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿ ಕೊಡಲು ಜನರನ್ನು ವಿನಃ ಕಾರಣ ಅಲೆದಾಡಿಸುವುದು, ಹಣಕ್ಕಾಗಿ ಬೇಡಿಕೆ ಇಡುವುದು ನನ್ನ ಗಮನದಲ್ಲಿದೆ ಆದ್ದರಿಂದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ನನ್ನ ಈ ಮಾತನ್ನು ಅಧಿಕಾರಿಗಳು
ಸಲಹೆ ಎಂದು ಬೇಕಾದರೂ ಸ್ವೀಕರಿಸಿ ಇಲ್ಲ ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಿ ಒಟ್ಟಿನಲ್ಲಿ ಜನರ ಕೆಲಸ ಮಾಡಬೇಕು ಇದಕ್ಕೆ ಒಪ್ಪದವರು ತಾವಾಗಿಯೇ ತಾಲ್ಲೂಕನ್ನು ಬಿಟ್ಟು ಹೊರಡುವಂತೆ ತಿಳಿಸಿದರು.

ಪಟ್ಟಣದ ಪುರಸಭೆಗೆ ಬರುವ ಸಾರ್ವಜನಿಕರ ಜೇಬು ಖಾಲಿ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ದುಡ್ಡಿಲ್ಲದೆ ಇಲ್ಲಿ ಯಾವುದೇ ಕೆಲಸ ಆಗುವುದಿಲ್ಲ ಎಂಬ ಧೋರಣೆ ಜನರಲ್ಲಿದೆ ಇದು ಬದಲಾಗಬೇಕು ಇಲ್ಲದಿದ್ದರೆ ಅಂಥವರಿಗೆ ಬುದ್ದಿ ಕಲಿಸಲಾಗುವುದು. ಕಚೇರಿಗಳಲ್ಲಿ ಅಧಿಕಾರಿಗಳು ಮಾಡುವ ಕೆಲಸಗಳು ನನಗೇನು ಗೊತ್ತಾಗಲ್ಲ ಎಂದು ಲಂಚಕ್ಕೆ ಕೈಚಾಚ ಬೇಡಿ, ಮುಂದೆ ಒಂದು ಹಿಂದೆ ಒಂದು ಮಾಡುವ ಸ್ವಭಾವ ನನ್ನದಲ್ಲ ಸದಾ ಜನರ ಪರ ಕೆಲಸ ಮಾಡಿ, ನೀವು ಜನರ ಕೆಲಸವನ್ನು ಸರಿಯಾಗಿ ಮಾಡಿದರೆ ನನಗೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ ಕಡಿಮೆಯಾಗುತ್ತದೆ, ಒಳ್ಳೆಯ ಆಡಳಿತಕ್ಕೆ ನೀವು ಸಿದ್ದರಾಗುವ ಮೂಲಕ ಜನರ ಕೆಲಸ ಮಾಡಿ.

ದುಡ್ಡಿನ ಆಸೆಯಿಂದ ಜನರನ್ನು ಅಲೆದಾಡಿಸುವ ಕೆಲಸ ಮಾಡಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ನನ್ನ ಸಹಕಾರವಿದೆ ಜನರಿಗೆ ಹಿಂಸೆ ನೀಡದೆ ಕೆಲಸ ಮಾಡುವವರಿಗೆ ನನ್ನ ಬೆಂಬಲವಿದೆ ಸರ್ಕಾರಿ ಕಚೇರಿಗಳು ಲಂಚದಿಂದ ಮುಕ್ತವಾಗಬೇಕು ಎಂದು ಹಿತ ವಚನ ಹೇಳಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಣ್ಣ, ಶಿರಸ್ತೇದಾರ್ ನಂದಕುಮಾರ್, ಟ್ರೀಜಾ ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್, ಆರ್ಎಫ್ಓ ರತನ್ ಕುಮಾರ್, ಎಡಿಎಲ್ಆರ್ ಮುನಿಯಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಸಿದ್ದೇಗೌಡ, ಧರ್ಮರಾಜ್, ಡಾ.ಶರತ್ ಬಾಬು, ಮಧು, ಪುಷ್ಪಲತಾ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next