Advertisement

ಇಂದು ಕೆ-ಸೆಟ್‌ ಫ‌ಲಿತಾಂಶ

01:08 AM Jan 09, 2021 | Team Udayavani |

ಮೈಸೂರು: ಕಳೆದ ಸೆಪ್ಟಂಬರ್‌ನಲ್ಲಿ ಮೈಸೂರು ವಿವಿ ನಡೆಸಿದ್ದ ಕರ್ನಾಟಕ ರಾಜ್ಯ ಸಹಾ ಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಫ‌ಲಿತಾಂಶ ಜ.9ರಂದು ಪ್ರಕಟವಾಗಲಿದ್ದು, ಪರೀಕ್ಷೆ ಬರೆದ 79,717 ಅಭ್ಯರ್ಥಿಗಳ ಪೈಕಿ 5,495 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ| ಜಿ. ಹೇಮಂತ ಕುಮಾರ್‌ ತಿಳಿಸಿದರು.

Advertisement

ಶುಕ್ರವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಯುಜಿಸಿ ಪರಿಶೀಲನ ಸಮಿತಿ ಸದಸ್ಯರು ಪರಿಶೀಲಿಸಿ ಫ‌ಲಿತಾಂಶ ಬಿಡುಗಡೆಗೆ ಅನುಮತಿ ನೀಡಿದ್ದು, ಜ.9ರಂದು ಪ್ರಕಟಿಸಲಾಗುತ್ತಿದೆ. 2019ರಲ್ಲಿ ಶೇ.6.96 ಫ‌ಲಿತಾಂಶ ಬಂದಿದ್ದು, ಈ ಬಾರಿ ಶೇ.6.89ರಷ್ಟು ಬಂದಿದೆ ಎಂದರು.

ಮಾರ್ಚ್‌ಗೆ ಕೆ-ಸೆಟ್‌ ಸಾಧ್ಯತೆ : 
ಕಳೆದ ಬಾರಿ ಕೋವಿಡ್‌ನಿಂದ ತಡವಾಗಿ ಕೆ-ಸೆಟ್‌ ಪರೀಕ್ಷೆ ನಡೆಸ ಲಾಗಿತ್ತು. ಹಾಗಾಗಿ ಈ ಬಾರಿ ಮಾರ್ಚ್‌ ವೇಳೆಗೆ ಕೆ-ಸೆಟ್‌ ಪರೀಕ್ಷೆ ನಡೆಸಲಾಗುವುದು ಎಂದರು.

ನೋಡಲ್‌ ಕೇಂದ್ರ ಫ‌ಲಿತಾಂಶ : 
ಬೆಂಗಳೂರಲ್ಲಿ-1,133, ಬೆಳ ಗಾವಿ- 200, ಬಳ್ಳಾರಿ- 332, ವಿಜಯ ಪುರ-255, ದಾವಣಗೆರೆ- 274, ಧಾರವಾಡ- 668, ಕಲಬುರಗಿ-464, ಮಂಗಳೂರು-391, ಮೈಸೂರು- 1,248, ಶಿವಮೊಗ್ಗ-296, ತುಮಕೂರು – 234 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next