Advertisement

ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

03:31 PM Jun 19, 2022 | Team Udayavani |

ಶಿವಮೊಗ್ಗ : ಅಗ್ನಿಪಥ್ ಯೋಜನೆ ವಿಚಾರವಾಗಿ ರೈಲು ಸುಟ್ಟಿದ್ದಾರೆ, ಈಡಿ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ನಿರುದ್ಯೋಗಿ ಯುವಕರನ್ನು ಯಾಕೆ ಹೀಗೆ ದಾರಿ ತಪ್ಪಿಸುತ್ತಿದ್ದೀರಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ಗೆ ಪ್ರಶ್ನಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ ಎಂದರು.

21 ವರ್ಷಕ್ಕೆ ಯುವಕ ಮದುವೆಯಾಗಿ ಮಕ್ಕಳು ಮಾಡ್ತಾನೆ. ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ, ಇದು ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆಗಿದ್ದರು? 18 ವರ್ಷವಾದ ಯುವಕರು ಮತ ಚಲಾಯಿಸಿ, ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ. ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಇಡಿ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಭಟನೆಗೆ ಅವಕಾಶವಿದೆ. ಆದರೆ ರಾಹುಲ್ ಗಾಂಧಿ ವಿಚಾರಣೆಗೆ ಕರೆದರೆ ತಪ್ಪಾ? ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇ ಬೇಡಿ ಎಂದು ನಿಮ್ಮ ಎಐಸಿಸಿ ಯಲ್ಲಿ ಒಂದು ರೆಸ್ಯೂಲುಷನ್ ಮಾಡಿಬಿಡಿ. ಅದರಲ್ಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ಟೀಕಿಸಿದರು.

ಇಂತಹ ಘಟನೆಗಳಿಂದಲೇ ಕಾಂಗ್ರೆಸ್ ಇಡೀ ದೇಶದಲ್ಲಿ ಸೋಲುತ್ತಿದೆ. ಕಾಂಗ್ರೆಸ್ ಗಂಧ ಗಾಳಿಯೇ ಇಲ್ಲದ ಸಿದ್ದರಾಮಯ್ಯ, ಡಿಕೆಶಿ, ನಲಪಾಡ್ ಅಂತಹವರ ಕೈಯಲ್ಲಿ ಸಿಕ್ಕಿ ಕಾಂಗ್ರೆಸ್ ನರಳುತ್ತಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

Advertisement

ಇದನ್ನೂ ಓದಿ:ಅಗ್ನಿವೀರ್ ನೋಂದಣಿ ಜೂನ್ 24 ರಿಂದ; ಬೆಂಕಿ ಹಚ್ಚುವವರಿಗೆ ಜಾಗವಿಲ್ಲ

ಮೋದಿ ಮೈಸೂರು ಭೇಟಿಗೆ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೋದಿ ರಾಜಕಾರಣ ಮಾಡದೆ ಪೇಪರ್ ಮೆಂಟ್ ಹಂಚಲು ಬರುತ್ತಾರಾ? ಯುವಕರು ಆರೋಗ್ಯವಂತರಾಗಿ ಸದೃಢವಾಗಿ ಇರಲಿ ಅಂತಾ ಯೋಗ ಬಗ್ಗೆ ಪ್ರಚಾರ ಮಾಡಲು ಬರುತ್ತಿದ್ದಾರೆ. ಮೋದಿ ರಾಜಕಾರಣವೂ ಮಾಡುತ್ತಾರೆ, ಅಭಿವೃದ್ಧಿ ಕೆಲಸವನ್ನು ಮಾಡುತ್ತಾರೆ ಎಂದರು.

ಪಠ್ಯ ಪುಸ್ತಕ ಹರಿದು ಡಿಕೆಶಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಮಾತನಾಡಿದ ಈಶ್ವರಪ್ಪ, ಪಠ್ಯ ಪುಸ್ತಕ ಹರಿದರೆ ಸರಸ್ವತಿಗೆ ಅವಮಾನ ಮಾಡಿದ ಹಾಗೆ. ಕೈಯಲ್ಲಿ ಆಗದಿರುವವರು ಮೈಯೆಲ್ಲಾ ಪರಚಿಕೊಂಡ್ರು ಅನ್ನುವ ಹಾಗೆ ಏನೂ ಕೆಲಸ ಇಲ್ಲದಿರುವವರು ಈ ರೀತಿ‌ ಮಾಡ್ತಾರಷ್ಟೇ. ಹೀಗೆ ಮಾಡಿದರೆ ಕಾಂಗ್ರೆಸ್ ಜೀರೋ ಅಗುತ್ತದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next